ಎಲ್​ಪಿಜಿ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಪ್ರತಿ ಸಿಲಿಂಡರ್‌ಗೆ 25 ರೂ. ಏರಿಕೆ!

ಪೆಟ್ರೋಲಿಯಂ ಕಂಪನಿಗಳು ಮತ್ತೆ LPG ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಹೆಚ್ಚಿಸಿವೆ. ದೆಹಲಿಯಲ್ಲಿ, 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಈಗ 859.5 ರೂ.ಗೆ ಏರಿಕೆಯಾಗಿದೆ.

ಎಲ್​ಪಿಜಿ ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ಪ್ರತಿ ಸಿಲಿಂಡರ್‌ಗೆ 25 ರೂ. ಏರಿಕೆ!
Linkup
ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ಮತ್ತೆ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಹೆಚ್ಚಿಸಿವೆ. ದೆಹಲಿಯಲ್ಲಿ, 14.2 ಕೆಜಿ ಈಗ 859.5 ರೂ.ಗೆ ಏರಿಕೆಯಾಗಿದೆ. ಈ ಮೊದಲು ಪ್ರತಿ ಸಿಲಿಂಡರ್‌ ಬೆಲೆ 834.50 ರೂ. ಇತ್ತು. ಜುಲೈ 1 ರಂದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 25.50 ರೂ. ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಏರಿಕೆ ಮಾಡಲಾಗಿದೆ. ಎಲ್‌ಪಿಜಿ ಬೆಲೆ ಮತ್ತೆ ಏರಿಕೆ ಮುಂಬಯಿಯಲ್ಲಿ ಕೂಡ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರ 859.5 ರೂ,ಗೆ ಹೆಚ್ಚಳವಾಗಿದೆ. ಕೋಲ್ಕತದಲ್ಲಿ ಪ್ರತಿ ಸಿಲಿಂಡರ್‌ಗೆ 861 ರಿಂದ 886 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ ಮಂಗಳವಾರದಿಂದ 875.50 ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ 850.50 ರೂ. ಇತ್ತು. ಉತ್ತರ ಪ್ರದೇಶದ ಲಕ್ನೋದಲ್ಲಿ LPG ಸಿಲಿಂಡರ್‌ಗಾಗಿ ನೀವು 897.5 ರೂ. ಪಾವತಿಸಬೇಕಾಗುತ್ತದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಎಲ್‌ಪಿಜಿಗೆ 866.50 ರೂ. ಪಾವತಿಸಬೇಕು. 2021 ವರ್ಷದ ಆರಂಭದಲ್ಲಿ ಅಂದರೆ, ಜನವರಿಯಲ್ಲಿ, ದೆಹಲಿಯಲ್ಲಿ 694 ರೂಪಾಯಿಯಷ್ಟಿತ್ತು. ಇದನ್ನು ಫೆಬ್ರವರಿಯಲ್ಲಿ 719 ರೂ.ಗೆ ಏರಿಸಲಾಯಿತು. ಫೆಬ್ರವರಿ 15 ರಂದು 769 ರೂ.ಗೆ ಹೆಚ್ಚಿಸಲಾಯಿತು. ಇದರ ನಂತರ, ಫೆಬ್ರವರಿ 25 ರಂದು, ಸಿಲಿಂಡರ್ ಬೆಲೆಯನ್ನು 794 ರೂ.ಗೆ ಏರಿಸಲಾಯಿತು. ಮಾರ್ಚ್ ನಲ್ಲಿ ಮತ್ತೆ ಬೆಲೆ ಏರಿಸಿ ಪ್ರತಿ ಸಿಲಿಂಡರ್‌ಗೆ 819 ರೂ. ನಿಗದಿಮಾಡಲಾಯಿತು. ಏಪ್ರಿಲ್ ಆರಂಭದಲ್ಲಿ 10 ರೂ. ಕಡಿತ ಮಾಡಿದ ನಂತರ, ದೆಹಲಿಯಲ್ಲಿ ಎಲ್‌ಪಿಜಿಯ ಬೆಲೆ 809 ರೂ.ಗೆ ಇಳಿದಿತ್ತು. ಕಳೆದ ಡಿಸೆಂಬರ್ ನಿಂದ ಇಲ್ಲಿಯವರೆಗೆ, ಸಿಲಿಂಡರ್ ಬೆಲೆ ಸುಮಾರು 275 ರೂ. ಹೆಚ್ಚಳ ಕಂಡಿದೆ. ದೇಶದ ಪ್ರಮುಖ ನಗರಗಳಲ್ಲಿ LPG ಹೊಸ ಬೆಲೆ
  • ದಿಲ್ಲಿ: 859.5 ರೂ.
  • ಮುಂಬಯಿ: 859.50 ರೂ.
  • ಕೋಲ್ಕತ: 886.00 ರೂ.
  • ಚೆನ್ನೈ: 875.50 ರೂ.
  • ಲಖನೌ: 897.50 ರೂ.
  • ಅಹಮದಾಬಾದ್: 866.50 ರೂ.
ವಾಣಿಜ್ಯ ಸಿಲಿಂಡರ್ ಬೆಲೆ ಕೂಡ ದುಬಾರಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಹೊರತುಪಡಿಸಿ, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್(Commercial Cylinder Rate)ಕೂಡ 68 ರೂ. ದುಬಾರಿಯಾಗಿದೆ. ಈಗ 19 ಕೆಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1618 ರೂ.ಗೆ ಏರಿಕೆಯಾಗಿದೆ. ಇದು ಮೊದಲು 1550 ರೂ.ಗೆ ಲಭ್ಯವಿತ್ತು.