'ಆರ್‌ಆರ್‌ಆರ್' ಚಿತ್ರದಲ್ಲಿರಲಿದೆ 8 ನಿಮಿಷದ ಸೂಪರ್ ಸ್ಪೆಷಲ್ ಸಾಂಗ್..!

'ಆರ್‌ಆರ್‌ಆರ್‌' ಚಿತ್ರದಲ್ಲಿ ಎಂಟು ನಿಮಿಷ ಅವಧಿಯ ಸೂಪರ್ ಸ್ಪೆಷಲ್ ಸಾಂಗ್ ಇರಲಿದ್ದು, ಇದಕ್ಕಾಗಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ವಿಭಿನ್ನ ಅವತಾರ ತಾಳಲಿದ್ದಾರೆ.

'ಆರ್‌ಆರ್‌ಆರ್' ಚಿತ್ರದಲ್ಲಿರಲಿದೆ 8 ನಿಮಿಷದ ಸೂಪರ್ ಸ್ಪೆಷಲ್ ಸಾಂಗ್..!
Linkup
ನಿರ್ದೇಶನದ 'ಆರ್‌ಆರ್‌ಆರ್' ಚಿತ್ರ ಬಹು ನಿರೀಕ್ಷೆ ಹುಟ್ಟಿಸಿದೆ. ಕೋವಿಡ್ ಎರಡನೇ ಅಲೆ ಮತ್ತು ಲಾಕ್‌ಡೌನ್ ಇರಲಿಲ್ಲ ಅಂದಿದ್ರೆ, ಇಷ್ಟೊತ್ತಿಗೆ 'ಆರ್‌ಆರ್‌ಆರ್' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿರುತ್ತಿತ್ತು. ಆದ್ರೆ, ಲಾಕ್‌ಡೌನ್‌ನಿಂದಾಗಿ 'ಆರ್‌ಆರ್‌ಆರ್' ಚಿತ್ರದ ಕೆಲ ಭಾಗಗಳ ಶೂಟಿಂಗ್ ಇನ್ನೂ ಪೆಂಡಿಂಗ್ ಇದೆ. ಸದ್ಯ ಲಾಕ್‌ಡೌನ್ ನಿಯಮಗಳು ಸಡಿಲಗೊಳ್ಳುತ್ತಿದ್ದು, ಸದ್ಯದಲ್ಲೇ 'ಆರ್‌ಆರ್‌ಆರ್' ಚಿತ್ರದ ಚಿತ್ರೀಕರಣವನ್ನು ಪುನಃ ಪ್ರಾರಂಭ ಮಾಡಲು ರಾಜಮೌಳಿ ನಿರ್ಧರಿಸಿದ್ದಾರೆ. ಜುಲೈ ಮೊದಲ ವಾರದಿಂದ ಶೂಟಿಂಗ್ ಶೆಡ್ಯೂಲ್ ಪ್ಲಾನ್ ಆಗಿದ್ದು, ಎರಡು ಹಾಡುಗಳ ಚಿತ್ರೀಕರಣವನ್ನು ನಡೆಸಲು ರಾಜಮೌಳಿ ಸಿದ್ಧತೆ ಮಾಡಿಕೊಂಡಿದ್ದಾರೆ. ಎರಡು ಹಾಡುಗಳ ಪೈಕಿ ಒಂದು ಹಾಡಿನಲ್ಲಿ ಮತ್ತು ಕಾಣಿಸಿಕೊಳ್ಳಲಿದ್ದಾರೆ. 'ಆರ್‌ಆರ್‌ಆರ್' ಚಿತ್ರದಲ್ಲಿ ಈ ಹಾಡು ಹೈಲೈಟ್ ಆಗಿರಲಿದ್ದು, ಈ ಹಾಡಿನ ಅವಧಿ ಎಂಟು ನಿಮಿಷ ಇರಲಿದ್ಯಂತೆ. ಈ ಹಾಡಿಗಾಗಿ ರಾಜಮೌಳಿ ಸೂಪರ್ ಸ್ಪೆಷಲ್ ಪ್ಲಾನ್ ಮಾಡಿದ್ದು, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್‌ಗಾಗಿ ವಿಶೇಷ ಲುಕ್ ತಯಾರಿಸಿದ್ದಾರಂತೆ. ಈ ಹಾಡಿನಲ್ಲಿ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ವಿಭಿನ್ನ ಅವತಾರ ತಾಳಲಿದ್ದಾರೆ. ಈ ಹಾಡಿಗಾಗಿ ವಿಶೇಷ ಸೆಟ್ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. ಮೂಲಗಳ ಪ್ರಕಾರ, ಈಗಾಗಲೇ 'ಆರ್‌ಆರ್‌ಆರ್' ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಹಾಡುಗಳ ಚಿತ್ರೀಕರಣ ಮತ್ತು ಕೆಲ ಪ್ಯಾಚ್ ಮಾತ್ರ ಬಾಕಿ ಇದೆ. ಅಂದ್ಹಾಗೆ, 'ಆರ್‌ಆರ್‌ಆರ್' ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜಾ, ಒಲಿವಿಯಾ ಮೊರಿಸ್, ಆಲಿಯಾ ಭಟ್, ಅಜಯ್ ದೇವ್ಗನ್ ಮುಂತಾದ ದೊಡ್ಡ ಕಲಾವಿದರ ದಂಡೇ ಇದೆ. ಅದ್ಧೂರಿ ವೆಚ್ಚದಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ನೀಡಿದ್ದಾರೆ.