ಬ್ಯಾಂಕ್‌ ಠೇವಣಿದಾರರ ನೈಜ ಆದಾಯ ನೆಗೆಟಿವ್‌ - ಎಸ್‌ಬಿಐ ವರದಿ!

ಬ್ಯಾಂಕ್‌ ಠೇವಣಿದಾರಿಗೆ ತಮ್ಮ ಠೇವಣಿಗಳಿಂದ ಸಿಗುವ ಆದಾಯ ಋುಣಾತ್ಮಕವಾಗಿದೆ ಎಂದು ಎಸ್‌ಬಿಐ ವರದಿ ಹೇಳಿದ್ದು, ಇದೇ ಕಾರಣಕ್ಕಾಗಿ ಚಿಲ್ಲರೆ ಠೇವಣಿದಾರರು ಷೇರು ಮಾರುಕಟ್ಟೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಹೇಳಿದೆ.

ಬ್ಯಾಂಕ್‌ ಠೇವಣಿದಾರರ ನೈಜ ಆದಾಯ ನೆಗೆಟಿವ್‌ - ಎಸ್‌ಬಿಐ ವರದಿ!
Linkup
ಹೊಸದಿಲ್ಲಿ: ಬ್ಯಾಂಕ್‌ಗಳಲ್ಲಿ ನೀವು ಇಟ್ಟಿದ್ದೀರಾ? ಹಾಗಾದರೆ ಅವುಗಳಿಂದ ನಿಮಗೆ ಯಥಾರ್ಥವಾಗಿ ಎಷ್ಟು ಆದಾಯ ಬರುತ್ತಿದೆ ಎಂದು ಲೆಕ್ಕ ಮಾಡಿ ನೋಡುವುದು ಒಳಿತು. ಏಕೆಂದರೆ ಗಮನಾರ್ಹ ಅವಧಿಯಿಂದ ಠೇವಣಿದಾರಿಗೆ ತಮ್ಮ ಠೇವಣಿಗಳಿಂದ ಸಿಗುವ ಆದಾಯ ಋುಣಾತ್ಮಕವಾಗಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕಾಗಿ ಚಿಲ್ಲರೆ ಠೇವಣಿದಾರರು ಷೇರು ಮಾರುಕಟ್ಟೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ()ದ ವರದಿ ತಿಳಿಸಿದೆ. ಭವಿಷ್ಯದಲ್ಲಿ ಬ್ಯಾಂಕ್‌ಗಳ ಠೇವಣಿಗಳ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆಯೂ ಕಾಣಿಸುತ್ತಿಲ್ಲ. ಹೀಗಾಗಿ ಅವುಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ ಎಂದು ವರದಿ ಉಲ್ಲೇಖಿಸಿದೆ. "ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬೊಐ) ಬೆಳವಣಿಗೆಗೆ ಪೂರಕ ನೀತಿಯನ್ನು ಸ್ಪಷ್ಟವಾಗಿ ಕೈಗೊಳ್ಳುತ್ತಿದೆ. ಹೀಗಾಗಿ ಬಡ್ಡಿ ದರಗಳು ಇಳಿಯುತ್ತಿವೆ," ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಹಿರಿಯ ನಾಗರಿಕರಿಗೆಯಾದರೂ ಠೇವಣಿಗಳ ಬಡ್ಡಿ ಮೇಲಿನ ತೆರಿಗೆಯನ್ನು ಮರು ಪರಿಶೀಲಿಸಲು ಅಥವಾ ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆಗೆ ಮಿತಿಯನ್ನು ವಿಸ್ತರಿಸುವಲು ಇದು ಸಕಾಲ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ವರದಿ ಸಲಹೆ ನೀಡಿದೆ. ಈಗ ಬ್ಯಾಂಕ್‌ಗಳು ಎಲ್ಲ ಠೇವಣಿದಾರರಿಗೆ 40,000 ರೂ.ಗಿಂತ ಹೆಚ್ಚಿನ ಬಡ್ಡಿ ಆದಾಯಕ್ಕೆ ತೆರಿಗೆ ಕಡಿತಗೊಳಿಸುತ್ತವೆ. ಹಿರಿಯ ನಾಗರಿಕರಿಗೆ ವಾರ್ಷಿಕ 50,000 ರೂ. ತನಕದ ಬಡ್ಡಿ ಆದಾಯಕ್ಕೆ ತೆರಿಗೆ ಇರುವುದಿಲ್ಲ. ನಂತರ ಅವರಿಗೂ ತೆರಿಗೆ ಅನ್ವಯವಾಗುತ್ತದೆ. ಎನ್‌ಎಸ್‌ಡಿಎಲ್‌ನಲ್ಲಿ ಡಿಮ್ಯಾಟ್‌ ಖಾತೆಗಳ ಸಂಖ್ಯೆ 2016-17ರಲ್ಲಿ 1.48 ಕೋಟಿ ಇದ್ದರೆ, 2020-21ರ ವೇಳೆಗೆ 2.15 ಕೋಟಿಗೆ ಏರಿಕೆಯಾಗಿದೆ. ಸಿಡಿಎಸ್‌ಎಲ್‌ನಲ್ಲಿ ಇದೇ ಅವಧಿಯಲ್ಲಿ ಡಿಮ್ಯಾಟ್‌ ಖಾತೆಗಳ ಸಂಖ್ಯೆ 1.23 ಕೋಟಿಯಿಂದ 3.3 ಕೋಟಿಗೆ ಹೆಚ್ಚಳವಾಗಿದೆ.