'02' ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್; ಇದೊಂದು ಮೆಡಿಕಲ್‌ ಥ್ರಿಲ್ಲರ್‌ ಚಿತ್ರ

'ಮದಗಜ' ಸಿನಿಮಾ ಸುಂದರಿ ಆಶಿಕಾ ರಂಗನಾಥ್‌ ಕನ್ನಡದಲ್ಲಿ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಆ ಸಿನಿಮಾದ ಬಗ್ಗೆ ಲವಲವಿಕೆ ಜತೆ ಮಾತನಾಡಿದ್ದಾರೆ. ಸಿನಿಮಾ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

'02' ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್; ಇದೊಂದು ಮೆಡಿಕಲ್‌ ಥ್ರಿಲ್ಲರ್‌ ಚಿತ್ರ
Linkup
(ಹರೀಶ್‌ ಬಸವರಾಜ್‌) ಕೆಲ ದಿನಗಳ ಹಿಂದೆಯಷ್ಟೇ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದ ‌ ಇದೀಗ ಕನ್ನಡದಲ್ಲಿ '02' ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಪ್ರಶಾಂತ್‌ ಮತ್ತು ರಾಘವ್‌ ನಿರ್ದೇಶನ ಮಾಡುತ್ತಿದ್ದಾರೆ. ಇದುವರೆಗೂ ಕಮರ್ಷಿಯಲ್‌ ಸಿನಿಮಾಗಳಲ್ಲಿ ನಟಿಸುತ್ತಲೇ ತಮ್ಮ ಛಾಪು ಮೂಡಿಸಿದ್ದ ನಟಿ ಆಶಿಕಾ ರಂಗನಾಥ್‌ ಈ ಬಾರಿ ಕೊಂಚ ವಿಭಿನ್ನ ಸಬ್ಜೆಕ್ಟ್ ಓಕೆ ಮಾಡಿದ್ದಾರೆ. '02' ಒಂದು ಮೆಡಿಕಲ್‌ ಥ್ರಿಲ್ಲರ್‌ ಸಿನಿಮಾ. ಮೆಡಿಕಲ್‌ ರಿಸರ್ಚ್ ಬಗ್ಗೆ ಸಿನಿಮಾದ ಕಥೆ ನಡೆಯುತ್ತಿದೆ. ನನ್ನ ಕರಿಯರ್‌ ಆರಂಭ ಆದಾಗಿನಿಂದ ಇಲ್ಲಿಯವರೆಗೂ ನಾನು ಇಂತಹ ಕಥೆಯಲ್ಲಿ ನಟಿಸಿರಲಿಲ್ಲ. ಈ ಸಿನಿಮಾದಲ್ಲಿ ನಾನು ಡಾಕ್ಟರ್‌ ಆಗಿ ನಟಿಸುತ್ತಿದ್ದೇನೆ ಎನ್ನುತ್ತಾರೆ ಆಶಿಕಾ ರಂಗನಾಥ್‌ ನಿರ್ದೇಶಕರು ನನಗೆ ಮೊದಲು ಸಿನಿಮಾದ ಸಾರಾಂಶ ಕಳಿಸಿದ್ದರು. ಬಹಳ ಇಂಟ್ರೆಸ್ಟಿಂಗ್‌ ಎನಿಸಿತು. ಹಾಗಾಗಿ ಸಂಪೂರ್ಣ ಸ್ಕ್ರಿಪ್ಟ್ ತರಿಸಿ ಓದಿದೆ. ಬಹಳ ಥ್ರಿಲ್ಲಿಂಗ್‌ ಮತ್ತು ಇಷ್ಟವಾಯಿತು. ತಕ್ಷಣ ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದೆ' ಎನ್ನುತ್ತಾರೆ ಆಶಿಕಾ ರಂಗನಾಥ್‌. 'ಈ ಕಥೆ ಮತ್ತು ಪಾತ್ರದ ಬಗ್ಗೆ ವಿವರ ಹೇಳಲಾಗುವುದಿಲ್ಲ. ಆದರೆ ಒಳ್ಳೆ ಥ್ರಿಲ್ಲಿಂಗ್‌ ಅಂಶಗಳಿರುವ ಸಿನಿಮಾವಿದು. ಚಿತ್ರಕಥೆಯೇ ಸಿನಿಮಾದ ಹೈಲೈಟ್‌. ಕಮರ್ಷಿಯಲ್‌ ಸಿನಿಮಾಗಳಲ್ಲಿ ಪ್ರೀತಿ, ಪ್ರೇಮ, ಭಾವನಾತ್ಮಕ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತೇವೆ. ಈ ರೀತಿಯ ಸ್ಕ್ರಿಪ್ಟ್‌ಗಳಲ್ಲಿ ಕೊಂಚ ವಿಭಿನ್ನವಾದ ನಟನೆಯ ಅವಶ್ಯಕತೆ ಇರುತ್ತದೆ. ನನ್ನ ಪಾತ್ರ ವಿಶಿಷ್ಟವಾಗಿದ್ದು, ಇದೊಂದು ರೀತಿಯಲ್ಲಿ ಒಳ್ಳೆಯ ಅವಕಾಶ ಎನ್ನಬಹುದು. ಪುನೀತ್‌ ರಾಜ್‌ಕುಮಾರ್‌ ಅವರ ನಿರ್ಮಾಣದಲ್ಲಿ ಸಿನಿಮಾವಾಗುತ್ತಿರುವುದು ಖುಷಿಯ ವಿಚಾರ' ಎನ್ನುತ್ತಾರೆ ಆಶಿಕಾ. ಅಕ್ಟೋಬರ್‌ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಆಶಿಕಾ ಅವರದ್ದೇ ಮುಖ್ಯ ಪಾತ್ರ. ವಿಭಿನ್ನ ಶೈಲಿಯ ನಿರೂಪಣೆ ಸಿನಿಮಾದಲ್ಲಿ ಇರುತ್ತದೆ. ಆಶಿಕಾ ಜತೆ ಇನ್ನಿಬ್ಬರು ಪ್ರಮುಖ ಪಾತ್ರಧಾರಿಗಳು ಇದ್ದಾರೆ, ಅವರ ಆಯ್ಕೆಯಾಗಿಲ್ಲ ಎಂದು ನಿರ್ದೇಶಕ ಪ್ರಶಾಂತ್‌ ಹೇಳಿದ್ದಾರೆ. ಕಥೆ ಬಹಳ ಇಂಟ್ರೆಸ್ಟಿಂಗ್‌ ಆಗಿದೆ. ಈ ರೀತಿಯ ಸ್ಕ್ರಿಪ್ಟ್‌ನ ಭಾಗವಾಗುವುದು ಕಲಾವಿದರಿಗೆ ಉತ್ತಮ ಅವಕಾಶ. ನನ್ನ ಪಾತ್ರದ ಸುತ್ತ ಕಥೆ ನಡೆಯುತ್ತದೆ. ನಿರ್ದೇಶಕರಿಬ್ಬರೂ ಬಹಳ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ ನಟಿ ಆಶಿಕಾ ರಂಗನಾಥ್ ಕನ್ನಡದ ನಂತರ ಮೊದಲ ಬಾರಿಗೆ ತಮಿಳು ಸಿನಿಮಾ ಮೂಲಕ ಆಶಿಕಾ ರಂಗನಾಥ್ ಅವರು ಪರಭಾಷಾ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿನಡೆಯುವ ಕ್ರೀಡೆ ಆಧರಿತ ಸಿನಿಮಾವಿದು. ಹಳ್ಳಿ ಹುಡುಗಿಯ ಪಾತ್ರ. ಬಹಳ ಸ್ಟ್ರಾಂಗ್‌ ಆಗಿರುವ ಪಾತ್ರ' ಎಂದು ಆಶಿಕಾ ಈ ಹಿಂದೆಯೇ ಹೇಳಿದ್ದಾರೆ. ಸರ್ಕುಣಂ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಮೊಮ್ಮಗ ಅಥರ್ವ ಈ ಚಿತ್ರದ ಹೀರೋ. ಅಥರ್ವ ತಮಿಳು ಚಿತ್ರರಂಗದಲ್ಲಿ ಈಗಾಗಲೇ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ಮಾಡಿದ್ದಾರೆ.