2ನೇ ಬಾರಿ ಪಿಎಫ್‌ ಮುಂಗಡ ಹಣ ಪಡೆಯಲು ಅವಕಾಶ ಕಲ್ಪಿಸಿದ ಇಪಿಎಫ್‌ಒ

ಕೊರೊನಾ ಲಾಕ್‌ಡೌನ್‌, ಉದ್ಯೋಗನಷ್ಟ ಮುಂತಾದ ಸಂಕಷ್ಟಗಳ ನಡುವೆ ದೈನಂದಿನ ಖರ್ಚು ವೆಚ್ಚಗಳಳಿಗೆ ನೌಕರರಿಗೆ ನೆರವಾಗುವ ನಿಟ್ಟಿನಲ್ಲಿ ಈ ಅವಕಾಶ ಕಲ್ಪಿಸಲಾಗಿದೆ ಎಂದು ಇಪಿಎಫ್‌ಒ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

2ನೇ ಬಾರಿ ಪಿಎಫ್‌ ಮುಂಗಡ ಹಣ ಪಡೆಯಲು ಅವಕಾಶ ಕಲ್ಪಿಸಿದ ಇಪಿಎಫ್‌ಒ
Linkup
ಹೊಸದಿಲ್ಲಿ: ಕೋವಿಡ್‌ 2ನೇ ಅಲೆಯ ವೇಳೆ ಸಂಕಷ್ಟಕ್ಕೆ ಸಿಲುಕಿರುವ ಉದ್ಯೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ನೌಕರರ ಭವಿಷ್ಯ ನಿಧಿಯಿಂದ () ಎರಡನೇ ಬಾರಿ ಮುಂಗಡ ಹಣ ಪಡೆಯಲು ನೌಕರ ಭವಿಷ್ಯ ನಿಧಿ ಸಂಸ್ಥೆಯು () ಅವಕಾಶ ಕಲ್ಪಿಸಿದೆ. ಲಾಕ್‌ಡೌನ್‌, ಉದ್ಯೋಗನಷ್ಟ ಮುಂತಾದ ಸಂಕಷ್ಟಗಳ ನಡುವೆ ದೈನಂದಿನ ಖರ್ಚು ವೆಚ್ಚಗಳನ್ನು ಭರಿಸಲು ನೌಕರರಿಗೆ ನೆರವಾಗುವ ನಿಟ್ಟಿನಲ್ಲಿ ಈ ಅವಕಾಶ ಕಲ್ಪಿಸಲಾಗಿದೆ ಎಂದು ಇಪಿಎಫ್‌ಒ ತಿಳಿಸಿದೆ. 2020ರ ಮಾರ್ಚ್‌ನಲ್ಲಿ ಮೊದಲ ಅಲೆ ಅರಂಭವಾದಾಗಲೇ ಕಾನೂನು ತಿದ್ದುಪಡಿ ತಂದು ಮೊದಲ ಬಾರಿಗೆ ಇಂತಹ ಅವಕಾಶವನ್ನು ಇಪಿಎಫ್‌ಒ ಕಲ್ಪಿಸಿತ್ತು. ಮೂರು ತಿಂಗಳ ಮೂಲ ವೇತನ ಹಾಗೂ ತುಟ್ಟಿಭತ್ಯೆಯನ್ನು ಅಥವಾ ತಮ್ಮ ಪಿಎಫ್‌ ಖಾತೆಯಲ್ಲಿರುವ ಹಣದಲ್ಲಿ ಶೇ. 75ರಷ್ಟರ ಈ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮುಂಗಡವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಎರಡನೇ ಅಲೆ ಹಿನ್ನೆಲೆಯಲ್ಲಿ ಈ 2ನೇ ಬಾರಿ ಈ ರೀತಿ ಮುಂಗಡ ಪಡೆಯುವ ಅವಕಾಶ ವಿಸ್ತರಿಸಲಾಗಿದೆ. ಇಎಸ್‌ಐ ಪರಿಹಾರ ಹೆಚ್ಚಳ ಕೋವಿಡ್‌-19 ಸೋಂಕಿನಿಂದ ಮೃತಪಟ್ಟ ಉದ್ಯೋಗಿಗಳಿಗೆ ಇಎಸ್‌ಐಸಿ ಸಮೂಹ ವಿಮೆ ಯೋಜನೆಯಡಿ ನೀಡುವ ವಿಮೆ ಪರಿಹಾರ ಮೊತ್ತವನ್ನು ಈಗಿನ 6 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ಇಪಿಎಫ್‌ಒ ಮತ್ತು ಇಎಸ್‌ಐಸಿ ವ್ಯಾಪ್ತಿಯಲ್ಲಿ ಉದ್ಯೋಗಿಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಪ್ರಕಟಿಸಿದೆ. ನೋಂದಾಯಿತ ಉದ್ಯೋಗಿಯ ಅವಲಂಬಿತರು ಪಿಂಚಣಿ ಪಡೆಯಲು ನಿಯಮಗಳನ್ನು ಸಡಿಲಿಸಲಾಗಿದೆ.