2021ರಲ್ಲಿ ಭಾರತದ ಜಿಡಿಪಿ 7.3%ರಷ್ಟು ಕುಸಿತ, 4 ದಶಕದಲ್ಲೇ ಗರಿಷ್ಠ

2021ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 1.6ರಷ್ಟು ಬೆಳವಣಿಗೆ ದಾಖಲಿಸಿದೆ. ಹೀಗಿದ್ದೂ ಒಟ್ಟಾರೆ 2020-21ರಲ್ಲಿ ದೇಶದ ಆರ್ಥಿಕತೆ ಶೇ. 7.3ರಷ್ಟು ಕುಸಿತ ಕಂಡಿದೆ. ಇದು ನಾಲ್ಕು ದಶಕದಲ್ಲೇ ಗರಿಷ್ಠ ಕುಸಿತವಾಗಿದೆ.

2021ರಲ್ಲಿ ಭಾರತದ ಜಿಡಿಪಿ 7.3%ರಷ್ಟು ಕುಸಿತ, 4 ದಶಕದಲ್ಲೇ ಗರಿಷ್ಠ
Linkup
ಹೊಸದಿಲ್ಲಿ: 2020-21ನೇ ಆರ್ಥಿಕ ವರ್ಷದಲ್ಲಿ ಭಾರತದ ಶೇ.7.3ರಷ್ಟು ಕುಸಿತ ಕಂಡಿದೆ ಎಂದು ಸರಕಾರದ ಅಂಕಿ ಅಂಶಗಳು ಹೇಳಿವೆ. ಕೊರೊನಾ ಬಿಕ್ಕಟ್ಟಿನ ನಡುವೆ ದೇಶದ ನಿವ್ವಳ ಉತ್ಪನ್ನ ದರ () ಕಳೆದ ನಾಲ್ಕು ದಶಕಗಳಲ್ಲೇ ಭಾರಿ ಕುಸಿತ ಕಂಡಿದೆ. ಸೋಮವಾರ ಕೇಂದ್ರ ಸಾಂಖ್ಯಿಕ ಇಲಾಖೆ ಜನವರಿ - ಮಾರ್ಚ್‌ ತ್ರೈಮಾಸಿಕದ ಜಿಡಿಪಿ ಹಾಗೂ 2020-21ನೇ ಸಾಲಿನ ಜಿಡಿಪಿ ದರವನ್ನು ಬಿಡುಗಡೆ ಮಾಡಿದೆ. 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 1.6ರಷ್ಟು ಬೆಳವಣಿಗೆ ದಾಖಲಿಸಿದೆ. ಹೀಗಿದ್ದೂ ಒಟ್ಟಾರೆ ಶೇ. 7.3ರಷ್ಟು ಕುಸಿತ ದಾಖಲಾಗಿದೆ. 2019-20ರಲ್ಲಿ ದೇಶದ ಜಿಡಿಪಿ ಕೇವಲ ಶೇ. 4ರಷ್ಟು ಬೆಳವಣಿಗೆ ಕಂಡಿತ್ತು. ಅದು 11 ವರ್ಷಗಳಲ್ಲೇ ಕನಿಷ್ಠ ಬೆಳವಣಿಗೆಯಾಗಿತ್ತು. ತರುವಾಯ ಇದೀಗ ಕೊರೊನಾ ಬಿಕ್ಕಟ್ಟಿನಲ್ಲಿ ಜಿಡಿಪಿ ಋಣಾತ್ಮಕತೆಗೆ ಹೊರಳಿದೆ. ಉತ್ಪಾದನೆ, ನಿರ್ಮಾಣ ವಲಯಗಳು ಕೊರೊನಾ ಬಿಕ್ಕಟ್ಟಿನಲ್ಲಿ ನಲುಗಿ ಹೋಗಿದ್ದು, ಜಿಡಿಪಿ ಕುಸಿತಕ್ಕೆ ಭಾರಿ ಕೊಡುಗೆ ನೀಡಿವೆ. ಕೊರೊನಾ ಕಾರಣಕ್ಕೆ 2020-21ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಕಂಡು ಕೇಳರಿಯದ ಶೇ. 24.38ರಷ್ಟು ಭಾರಿ ಕುಸಿತಕ್ಕೆ ಒಳಗಾಗಿತ್ತು. ನಂತರ ನಿಧಾನಕ್ಕೆ ಚೇತರಿಕೆ ಕಂಡಿತಾದರೂ ಋಣಾತ್ಮಕತೆಯಿಂದ ಹೊರಬರುವುದು ಸಾಧ್ಯವಾಗಿಲ್ಲ. 2021ರ ಎರಡನೇ ತ್ರೈಮಾಸಿಕದಲ್ಲಿ ಅಂದರೆ ಜುಲೈ - ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಮತ್ತೆ ಶೇ. 7.5ರಷ್ಟು ಕುಸಿತ ಕಂಡಿತ್ತು. ಅಕ್ಟೋಬರ್‌ - ಡಿಸೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ ಸ್ವಲ್ಪ ಚೇತರಿಕೆ ಕಂಡು ಧನಾತ್ಮಕ ಹಾದಿಗೆ ಮರಳಿತ್ತು. ಶೇ. 0.4ರಷ್ಟು ಬೆಳವಣಿಗೆ ದಾಖಲಿಸಿತ್ತು. ಕೇಂದ್ರ ಸಾಂಖ್ಯಿಕ ಇಲಾಖೆ 2021ರಲ್ಲಿ ಜಿಡಿಪಿ ಶೇ. 8ರಷ್ಟು ಕುಸಿತವಾಗಲಿದೆ ಎಂದು ಅಂದಾಜಿಸಿತ್ತು. ಆರ್‌ಬಿಐ ಶೇ. 7.5ರಷ್ಟು ಕುಸಿತ ನಿರೀಕ್ಷಿಸಿತ್ತು. ಆದರೆ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಕುಸಿತ ದಾಖಲಾಗಿರುವುದೇ ಈ ಹೊತ್ತಿನ ಸಮಾಧಾನ.