ಹಿಂದಿಗೆ ರೀಮೇಕ್ ಆಗುತ್ತಿದೆ ಕನ್ನಡದ 'ಸಂಕಷ್ಟಕರ ಗಣಪತಿ' ಸಿನಿಮಾ

ಕನ್ನಡದ 'ಸಂಕಷ್ಟಕರ ಗಣಪತಿ' ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದೆ. 'ಸಂಕಷ್ಟಕರ ಗಣಪತಿ' ಸಿನಿಮಾ ಹಿಂದಿಯಲ್ಲಿ 'ಬಾಯೆ ಹಾಥ್ ಕಾ ಖೇಲ್' ಎಂಬ ಶೀರ್ಷಿಕೆಯಲ್ಲಿ ನಿರ್ಮಾಣವಾಗುತ್ತಿದೆ.

ಹಿಂದಿಗೆ ರೀಮೇಕ್ ಆಗುತ್ತಿದೆ ಕನ್ನಡದ 'ಸಂಕಷ್ಟಕರ ಗಣಪತಿ' ಸಿನಿಮಾ
Linkup
ಸಂಕಷ್ಟಹರ ಗಣಪತಿ ಅಲ್ಲ... ''! ಶೀರ್ಷಿಕೆಯಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದಿದ್ದ ಸಿನಿಮಾ 'ಸಂಕಷ್ಟಕರ ಗಣಪತಿ'. 2018ರಲ್ಲಿ ಬಿಡುಗಡೆಯಾಗಿದ್ದ 'ಸಂಕಷ್ಟಕರ ಗಣಪತಿ' ಚಿತ್ರ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯ ಸುತ್ತ ಹೆಣೆದ ಕಥಾಹಂದರ ಹೊಂದಿತ್ತು. ರೊಮ್ಯಾನ್ಸ್ ಮತ್ತು ಕಾಮಿಡಿ ಮಿಕ್ಸ್ ಆಗಿದ್ದ 'ಸಂಕಷ್ಟಕರ ಗಣಪತಿ' ಸಿನಿಮಾ ನಗಿಸುತ್ತಲೇ ಗಂಭೀರ ವಿಷಯವನ್ನು ಪ್ರೇಕ್ಷಕರಿಗೆ ತಿಳಿಸಿಕೊಟ್ಟಿತ್ತು. ನಾಯಕನ ಕೈಯೇ ನಾಯಕನಿಗೆ ವಿಲನ್ ಆಗಿದ್ದ ವಿಚಿತ್ರ ಕಥೆ ಹೊಂದಿದ್ದ 'ಸಂಕಷ್ಟಕರ ಗಣಪತಿ' ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿತ್ತು. ಇದೀಗ ಇದೇ 'ಸಂಕಷ್ಟಕರ ಗಣಪತಿ' ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದೆ. 'ಸಂಕಷ್ಟಕರ ಗಣಪತಿ' ಚಿತ್ರದ ಹಿಂದಿ ರೀಮೇಕ್ ಹಕ್ಕುಗಳನ್ನು 'ಕಾರ್ವಾನ್' ಮತ್ತು 'ರಶ್ಮಿ ರಾಕೆಟ್' ಖ್ಯಾತಿಯ ಆಕರ್ಷ್ ಖುರಾನಾ ಅವರು ಸನ್ನಿ ಖುರಾನಾ ಹಾಗೂ ವಿಕಾಸ್ ಶರ್ಮಾರವರ ಜೊತೆಗೂಡಿ ಖರೀದಿಸಿದ್ದಾರೆ. ಈಗ 'ಸಂಕಷ್ಟಕರ ಗಣಪತಿ' ಸಿನಿಮಾ ಹಿಂದಿಯಲ್ಲಿ 'ಬಾಯೆ ಹಾಥ್ ಕಾ ಖೇಲ್' ಎಂಬ ಶೀರ್ಷಿಕೆಯಲ್ಲಿ ನಿರ್ಮಾಣವಾಗುತ್ತಿದೆ. ಅಂದ್ಹಾಗೆ, 'ಸಂಕಷ್ಟಕರ ಗಣಪತಿ' ಚಿತ್ರಕ್ಕೆ ಅರ್ಜುನ್ ಕುಮಾರ್ ನಿರ್ದೇಶನ ಮಾಡಿದ್ದರು. ಲಿಖಿತ್ ಶೆಟ್ಟಿ, ಅಚ್ಯುತ್ ಕುಮಾರ್, ಶೃತಿ ಗೊರಾಡಿಯಾ, ನಾಗಭೂಷಣ, ಮಂಜುನಾಥ ಹೆಗಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿತ್ತು. ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ರವರ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಮತ್ತು ವಿಜೇತ್ ಚಂದ್ರ, ಮಧು ತುಂಬಕೆರೆ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದರು.