Aishani Shetty: ‘ಧರಣಿ ಮಂಡಲ ಮಧ್ಯದೊಳಗೆ' ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ಐಶಾನಿ ಶೆಟ್ಟಿ

'ವಾಸ್ತು ಪ್ರಕಾರ' ಸಿನಿಮಾ ನಟಿ ಐಶಾನಿ ಶೆಟ್ಟಿ ಅವರು 'ಹೊಂದಿಸಿ ಬರೆಯಿರಿ', ‘ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Aishani Shetty: ‘ಧರಣಿ ಮಂಡಲ ಮಧ್ಯದೊಳಗೆ' ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ಐಶಾನಿ ಶೆಟ್ಟಿ
Linkup
( ಹರೀಶ್‌ ಬಸವರಾಜ್‌ ) 'ವಾಸ್ತು ಪ್ರಕಾರ' ಸಿನಿಮಾದಲ್ಲಿನ ಸಹಜ ನಟನೆಯಿಂದಾಗಿ ಪಡ್ಡೆ ಹುಡುಗರ ಮನಸ್ಸು ಗೆದಿದ್ದ ನಟಿ ಐಶಾನಿ ಎರಡು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಆ ಎರಡು ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಲಿವೆ ಎಂಬ ನಂಬಿಕೆಯಲ್ಲಿದ್ದಾರೆ. ಐಶಾನಿ ಕನ್ನಡದ ಪ್ರತಿಭಾವಂತ ನಟಿಯರಲ್ಲಿಒಬ್ಬರು. ವಾಸ್ತು ಪ್ರಕಾರ, ರಾಕೆಟ್‌, ನಡುವೆ ಅಂತರವಿರಲಿ ಸಿನಿಮಾಗಳಲ್ಲಿ ನಟಿಸಿದ ನಂತರ ಅವರು ತಾವೇ ‘ಖಾಜಿ’ ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಆ ಕಿರುಚಿತ್ರಕ್ಕೆ ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಯನ್ನು ಸಹ ಐಶಾನಿ ಪಡೆದುಕೊಂಡಿದ್ದರು. ಈಗ ‘’, ‘’ ಎಂಬ ಸಿನಿಮಾಗಳಲ್ಲಿವಿಭಿನ್ನ ಶೈಲಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮೂರು ಲುಕ್‌ಗಳ 'ಹೊಂದಿಸಿ ಬರೆಯಿರಿ' ( ) ಜಗನ್ನಾಥ್‌ ರಾಮೇನಹಳ್ಳಿ ನಿರ್ದೇಶನ ಮಾಡಿರುವ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ನಾನು ಮೂರು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಸನಿಹ ಎಂಬ ಮೆಕ್ಯಾನಿಕಲ್‌ ಎಂಜಿನಿಯರ್‌ ವಿದ್ಯಾರ್ಥಿನಿಯ ಪಾತ್ರ ಅದಾಗಿದ್ದು, 12 ವರ್ಷದ ಬದುಕನ್ನು ಅದು ತೋರಿಸುತ್ತದೆ. ಸೈಂಟಿಸ್ಟ್‌ ಆಗಬೇಕು ಎಂಬ ಆಸೆ ಇಟ್ಟುಕೊಂಡಿರುವ ಮಹತ್ವಾಕಾಂಕ್ಷೆಯ ಪಾತ್ರವದು’ ಎಂದಿದ್ದಾರೆ ಐಶಾನಿ. ‘ನಿರ್ದೇಶಕರು ಕಥೆ ಹೇಳಲು ಬಂದಾಗಲೇ ಸ್ಟೋರಿ ಬೋರ್ಡ್‌ ಸಮೇತ ಬಂದಿದ್ದರು. ಸಿನಿಮಾ ಹೀಗಿರುತ್ತದೆ ಎಂಬುದನ್ನು ಕಥೆ ಹೇಳುವಾಗಲೇ ಎಲ್ಲರಿಗೂ ತಿಳಿಸಿದ್ದರು. ಈ ಚಿತ್ರದಲ್ಲಿಪ್ರವೀಣ್‌ ತೇಜ್‌, ಆರ್ಚನಾ, ಶ್ರೀ ಮಹಾದೇವ್‌, ಭಾವನಾ ನಟಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ ಐಶಾನಿ. ಬೋಲ್ಡ್‌ ಪಾತ್ರ ( ) ‘ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾದಲ್ಲಿ ( ) ನಾನು ಇದುವರೆಗೂ ನಿರ್ವಹಿಸದೇ ಇರುವಂತಹ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ನಿಜ ಜೀವನಕ್ಕೂ ಈ ಪಾತ್ರಕ್ಕೂ ಅಜಗಜಾಂತರವಿದೆ. ಸಿಕ್ಕಾಪಟ್ಟೆ ಬೋಲ್ಡ್‌ ಆಗಿ, ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಮಾತನಾಡುವಂತಹ ಪಾತ್ರವದು. ನನ್ನ ಬಳಿ ಈ ಪಾತ್ರ ಬಂದಾಗ ನಾನು ಇದಕ್ಕೆ ಸೂಟ್‌ ಆಗುತ್ತೇನಾ ಎಂಬ ಅನುಮಾನ ನನಗಿತ್ತು. ಆದರೆ ನಿರ್ದೇಶಕರು ಮತ್ತು ಚಿತ್ರತಂಡ ನಿಮ್ಮ ಕೈಲಿ ಇದಾಗುತ್ತದೆ, ನೀವೇ ಮಾಡಬೇಕು ಎಂದು ಹೇಳಿ ಮಾಡಿಸಿದರು. ಈ ಪಾತ್ರ ನಿರ್ವಹಿಸಿದ್ದು ನನಗೆ ಹೊಸ ಅನುಭವ ನೀಡಿತು’ ಎಂದು ಹೇಳಿದ್ದಾರೆ ಐಶಾನಿ. ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದಲ್ಲಿ ‘ಗುಳ್ಟು’ ಖ್ಯಾತಿಯ ನವೀನ್‌ ಶಂಕರ್‌ ನಾಯಕರಾಗಿ ನಟಿಸಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್‌ ಸಬ್ಜೆಕ್ಟ್ ಇರುವ ಸಿನಿಮಾವಾಗಿದೆ. ಈಗಾಗಲೇ ಮೂರ್ನಾಲ್ಕು ಕಥೆಗಳನ್ನು ಕೇಳಿರುವ ಐಶಾನಿ, ಸದ್ಯದಲ್ಲೆಒಂದನ್ನು ಅನೌನ್ಸ್‌ ಮಾಡಲಿದ್ದಾರೆ. ಮೇಲಿನ ಎರಡೂ ಪಾತ್ರಗಳ ಮೇಲೆ ಐಶಾನಿಗೆ ಭರವಸೆ ಇದ್ದು, ಜನ ಖಂಡಿತ ಈ ಪಾತ್ರಗಳ ಮೂಲಕ ನನ್ನನ್ನು ಇಷ್ಟಪಡುತ್ತಾರೆ ಎಂದಿದ್ದಾರೆ. " ‘ಹೊಂದಿಸಿ ಬರೆಯಿರಿ’ ಮತ್ತು ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಗಳ ಪಾತ್ರ ಬಹಳ ಚೆನ್ನಾಗಿದೆ. ಒಬ್ಬ ಕಲಾವಿದೆಗೆ ವಿಭಿನ್ನ ಶೈಲಿಯ ಪಾತ್ರಗಳು ಅಗತ್ಯ. ಈ ಎರಡೂ ಸಿನಿಮಾಗಳು ನನಗೆ ಆ ತೃಪ್ತಿ ನೀಡಿವೆ" ಎಂದು ಹೇಳಿದ್ದಾರೆ ನಟಿ ಐಶಾನಿ