ಸೋಂಕಿತರ ಸೇವೆಗಾಗಿ ಎರಡು ಬಾರಿ ಮದುವೆ ಮುಂದೂಡಿದ ನರ್ಸ್‌: ಕೊನೆಗೆ ಮದುವೆ ಬೇಡ ಸೇವೆ ಸಾಕು ಎಂದ ನರ್ಸ್!

ಒಂದು ವರ್ಷದಿಂದ ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರು. ಮದುವೆಯಾದರೆ ಕೆಲಸ ಕಡೆ ಹೆಚ್ಚು ಗಮನ ನೀಡಲು ಆಗುವುದಿಲ್ಲ ಎಂದು ಮನೆಯವರ ಒತ್ತಾಯಕ್ಕೂ ಮಣಿಯದೆ ಕೋವಿಡ್‌ ತಹಬದಿಗೆ ಬರುವ ತನಕ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ನೋಡಿದ ಹುಡುಗಿಯ ಮನೆಯವರಿಗೂ ಬೇರೆ ಗಂಡು ನೋಡಿ ಎಂದು ಹೇಳಿ ಕೋವಿಡ್‌ ಸೋಂಕಿತರ ಶುಶ್ರೂಶೆಯಲ್ಲಿ ತಲ್ಲೀನರಾಗಿದ್ದಾರೆ.

ಸೋಂಕಿತರ ಸೇವೆಗಾಗಿ ಎರಡು ಬಾರಿ ಮದುವೆ ಮುಂದೂಡಿದ ನರ್ಸ್‌: ಕೊನೆಗೆ ಮದುವೆ ಬೇಡ ಸೇವೆ ಸಾಕು ಎಂದ ನರ್ಸ್!
Linkup
ಬೆಂಗಳೂರು: ಸೋಂಕಿತರ ಸೇವೆಗೆ ಮೀಸಲಿಟ್ಟಿದ್ದ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ತಮ್ಮ ವಿವಾಹವನ್ನೇ ಎರಡೂ ಬಾರಿ ಮುಂದೂಡಿ, ವಧುವಿಗೂ ಬೇರೆ ವರನ ಹುಡುಕಿಕೊಳ್ಳಲು ವಿನಂತಿಸಿರುವ ಅಪರೂಪದ ಸಂಗತಿ ವರದಿಯಾಗಿದೆ. ಕೋವಿಡ್‌ ಸೋಂಕಿತರ ಯೋಗ ಕ್ಷೇಮಕ್ಕಾಗಿ ಹಗಲಿರುವಳು ಸೇವೆ ಸಲ್ಲಿಸುತ್ತಿದ್ದಾರೆ. ಅಂತವರ ಸಾಲಿನಲ್ಲಿ ಸರ್‌.ಸಿ.ವಿ.ರಾಮನ್‌ ಆಸ್ಪತ್ರೆಯ ನರ್ಸಿಂಗ್‌ ಅಧಿಕಾರಿ ಬೆಂಗಳೂರಿನ ವಿಭೂತಿಪುರ ನಿವಾಸಿ ನವಿನ್‌ ರಾಜ್‌ ಕೂಡ ಒಬ್ಬರು. ಒಂದು ವರ್ಷದಿಂದ ಕೋವಿಡ್‌ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದರು. ಮದುವೆಯಾದರೆ ಕೆಲಸ ಕಡೆ ಹೆಚ್ಚು ಗಮನ ನೀಡಲು ಆಗುವುದಿಲ್ಲ ಎಂದು ಮನೆಯವರ ಒತ್ತಾಯಕ್ಕೂ ಮಣಿಯದೆ ಕೋವಿಡ್‌ ತಹಬದಿಗೆ ಬರುವ ತನಕ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ನೋಡಿದ ಹುಡುಗಿಯ ಮನೆಯವರಿಗೂ ಬೇರೆ ಗಂಡು ನೋಡಿ ಎಂದು ಹೇಳಿ ಕೋವಿಡ್‌ ಸೋಂಕಿತರ ಶುಶ್ರೂಶೆಯಲ್ಲಿ ತಲ್ಲೀನರಾಗಿದ್ದಾರೆ. ''ನಾನು ಕೋವಿಡ್‌ ಸೋಂಕಿತರ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿ ಹೆಚ್ಚು ಬ್ಯೂಸಿಯಾಗಿದ್ದೇನೆ. ಒಂದು ವೇಳೆ ಮದುವೆಯಾದರೆ ಕೆಲಸದತ್ತ ಹೆಚ್ಚು ಗಮನ ಹರಿಸಲು ಆಗುವುದಿಲ್ಲ. ಇದರಿಂದ ಸಂಸಾರದಲ್ಲಿ ಕಿರಿಕಿರಿ ಉಂಟಾಗಬಹುದು. ಆದ್ದರಿಂದ ಕೊರೊನಾ ತಹಬದಿಗೆ ಬರುವ ತನಕ ಮದುವೆಯಾಗಬಾರದೆಂದು ನಿರ್ಧರಿಸಿದ್ದೇನೆ'' ಎನ್ನುತ್ತಾರೆ ನವೀನ್‌. ''ಕಳೆದ ವರ್ಷ ಹುಡುಗಿ ನೋಡಿದ್ದೆ. ಆ ವೇಳೆಗೆ ಕೋವಿಡ್‌ ಕಾಲಿಟ್ಟಿತ್ತು. ಆ ಸಂದರ್ಭದಲ್ಲಿ ನನಗೆ ಮದುವೆಯಾಗುವುದು ಇಷ್ಟವಿರಲ್ಲಿಲ್ಲ. ಅವರಿಗೆ ಬೇರೆ ಸಂಬಂಧ ನೋಡಲು ಹೇಳಿ ನಾನು ನನ್ನ ಕೆಲಸದಲ್ಲಿ ತಲ್ಲೀನನಾದೆ'' ಎನ್ನುತ್ತಾರೆ ನವೀನ್‌. 'ಕೋವಿಡ್‌ ಭಯ ಎಲ್ಲರಲ್ಲೂ ಆವರಿಸಿದೆ. ಕೋವಿಡ್‌ ನಂತರ ವೈದ್ಯಕೀಯ ಸೇವೆಯಲ್ಲಿ ಕೆಲಸ ಮಾಡುವವರನ್ನು ಮದುವೆಯಾಗಲೂ ಹಿಂಜರಿಯುತ್ತಿದ್ದಾರೆ' ಎನ್ನುತ್ತಾರೆ ನವೀನ್‌. '' ತಂದೆ ತಾಯಿಗೆ ಸ್ವಲ್ಪ ಅನಾರೋಗ್ಯ ಇರುವುದರಿಂದ ಕಳೆದ ಒಂದುವರೆ ತಿಂಗಳಿನಿಂದ ಮನೆಗೆ ಹೋಗಿಲ್ಲ. ನಾನು ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವುದರಿಂದ ಮನೆಯಲ್ಲಿರುವ ತಂದೆ ತಾಯಿಗೆ ತೊಂದರೆಯಾಗುತ್ತದೆ ಎಂದು ಚಿಕ್ಕಮ್ಮನ ಮನೆಯಿಂದ ಹೋಗಿ ಬಂದು ಮಾಡುತ್ತಿದ್ದೇನೆ '' ಎನ್ನುತ್ತಾರೆ ನವೀನ್‌. ''ನಿಮ್ಮ ಮದುವೆಗೆಯಾಗುವ ಹುಡುಗಿ ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವವಳೇ ಆಗಿರಬೇಕಾ ಎನ್ನುವುದಕ್ಕೆ ಮುಂದೆ ನೋಡೋಣ ದೇವರು ಬರೆದ ಹಾಗೆ ಆಗುತ್ತದೆ. ಅದಕ್ಕೂ ಮೊದಲು ಈ ಕೋವಿಡ್‌ ಮುಗಿದು ಎಲ್ಲರೂ ನೆಮ್ಮದಿಯಿಂದ ಇದ್ದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ'' ಎನ್ನುತ್ತಾರೆ.