ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿ ಕೊಲೆ: ಆಟೋದಲ್ಲಿ ಶವದ ಜತೆ ಬಂದು ಶರಣಾದರು..!

ಹೊಸೂರು ಬಳಿಯ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮುನಿರಾಜು ಸಹೋದರಿ ಜತೆಗೆ ಭಾಸ್ಕರ್‌ ಸಲುಗೆ ಬೆಳೆಸಿಕೊಂಡಿದ್ದ. ಕಳೆದ 15 ದಿನಗಳ ಹಿಂದೆ ಇದೇ ವಿಚಾರಕ್ಕೆ ಪತಿಯೊಂದಿಗೆ ಜಗಳ ಮಾಡಿದ ಮಹಿಳೆ, ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ ಲೇಔಟ್‌ನಲ್ಲಿರುವ ತನ್ನ ತವರು ಮನೆಗೆ ಮಕ್ಕಳೊಂದಿಗೆ ಬಂದಿದ್ದಳು.

ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿ ಕೊಲೆ: ಆಟೋದಲ್ಲಿ ಶವದ ಜತೆ ಬಂದು ಶರಣಾದರು..!
Linkup
: ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ ಗಾರ್ಮೆಂಟ್ಸ್‌ ನೌಕರನನ್ನು ಹತ್ಯೆ ಮಾಡಿದ ಮಹಿಳೆಯ ಸಹೋದರ ಸೇರಿ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಡಿದ ಬಳಿಕ ಆರೋಪಿಗಳು ಆಟೋದಲ್ಲಿ ಶವದೊಂದಿಗೆ ಬಂದು ಠಾಣೆಗೆ ಶರಣಾಗಿದ್ದಾರೆ. ಹೊಸೂರು ಮದನಪಲ್ಲಿ ನಿವಾಸಿ ಗಾರ್ಮೆಂಟ್ಸ್‌ ಕಾರ್ಖಾನೆ ನೌಕರ ಭಾಸ್ಕರ್‌ (31) ಕೊಲೆಯಾದ ವ್ಯಕ್ತಿ. ಮಹಿಳೆಯ ಸಹೋದರ ಮುನಿರಾಜು (28) ಹಾಗೂ ಸಹಚರರಾದ ಮಾರುತಿ (22), ನಾಗೇಶ್‌ (22), ಪ್ರಶಾಂತ್‌ (20) ಎಂಬವರನ್ನು ಬಂಧಿಸಲಾಗಿದೆ. ಮುನಿರಾಜು ಸಹೋದರಿಯು ಪತಿ ಹಾಗೂ ಇಬ್ಬರು ಮಕ್ಕಳ ಜತೆಗೆ ಮಾಲೂರಿನಲ್ಲಿ ವಾಸಿಸುತ್ತಿದ್ದರು. ಹೊಸೂರು ಬಳಿಯ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮುನಿರಾಜು ಸಹೋದರಿ ಜತೆಗೆ ಭಾಸ್ಕರ್‌ ಸಲುಗೆ ಬೆಳೆಸಿಕೊಂಡಿದ್ದ. ಕಳೆದ 15 ದಿನಗಳ ಹಿಂದೆ ಇದೇ ವಿಚಾರಕ್ಕೆ ಪತಿಯೊಂದಿಗೆ ಜಗಳ ಮಾಡಿದ ಮಹಿಳೆ, ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ ಲೇಔಟ್‌ನಲ್ಲಿರುವ ತನ್ನ ತವರು ಮನೆಗೆ ಮಕ್ಕಳೊಂದಿಗೆ ಬಂದಿದ್ದಳು. ಶನಿವಾರ ರಾತ್ರಿ ಭಾಸ್ಕರ್‌ ಮಹಿಳೆ ಮನೆಗೆ ಬಂದು ಬೇರೆ ಮನೆ ಮಾಡಿಕೊಡುವುದಾಗಿ ಭರವಸೆ ನೀಡಿ, ಆಕೆಯನ್ನು ಮಕ್ಕಳ ಜತೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದ. ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ಆಟೋದಿಂದಿಳಿದು, ಸೋದರ ಮಾವ ಮುನಿರಾಜುಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಮುನಿರಾಜು ತನ್ನ ಆಟೋದಲ್ಲಿಇತರ ಸ್ನೇಹಿತರನ್ನು ಕರೆದುಕೊಂಡು ಸುಂಕದಕಟ್ಟೆ ಬಳಿ ಸಹೋದರಿ ಮತ್ತು ಭಾಸ್ಕರ್‌ ಇದ್ದ ಆಟೋವನ್ನು ಅಡ್ಡಗಟ್ಟಿದ್ದ. ನಂತರ ಸಹೋದರಿಯನ್ನು ಮನೆಯಲ್ಲಿ ಬಿಟ್ಟು ಭಾಸ್ಕರ್‌ನನ್ನು ಕೆಬ್ಬೇ ಹಳ್ಳದ ಬಳಿಯ ನಿರ್ಜನ ಪ್ರದೇಶಕ್ಕೆ ಆಟೋದಲ್ಲಿ ಕರೆದೊಯ್ದು ಸಹಚರರ ಜತೆ ಸೇರಿ ಹಲ್ಲೆ ನಡೆಸಿದ್ದ. ಎಚ್ಚರಿಕೆ ಕೊಡಲು ಹೋಗಿದ್ದೇ ಮುಳುವಾಯಿತು: ಆರೋಪಿಗಳು ಭಾಸ್ಕರ್‌ಗೆ ಎಚ್ಚರಿಕೆ ಕೊಟ್ಟು ಹಣೆ ಮತ್ತು ತಲೆಗೆ ಜೋರಾಗಿ ಗುದ್ದಿದ್ದರು. ಪರಿಣಾಮ ಭಾಸ್ಕರ್‌ ಸ್ಥಳದಲ್ಲೇ ಮೂರ್ಛೆ ತಪ್ಪಿ ಬಿದ್ದಿದ್ದ. ಭಾಸ್ಕರ್‌ ಮೂರ್ಛೆ ತಪ್ಪಿ ಬಿದ್ದಂತೆ ನಟಿಸುತ್ತಿರಬಹುದು ಎಂದು ಭಾವಿಸಿದ ಆರೋಪಿಗಳು, ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕೆಲ ಕೊತ್ತು ಕಳೆದರೂ ಭಾಸ್ಕರ್‌ ಎಚ್ಚರವಾಗದಿದ್ದಾಗ ಆತ ಮೃತಪಟ್ಟಿರುವುದು ಆರೋಪಿಗಳ ಗಮನಕ್ಕೆ ಬಂದಿತ್ತು. ಮುನಿರಾಜು ತನ್ನ ತಾಯಿಗೆ ಕರೆ ಮಾಡಿ ನಡೆದ ಸಂಗತಿ ವಿವರಿಸಿದ್ದ. ಬಳಿಕ ಆರೋಪಿಗಳು ಆಟೋದಲ್ಲಿ ಭಾಸ್ಕರ್‌ ಶವ ತೆಗೆದುಕೊಂಡು ನೇರವಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬಂದು ಪೊಲೀಸರಿಗೆ ಕೊಲೆ ಮಾಡಿರುವ ವಿಚಾರ ತಿಳಿಸಿ ಶರಣಾಗಿದ್ದರು.