₹30,000 ಕೋಟಿ ವಹಿವಾಟು ನಡೆಸಿದ ಬಾಬಾ ರಾಮ್‌ದೇವ್‌ ನೇತೃತ್ವದ ಪತಂಜಲಿ ಕಂಪನಿ!

ಮುಂಬರುವ 3-4 ವರ್ಷಗಳಲ್ಲಿ ಸಾಲ ಮುಕ್ತವಾಗುವ ಗುರಿಯನ್ನು ಪತಂಜಲಿ ಆಯುರ್ವೇದ ಕಂಪನಿಯು ಹೊಂದಿದ್ದು, ರುಚಿ ಸೋಯಾ ಕಂಪನಿಯನ್ನು ಖರೀದಿಸಿದ ನಂತರ ಪತಂಜಲು ಗ್ರೂಪ್‌ನ ಒಟ್ಟಾರೆ ಆದಾಯದಲ್ಲಿ ಏರಿಕೆಯಾಗಿದೆ. ಒಟ್ಟು 30,000 ಕೋಟಿ ರೂ. ಆದಾಯದಲ್ಲಿ 16,318 ಕೋಟಿ ರೂ. ರುಚಿ ಸೋಯಾದಿಂದ ಬಂದಿದೆ ಎಂದು ರಾಮ್‌ದೇವ್‌ ಅವರು ತಿಳಿಸಿದ್ದಾರೆ.

₹30,000 ಕೋಟಿ ವಹಿವಾಟು ನಡೆಸಿದ ಬಾಬಾ ರಾಮ್‌ದೇವ್‌ ನೇತೃತ್ವದ ಪತಂಜಲಿ ಕಂಪನಿ!
Linkup
ಮುಂಬಯಿ: ಯೋಗಗುರು ಬಾಬಾ ರಾಮ್‌ ದೇವ್‌ ನೇತೃತ್ವದ ಪತಂಜಲಿ ಆಯುರ್ವೇದ ಕಂಪನಿಯು ಕಳೆದ 2020-21ರ ಅವಧಿಯಲ್ಲಿ 30,000 ಕೋಟಿ ರೂ. ವಹಿವಾಟು ನಡೆಸಿದೆ. ಇದರ ಜೊತೆಗೆ ಮುಂಬರುವ 3-4 ವರ್ಷಗಳಲ್ಲಿ ಸಾಲ ಮುಕ್ತವಾಗುವ ಗುರಿಯನ್ನು ಪತಂಜಲಿ ಆಯುರ್ವೇದ ಕಂಪನಿಯು ಹೊಂದಿದ್ದು, ರುಚಿ ಸೋಯಾ ಕಂಪನಿಯನ್ನು ಖರೀದಿಸಿದ ನಂತರ ಪತಂಜಲು ಗ್ರೂಪ್‌ನ ಒಟ್ಟಾರೆ ಆದಾಯದಲ್ಲಿ ಏರಿಕೆಯಾಗಿದೆ. ಒಟ್ಟು 30,000 ಕೋಟಿ ರೂ. ಆದಾಯದಲ್ಲಿ 16,318 ಕೋಟಿ ರೂ. ರುಚಿ ಸೋಯಾದಿಂದ ಬಂದಿದೆ ಎಂದು ರಾಮ್‌ದೇವ್‌ ಅವರು ತಿಳಿಸಿದ್ದಾರೆ. 2019-20ರಲ್ಲಿ ಸಮೂಹವು 25,000 ಕೋಟಿ ರೂ. ಆದಾಯ ಗಳಿಸಿತ್ತು. ಬ್ರ್ಯಾಂಡ್‌ಗಳಿಗೆ ಇದುವರೆಗೆ ಸ್ವತಃ ಬಾಬಾ ರಾಮ್‌ ದೇವ್‌ ಅವರೇ ಪ್ರಚಾರದ ಸೆಲೆಬ್ರಿಟಿ ಆಗಿದ್ದರು. ಮುಂದಿನ ದಿನಗಳಲ್ಲಿ ಕ್ರಿಕೆಟ್‌ ಮತ್ತು ಬಾಲಿವುಡ್‌ ತಾರೆಯರು ಬ್ರ್ಯಾಂಡ್‌ ರಾಯಭಾರಿಗಳಾಗಲಿದ್ದಾರೆ.