![](https://vijaykarnataka.com/photo/82310313/photo-82310313.jpg)
ಬಹುಭಾಷಾ ನಟ ಮೊದಲಿನಿಂದಲೂ ಪಕ್ಷವನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಪಕ್ಷದ ಕೆಲವೊಂದು ತತ್ವ-ಸಿದ್ಧಾಂತಗಳ ಬಗ್ಗೆ ಸಿದ್ದಾರ್ಥ್ಗೆ ಅಸಮಾಧಾನ ಇದೆ. ಇದೀಗ ಅವರಿಗೆ ಮತ್ತು ಅವರ ಕುಟುಂಬದವರ ಮೇಲೆ ಅವಾಚ್ಯ ಶಬ್ಧಗಳನ್ನು ಬಳಸಿ, ಬೆದರಿಕೆ ಹಾಕಲಾಗುತ್ತಿದೆಯಂತೆ. ಅಲ್ಲದೆ, ಅತ್ಯಾಚಾರ, ಕೊಲೆ ಬೆದರಿಕೆಯನ್ನೂ ಹಾಕಲಾಗಿದೆಯಂತೆ. ಈ ಬಗ್ಗೆ ಸಿದ್ಧಾರ್ಥ್ ಅವರು ಟ್ವೀಟ್ ಮಾಡಿದ್ದು, 'ಇದಕ್ಕೆಲ್ಲ ತಮಿಳುನಾಡಿನ ಬಿಜೆಪಿ ಐಟಿ ಸೆಲ್ನವರೇ ಕಾರಣ' ಎಂದಿದ್ದಾರೆ. ಅಷ್ಟಕ್ಕೂ ಅವರು ಮಾಡಿರುವ ಟ್ವೀಟ್ನಲ್ಲಿ ಏನಿದೆ?
ಸಿದ್ದಾರ್ಥ್ ಫೋನ್ ನಂಬರ್ ಲೀಕ್!
ಈ ಕುರಿತು ಸಿದ್ದಾರ್ಥ್ ಟ್ವೀಟ್ ಮಾಡಿದ್ದು, 'ನನ್ನ ಫೋನ್ ನಂಬರ್ ಅನ್ನು ತಮಿಳುನಾಡು ಬಿಜೆಪಿ ಐಟಿ ಸೆಲ್ನ ಸದಸ್ಯರು ಲೀಕ್ ಮಾಡಿದ್ದಾರೆ. 500ಕ್ಕೂ ಅಧಿಕ ಕರೆಗಳು ಬಂದಿವೆ. ಅದರಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಅವಾಚ್ಯ ಬೈಗುಳ, ರೇಪ್ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಎಲ್ಲವೂ ರೆಕಾರ್ಡ್ ಆಗಿದೆ (ಅವರಿಗೆ ಬಿಜೆಪಿ ಜೊತೆಗೆ ನಂಟು ಇದೆ) ಮತ್ತು ಅದೆಲ್ಲವನ್ನೂ ಪೊಲೀಸರಿಗೆ ನೀಡಲಾಗಿದೆ. ನಾನು ಸುಮ್ಮನೇ ಇರುವುದಿಲ್ಲ. ಇನ್ನೂ ಪ್ರಯತ್ನಿಸಿ..' ಎಂದು ಪ್ರಧಾನಿ ಮತ್ತು ಗೃಹ ಸಚಿವ ಅಮಿತಾ ಶಾ ಅವರನ್ನು ಸಿದ್ದಾರ್ಥ್ ಟ್ಯಾಗ್ ಮಾಡಿದ್ದಾರೆ.
ಇವನು ಮತ್ತೆಂದೂ ಮಾತನಾಡಬಾರದು!
ಸೋಶಿಯಲ್ ಮೀಡಿಯಾ ಮೂಲಕ ತಮಗೆ ಬೆದರಿಕೆ ಹಾಕಿದ ಪೋಸ್ಟ್ಗಳ ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡಿಕೊಂಡಿರುವ ನಟ ಸಿದ್ದಾರ್ಥ್ ಮತ್ತೊಂದು ಟ್ವೀಟ್ ಮಾಡಿದ್ದಾರೆ. 'ತಮಿಳುನಾಡಿನ ಬಿಜೆಪಿ ಕಾರ್ಯಕರ್ತರೊಬ್ಬರು ನನ್ನ ಮೊಬೈಲ್ ನಂಬರ್ ಅನ್ನು ವೈರಲ್ ಮಾಡಿ, 'ಇವನ ಮೇಲೆ ದಾಳಿ ಮಾಡಿ, ಕಿರುಕುಳ ನೀಡಿ' ಎಂದು ಕರೆಕೊಟ್ಟಿದ್ದಾರೆ. ಅವರು ಹೇಳುತ್ತಾರೆ, 'ಇವನು ಇನ್ಮೇಲೆ ಮಾತನಾಡಲೇಬಾರದು' ಎಂದು. ನಾವು ಕೋವಿಡ್ನಿಂದ ಬಚಾವ್ ಆಗಿ ಬದುಕುಬಹುದು. ಆದರೆ, ಇಂಥವರಿಂದ ಸಾಧ್ಯವೇ' ಎಂದು ಸಿದ್ದಾರ್ಥ್ ಪ್ರಶ್ನೆ ಮಾಡಿದ್ದಾರೆ.