3ನೇ ಅಲೆ ಎದುರಿಸಲು ಡಾ. ದೇವಿ ಪ್ರಸಾದ್ ಶೆಟ್ಟಿ ಸಾರಥ್ಯದಲ್ಲಿ ಕೋವಿಡ್ ಕಾರ್ಯಪಡೆ: ಸಿಎಂ ಬಿಎಸ್‌ವೈ

ತಮ್ಮ ಜೊತೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಡಿಸಿಎಂ ಅಶ್ವತ್ಥ್ ನಾರಾಯಣ ಹಾಗೂ ಡಾ. ಕೆ. ಸುಧಾಕರ್ ಕೂಡಾ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ನಿರ್ವಹಣೆಯ ಉಸ್ತುವಾರಿ ವಹಿಸಿರುತ್ತಾರೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

3ನೇ ಅಲೆ ಎದುರಿಸಲು ಡಾ. ದೇವಿ ಪ್ರಸಾದ್ ಶೆಟ್ಟಿ ಸಾರಥ್ಯದಲ್ಲಿ ಕೋವಿಡ್ ಕಾರ್ಯಪಡೆ: ಸಿಎಂ ಬಿಎಸ್‌ವೈ
Linkup
: ರಾಜ್ಯದಲ್ಲಿ ಕೊರೊನಾ 3ನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಲು ಕೋವಿಡ್ ಟಾಸ್ಕ್ ಫೋರ್ಸ್‌ ರಚಿಸಲಾಗಿದೆ ಎಂದು ಸಿಎಂ ಹೇಳಿದ್ಧಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಟಾಸ್ಕ್‌ ಫೋರ್ಸ್‌ಗೆ ಡಾ. ಅವರು ನೇತೃತ್ವವಹಿಸಲಿದ್ದಾರೆ ಎಂದು ಪ್ರಕಟಿಸಿದರು. ಕೊರೊನಾರ್ಭಟವನ್ನು ನಿಯಂತ್ರಿಸುವ ಸಂಬಂಧ ರಾಜ್ಯ ಸರ್ಕಾರ ಕಠಿಣ ನಿಯಮಾವಳಿ ಜಾರಿಗೆ ತಂದ ನಂತರ ಕೋವಿಡ್ ಸುಧಾರಿಸಿದೆ ಎಂದು ಹೇಳಿದ ಸಿಎಂ, ರಾಜ್ಯದಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗಿದೆ, ಜನರು ಗಾಬರಿ ಪಡಬೇಡಿ, ಸಹಕಾರ ನೀಡಿ ಎಂದು ಮನವಿ ಮಾಡಿದರು. ಕೊರೊನಾ ಲಸಿಕೆ ಮೊದಲ ಡೋಸ್‌ ಪಡೆದಿರುವವರಿಗೆ 2ನೇ ಡೋಸ್ ನೀಡೋದು ಅತ್ಯಗತ್ಯ. ಹೀಗಾಗಿ, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆಯನ್ನು ತಾತ್ಕಾಲಿಕ ಮುಂದೂಡಿಕೆ ಮಾಡಲಾಗಿದೆ ಎಂದ ಸಿಎಂ, ವ್ಯಾಕ್ಸಿನೇಷನ್‌ ಕಾರ್ಯಗಾರ ಸಲಹೆಗಾರನಾಗಿ ಗಗನ್ ದೀಪ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ತಮ್ಮ ಜೊತೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಡಿಸಿಎಂ ಅಶ್ವತ್ಥ್ ನಾರಾಯಣ ಹಾಗೂ ಡಾ. ಕೆ. ಸುಧಾಕರ್ ಕೂಡಾ ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ ನಿರ್ವಹಣೆಯ ಉಸ್ತುವಾರಿ ವಹಿಸಿರುತ್ತಾರೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಸಿಎಂ ಸುದ್ದಿಗೋಷ್ಠಿಯ ಪ್ರಮುಖಾಂಶಗಳು ಇಂತಿವೆ:
  • ಆಸ್ಪತ್ರೆಗಳ ಮೂಲ ಸೌಕರ್ಯ ಬಲಪಡಿಸುವ ವ್ಯವಸ್ಥೆ ಮುಂದುವರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ 200 ವೆಂಟಿಲೇಟರ್ ನೀಡಿದ್ದೇವೆ. ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಸಹಾಯ ಧನ ನೀಡುತ್ತಿದ್ದೇವೆ. ಶೇ 70 ರಷ್ಟು ಸಹಾಯ ಧನ ಸರ್ಕಾರದ ಕಡೆಯಿಂದ ನೀಡಲಾಗುತ್ತಿದೆ.
  • ಆಮ್ಲಜನಕ ಕೊರತೆ ಸರಿದೂಗಿಸಲು ಕ್ರಮ ಕೈಗೊಳ್ಳಲಾಗಿದೆ. ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳಕ್ಕೆ ಕ್ರಮ. ಆಕ್ಸಿಜನ್ ಕಾನ್ಸನ್‌ಟ್ರೇಟರ್‌ ಹೆಚ್ಚಾಗಿ ಖರೀದಿ ಮಾಡುವ ಮೂಲಕ ಕೊರತೆ ನೀಗಿಸಲು ಕ್ರಮ.
  • ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪ್ರಮಾಣವನ್ನು 1015 ಮೆಟ್ರಿಕ್ ಟನ್ ಹೆಚ್ಚಳ ಮಾಡಿದೆ. ರಾಜ್ಯಕ್ಕೆ 160 ಟನ್, ಒಡಿಶಾ ಹಾಗೂ 30 ಟನ್ ವಿಶಾಖಪಟ್ಟಣದಿಂದ ದೊರೆಯುತ್ತಿದೆ.
  • ಆಮ್ಲಜನಕ ಸಂಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಇತರ ರಾಜ್ಯದಿಂದಲೂ ಆಮದಿಗೆ ಕ್ರಮ. ಬಹರೈನ್ ನಿಂದ 40, ಕುವೈಟ್‌ನಿಂದ 100 ಟನ್ ಆಮ್ಲಜನಕ ಪಡೆಯಲಾಗಿದೆ. ರಾಜ್ಯದಲ್ಲಿ ಆಮ್ಲಜನಕ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ, 127 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ.
  • ಹೋಂ ಐಸೋಲೇಷನ್‌ ನಲ್ಲಿ ಇರುವವರಿಗೆ ಅನುಕೂಲ ಆಗಲಿ ಎಂದು ಓಲಾ ಹಾಗೂ ಗಿವ್ ಇಂಡಿಯಾದವರು ಆಕ್ಸಿಜನ್ ಕಾನ್ಸನ್ಟ್ರೇಟರ್‌ ಕಿಟ್ ನೀಡಿದ್ದಾರೆ. ಸಂಚಾರ ಆಕ್ಸಿಜನ್ ಗಾಗಿ ಆಕ್ಸಿ ಬಸ್ ಚಾಲನೆ ನೀಡಲಾಗಿದೆ.
  • ಜಿಲ್ಲೆಗಳಲ್ಲಿ ಆಮ್ಲಜನಕ ಬೇಡಿಕೆ ಒತ್ತಡ ನಿವಾರಿಸಲು ಕ್ರಮ. 3000 ಆಕ್ಸಿಜನ್ ಕಾನ್ಸನ್ಟ್ರೇಟರ್‌ ರಾಜ್ಯದಲ್ಲಿ ಹಂಚಿಕೆ ಮಾಡಲಾಗಿದೆ. ಇನ್ನು 3000 ಕಾನ್ಸನ್ಟ್ರೇಟರ್‌ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
  • 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಕೇಂದ್ರ ಸರ್ಕಾರ ಲಸಿಕೆ ಪೂರೈಕೆ ಮಾಡಿದೆ. 1.10 ಕೋಟಿ ಡೋಸ್ ಕೇಂದ್ರ ಒದಗಿಸಿದೆ. ಈ ಪೈಕಿ 99.5 ಲಕ್ಷ ಕೋವಿಶೀಲ್ಟ್ 10.9 ಲಕ್ಷ ಕೊವ್ಯಾಕ್ಸಿನ್ ಲಸಿಕೆ ಪೂರೈಕೆ ಆಗಿದೆ. 18-44 ಜನರಿಗೆ ಲಸಿಕೆಗೆ 3 ಕೋಟಿ ಡೋಸ್ ಲಸಿಕೆಗೆ ಆರ್ಡರ್ ಮಾಡಲಾಗಿದೆ.
  • 7.5 ಲಕ್ಷ ಕೋವಿಶೀಲ್ಡ್, 1.44 ಲಕ್ಷ ಕೋವಾಕ್ಸಿನ್ ಸೇರಿದಂತೆ 8.9 ಲಕ್ಷ ಡೋಸ್ ಲಭ್ಯವಾಗಿದೆ.
  • ಕೋವಿ ಶೀಲ್ಡ್ ಲಸಿಕೆ ಪಡೆದ 14.85 ಫಲಾನುಭವಿಗಳಿಗೆ ಎರಡನೇ ಡೋಸ್ ನೀಡಬೇಕಿದೆ. 5.10 ಲಕ್ಷ ಕೊವಾಕ್ಸಿನ್ ಪಡೆದವರು ನಾಲ್ಕು ವಾರ ಪೂರೈಸಿದ್ದು ಎರಡನೇ ಡೋಸ್‌ ಅರ್ಹರಾಗಿದ್ದಾರೆ.
  • ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಲಭ್ಯ ಇರುವ ದಾಸ್ತಾನನ್ನು ಎರಡನೇ ಡೋಸ್ ಗಾಗಿ ಬಳಕೆ ಮಾಡಲಾಗುವುದು. ಇದಕ್ಕಾಗಿ 18 ರಿಂದ 44 ವರ್ಷದವರಿಗೆ ಲಸಿಕೆಯನ್ನು ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ.
  • ರೆಮಿಡಿಸಿವಿರ್ ಕೊರೆತೆ ನೀಗಿಸಲು ಸೂಕ್ತ ಕ್ರಮ. ಕಠಿಣ ನಿಯಮಾವಳಿ ಜಾರಿಗೆ ತಂದ ಬಳಿಕ ಕೋವಿಡ್ ಪರಿಸ್ಥಿತಿ ನಿಯಂತ್ರಣ. ಈ ನಿಟ್ಟಿನಲ್ಲಿ ಜನರ ಸಹಕಾರ ಅಗತ್ಯವಾಗಿದೆ. ಜನರು ಸಹಕಾರ ನೀಡಬೇಕು ಎಂದು ಕೋರಿಕೆ ವ್ಯಕ್ತಪಡಿದ ಬಿಎಸ್‌ವೈ