ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಏರಿಕೆಗೆ ಟಾಟಾ ಮೋಟಾರ್ಸ್‌ ಸಿದ್ಧತೆ

ಟಾಟಾ ಮೋಟಾರ್ಸ್‌ ತನ್ನ ಕಾರುಗಳ ದರ ಏರಿಕೆ ಮಾಡುವುದಾಗಿ ಸೋಮವಾರ ಘೋಷಿಸಿದೆ. ಸದ್ಯದಲ್ಲೇ ದರ ಏರಿಕೆ ಮಾಡಲಾಗುವುದು ಎಂದಷ್ಟೇ ಕಂಪನಿ ಹೇಳಿದ್ದು, ಈ ದರ ಹೆಚ್ಚಳವೂ ನಡೆದರೆ ಇದು ವರ್ಷದಲ್ಲಿ ನಡೆಯುತ್ತಿರುವ 3ನೇ ದರ ಏರಿಕೆಯಾಗಲಿದೆ.

ವರ್ಷದಲ್ಲಿ ಮೂರನೇ ಬಾರಿಗೆ ಕಾರುಗಳ ದರ ಏರಿಕೆಗೆ ಟಾಟಾ ಮೋಟಾರ್ಸ್‌ ಸಿದ್ಧತೆ
Linkup
ಮುಂಬಯಿ: ದೇಶಿಯ ಉತ್ಪಾದಕ ಸಂಸ್ಥೆ ತನ್ನ ಕಾರುಗಳ ಮಾಡುವುದಾಗಿ ಸೋಮವಾರ ಘೋಷಿಸಿದೆ. ಆದರೆ ಯಾವಾಗ ಮತ್ತು ಎಷ್ಟು ದರ ಏರಿಸಲಾಗುವುದು ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಸದ್ಯದಲ್ಲೇ ದರ ಏರಿಕೆ ಮಾಡಲಾಗುವುದು ಎಂದಷ್ಟೇ ಹೇಳಿದೆ. ಈ ದರ ಹೆಚ್ಚಳವೂ ನಡೆದರೆ ಇದು ವರ್ಷದಲ್ಲಿ ನಡೆಯುತ್ತಿರುವ ಮೂರನೇ ದರ ಏರಿಕೆಯಾಗಲಿದೆ. ಕಾರಿನ ಉತ್ಪಾದನಾ ವೆಚ್ಚ ಹೆಚ್ಚಾದ ಹಿನ್ನಲೆಯಲ್ಲಿ ದರ ಏರಿಕೆ ಮಾಡುತ್ತಿರುವುದಾಗಿ ಕಂಪನಿ ಹೇಳಿದೆ. ಎಷ್ಟು ಪ್ರಮಾಣದಲ್ಲಿ ದರ ಏರಿಕೆ ಮಾಡಲಾಗುವುದು ಎಂಬುದನ್ನು ಕೆಲವೇ ವಾರಗಳಲ್ಲಿ ಘೋಷಿಸಲಾಗುವುದು ಎಂದು ಕಂಪನಿ ಹೇಳಿದ್ದು, ಈ ದರ ಏಪ್ರಿಲ್‌ 1, 2021ರಿಂದಲೇ ಅನ್ವಯವಾಗುವ ಸಾಧ್ಯತೆ ಇದೆ. ಸ್ಟೀಲ್‌ ಸೇರಿದಂತೆ ಕಾರು ಉತ್ಪಾದನೆಯಲ್ಲಿ ಅತ್ಯಗತ್ಯವಾಗಿರುವ ಲೋಹಗಳ ದರಗಳು ಒಂದೇ ಸಮನೆ ಏರಿಕೆಯಾಗಿರುವುದರಿಂದ ಕಾರುಗಳ ದರ ಏರಿಕೆ ಅನಿವಾರ್ಯ ಎಂದು ಕಂಪನಿ ಸ್ಪಷ್ಟನೆ ನೀಡಿದೆ. ಟಾಟಾ ಮೋಟಾರ್ಸ್‌ ಮೇನಲ್ಲಿ ಕಂಪನಿಯ ಕಾರುಗಳ ದರವನ್ನು ಶೇ. 1.8ರಷ್ಟು ಏರಿಕೆ ಮಾಡಿತ್ತು. ಇದೀಗ ಎರಡು ತಿಂಗಳೊಳಗೆ ಎರಡನೇ ಬಾರಿಗೆ ದರ ಏರಿಕೆಯನ್ನು ಕಂಪನಿ ಘೋಷಣೆ ಮಾಡಿದೆ. ಇದಕ್ಕೂ ಮೊದಲು ಜನವರಿಯಲ್ಲಿಯೂ ಕಂಪನಿ ಕಾರುಗಳ ಬೆಲೆಯಲ್ಲಿ 26,000 ರೂಪಾಯಿವರೆಗೆ ಏರಿಕೆ ಮಾಡಿತ್ತು.