Allu Arjun: ಚಿತ್ರರಂಗಕ್ಕೆ ಕಾಲಿಟ್ಟ 'ಸ್ಟೈಲಿಶ್ ಸ್ಟಾರ್' ನಟ ಅಲ್ಲು ಅರ್ಜುನ್ ಮುದ್ದಿನ ಮಗಳು ಅರ್ಹಾ!

'ಸ್ಟೈಲಿಶ್ ಸ್ಟಾರ್' ನಟ ಅಲ್ಲು ಅರ್ಜುನ್ ಮುದ್ದಿನ ಮಗಳು ಅರ್ಹಾ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಅರ್ಹಾ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಆ ಚಿತ್ರದಲ್ಲಿ ಇನ್ನೂ ಯಾರು ಯಾರು ನಟಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

Allu Arjun: ಚಿತ್ರರಂಗಕ್ಕೆ ಕಾಲಿಟ್ಟ 'ಸ್ಟೈಲಿಶ್ ಸ್ಟಾರ್' ನಟ ಅಲ್ಲು ಅರ್ಜುನ್ ಮುದ್ದಿನ ಮಗಳು ಅರ್ಹಾ!
Linkup
'ಸ್ಟೈಲಿಶ್ ಸ್ಟಾರ್' ನಟ ಕುಟುಂಬಸ್ಥರೆಲ್ಲರೂ ಸಿನಿಮಾದಲ್ಲಿ ನಟನೆ, ನಿರ್ಮಾಣ ಮಾಡುತ್ತ ಸಿನಿ ರಂಗದಲ್ಲಿ ಬ್ಯುಸಿಯಿದ್ದಾರೆ. ಈ ನಡುವೆ ಅರ್ಜುನ್ ಪತ್ನಿ ಸ್ನೇಹಾ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆದರೆ ಅರ್ಜುನ್ ಮುದ್ದಿನ ಪುತ್ರಿ ಅರ್ಹಾ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಗಳು ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಅರ್ಜುನ್ ಮಾಹಿತಿ ನೀಡಿದ್ದು, "ಶಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ಜನರೇಶನ್‌ ಚಿತ್ರರಂಗಕ್ಕೆ ಕಾಲಿಡುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಶಕುಂತಲಂ ಸಿನಿಮಾದಲ್ಲಿ ಅರ್ಹಾ ನಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಗುಣಶೇಖರ್ ಹಾಗೂ ನೀಲಿಮಾಗೆ ಧನ್ಯವಾದ ತಿಳಿಸುವೆ. ಈ ಚಿತ್ರದಲ್ಲಿ ಸಮಂತಾ ಅಕ್ಕಿನೇನಿ ಕೂಡ ನಟಿಸಲಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದು ಹೇಳಿದ್ದಾರೆ. " ಮುದ್ದಿನ ಅರ್ಹಾ ಶಕುಂತಲಂ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಅವಳು ನಾವು ಹೆಮ್ಮೆಪಡುವಂತೆ ಮಾಡುತ್ತಾಳೆ ಎಂದು ನನಗೆ ಗೊತ್ತಿದೆ" ಎಂದು ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಈಗಾಗಲೇ ಅರ್ಹಾ 'ಶಕುಂತಲಂ' ಸಿನಿಮಾ ಸೆಟ್ ಸೇರಿಕೊಂಡಿದ್ದು 10 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾಳೆ. ಸಿನಿಮಾ ಕಥೆ ಕೇಳಿ ಅರ್ಹಾ ಚಿತ್ರರಂಗಕ್ಕೆ ಕಾಲಿಡಲು 'ಶಕುಂತಲಂ' ಸಿನಿಮಾ ಸರಿಯಾಗಿದೆ ಎಂದು ಅಲ್ಲು ಕುಟುಂಬ ನಿರ್ಧಾರಕ್ಕೆ ಬಂದಿದೆ. ಅಲ್ಲು ಅರ್ಹಾಗೆ ಈಗ 4 ವರ್ಷ. ಮಗಳ ಮುದ್ದಾದ ಫೋಟೋ, ವಿಡಿಯೋಗಳನ್ನು ಅಲ್ಲು ಅರ್ಜುನ್ ಹಾಗೂ ಸ್ನೇಹಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಅರ್ಜುನ್ ಹಾಗೂ ಅರ್ಹಾರ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಒಟ್ಟಿನಲ್ಲಿ ಅರ್ಹಾರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದಿದ್ದಾರೆ.