ತಿಂಗಳಲ್ಲಿ 13ನೇ ಬಾರಿಗೆ ತೈಲ ಬೆಲೆ ಏರಿಕೆ, ಮುಂಬಯಿನಲ್ಲಿ 100ರ ಅಂಚಿಗೆ ಪೆಟ್ರೋಲ್‌ ದರ

ಮಂಗಳವಾರ ಬೆಂಗಳೂರಿನಲ್ಲಿ ಪೆಟ್ರೋಲ್‌ ದರದಲ್ಲಿ 24 ಪೈಸೆ ಹೆಚ್ಚಳವಾಗಿದ್ದು ಲೀಟರ್‌ಗೆ 96.55 ರೂ.ಗೆ ತಲುಪಿದೆ. ಡೀಸೆಲ್‌ ದರ 27 ಪೈಸೆ ಏರಿಕೆಯಾಗಿದ್ದು 89.39 ರೂ.ಗೆ ಮುಟ್ಟಿದೆ. ಉದ್ಯಾನ ನಗರಿಯಲ್ಲಿಯೂ ಪೆಟ್ರೋಲ್‌ ದರ ಶತಕ ಬಾರಿಸುವ ದಿನಗಳು ದೂರವಿಲ್ಲ.

ತಿಂಗಳಲ್ಲಿ 13ನೇ ಬಾರಿಗೆ ತೈಲ ಬೆಲೆ ಏರಿಕೆ, ಮುಂಬಯಿನಲ್ಲಿ 100ರ ಅಂಚಿಗೆ ಪೆಟ್ರೋಲ್‌ ದರ
Linkup
ಹೊಸದಿಲ್ಲಿ: ಮಂಗಳವಾರ ಪೆಟ್ರೋಲ್‌ ದರದಲ್ಲಿ ಮತ್ತೆ 23 ಪೈಸೆ ಹೆಚ್ಚಳವಾಗಿದ್ದು, ಲೀಟರ್‌ ಡೀಸೆಲ್‌ ದರದಲ್ಲಿ 25 ಪೈಸೆ ಏರಿಕೆ ಮಾಡಲಾಗಿದೆ. ಈ ಮೂಲಕ ಮೇನಲ್ಲಿ 13ನೇ ಬಾರಿಗೆ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಏರಿಕೆಯಾಗಿವೆ. ಪರಿಣಾಮ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೀಟರ್‌ 93.44 ರೂ.ಗೆ ಹಾಗೂ 84.32 ರೂ.ಗೆ ಏರಿಕೆಯಾಗಿದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ ಪೆಟ್ರೋಲ್‌ ದರ ನೂರರ ಅಂಚಿಗೆ (99.71 ರೂ.) ಬಂದು ತಲುಪಿದೆ. ಬಹುಶಃ ಇನ್ನೊಂದು ಏರಿಕೆ ವೇಳೆ ಮುಂಬಯಿ ಪೆಟ್ರೋಲ್‌ ದರ 100 ರೂ. ಗಡಿ ದಾಟಲಿದೆ. ಈ ಮೂಲಕ ದೇಶದ ಮೆಟ್ರೋ ನಗರವೊಂದರಲ್ಲಿ ಪೆಟ್ರೋಲ್‌ ದರ ಮೊದಲ ಬಾರಿಗೆ ಸೆಂಚುರಿ ಬಾರಿಸಲಿದೆ. ನಗರದಲ್ಲಿ ಲೀಟರ್‌ ಡೀಸೆಲ್‌ ದರ 91.57 ರೂ. ಇದೆ. ಈಗಾಗಲೇ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಪೆಟ್ರೋಲ್‌ ದರ ಶತಕ ದಾಟಿದೆ. ಇದೇ ಸಾಲಿಗೆ ಈಗ ಮುಂಬಯಿ ಕೂಡ ಸೇರ್ಪಡೆಯಾಗುವ ಹಾದಿಯಲ್ಲಿದೆ. ಬೆಂಗಳೂರಿನಲ್ಲಿ ಎಷ್ಟಿದೆ ದರ? ಬೆಂಗಳೂರಿನಲ್ಲಿ ಮಂಗಳವಾರ ಪೆಟ್ರೋಲ್‌ ದರದಲ್ಲಿ 24 ಪೈಸೆ ಹೆಚ್ಚಳವಾಗಿದ್ದು ಲೀಟರ್‌ಗೆ 96.55 ರೂ.ಗೆ ತಲುಪಿದೆ. ಈ ಮೂಲಕ ಸೆಂಚುರಿಗೆ ಇನ್ನು ಕೇವಲ 3.45 ರೂ. ಬಾಕಿ ಇದೆ. ಡೀಸೆಲ್‌ ದರ 27 ಪೈಸೆ ಏರಿಕೆಯಾಗಿದ್ದು 89.39 ರೂ.ಗೆ ಮುಟ್ಟಿದೆ.