Vijay Birthday: ಮೃಗವಾಗಿ ಅಬ್ಬರಿಸಲಿದ್ದಾರೆ 'ದಳಪತಿ' ವಿಜಯ್! ಫ್ಯಾನ್ಸ್‌ಗೆ ಭರ್ಜರಿ ಬರ್ತ್‌ಡೇ ಗಿಫ್ಟ್

ಕಾಲಿವುಡ್ ದಳಪತಿ ವಿಜಯ್‌ ಅವರಿಗೆ ಜೂನ್ 22ರಂದು ಹುಟ್ಟಹಬ್ಬ. ಆ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಸಿಕ್ಕಿದೆ. ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಲಾಂಚ್ ಮಾಡಲಾಗಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Vijay Birthday: ಮೃಗವಾಗಿ ಅಬ್ಬರಿಸಲಿದ್ದಾರೆ 'ದಳಪತಿ' ವಿಜಯ್! ಫ್ಯಾನ್ಸ್‌ಗೆ ಭರ್ಜರಿ ಬರ್ತ್‌ಡೇ ಗಿಫ್ಟ್
Linkup
ಕಾಲಿವುಡ್‌ನಲ್ಲಿ 'ದಳಪತಿ' ವಿಜಯ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರ ಸಿನಿಮಾಗಳು 100-200 ಕೋಟಿ ರೂ. ಗಳಿಕೆ ಮಾಡುತ್ತವೆ. ಅವರ ಹೊಸ ಸಿನಿಮಾಗಳ ಮೇಲೆ ಫ್ಯಾನ್ಸ್ ದೊಡ್ಡಮಟ್ಟದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. 'ಮಾಸ್ಟರ್‌'ನಂಥ ಹಿಟ್ ಸಿನಿಮಾದ ನೀಡಿದ ವಿಜಯ್, ಆ ಬಳಿಕ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಈ ಬಾರಿ ಪಕ್ಕಾ ಆ್ಯಕ್ಷನ್‌ ಪ್ರಧಾನ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಜೂ.22ರಂದು ವಿಜಯ್ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ ಅವರ ಮುಂದಿನ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್ ರಿಲೀಸ್ ಮಾಡಲಾಗಿದೆ. ವಿಜಯ್‌ ಸಿನಿಮಾಕ್ಕೆ 'ಬೀಸ್ಟ್' ಶೀರ್ಷಿಕೆ ಬೀಸ್ಟ್ ಎಂದರೆ ಇಂಗ್ಲಿಷ್‌ನಲ್ಲಿ ಮೃಗ ಎಂಬರ್ಥವಿದೆ. ಫಸ್ಟ್‌ ಲುಕ್‌ನಲ್ಲಿ ವಿಜಯ್‌ ಕೈಯಲ್ಲಿ ಬಂದೂಕು ಇರುವುದರಿಂದ 'ಬೀಸ್ಟ್' ಭರ್ಜರಿ ಸಾಹಸ ಪ್ರಧಾನ ಸಿನಿಮಾವೇ ಆಗಿರಬಹುದಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಇನ್ನು, ಈ ಸಿನಿಮಾವನ್ನು ಸನ್‌ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಜಯ್ ನಟನೆಯ 'ಸರ್ಕಾರ್‌' ಚಿತ್ರಕ್ಕೆ ಹಣ ಹಾಕಿದ್ದು ಇದೇ ಸನ್‌ ಪಿಕ್ಚರ್ಸ್ ಸಂಸ್ಥೆ. ಇದೀಗ ಮತ್ತೊಮ್ಮೆ ವಿಜಯ್‌ ಜೊತೆ ಕೈಜೋಡಿಸಿದ್ದಾರೆ ಸನ್‌ ಪಿಕ್ಚರ್ಸ್‌ನ ಕಲಾನಿಧಿಮಾರನ್‌. ನೆಲ್ಸನ್ ನಿರ್ದೇಶನದ ಸಿನಿಮಾ ಈ ಹಿಂದೆ 'ಕೊಲಮಾವು ಕೋಕಿಲಾ', 'ಡಾಕ್ಟರ್' ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ನೆಲ್ಸನ್‌ ದಿಲಿಪ್‌ಕುಮಾರ್ ''ಗೆ ನಿರ್ದೇಶನ ಮಾಡುತ್ತಿದ್ದಾರೆ. ಹಾಡುಗಳಿಗೆ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡುತ್ತಿದ್ದು, ಮನೋಜ್ ಪರಮಹಂಸ ಇದರ ಛಾಯಾಗ್ರಹಣ ಮಾಡುತ್ತಿದ್ದಾರೆ. ಜಾರ್ಜಿಯಾ ದೇಶದಲ್ಲಿ ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡಿರುವ ಬೀಸ್ಟ್‌ಗೆ ಜುಲೈನಿಂದ ಪುನಃ ಶೂಟಿಂಗ್ ಆರಂಭವಾಗಲಿದೆ. ವಿಜಯ್‌ಗೆ ಪೂಜಾ ನಾಯಕಿ ಸದ್ಯ ಟಾಲಿವುಡ್‌ನಲ್ಲಿ ನಂಬರ್ ಒನ್ ಸ್ಟಾರ್ ಆಗಿ ಮಿಂಚುತ್ತಿರುವ ನಟಿ ಪೂಜಾ ಹೆಗ್ಡೆಗೆ ಬಾಲಿವುಡ್‌ನಲ್ಲೂ ಬೇಡಿಕೆ ಇದೆ. ಇದೀಗ ಅವರು ಇದೇ ಮೊದಲ ಬಾರಿಗೆ ವಿಜಯ್‌ಗೆ ನಾಯಕಿಯಾಗಿದ್ದಾರೆ. ಅಚ್ಚರಿ ಎಂದರೆ, 2012ರಲ್ಲಿ 'ಮುಗಮೂಡಿ' ಎಂಬ ತಮಿಳು ಸಿನಿಮಾದ ಮೂಲಕವೇ ಪೂಜಾ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದು. ಇದೀಗ 9 ವರ್ಷಗಳ ನಂತರ ಮತ್ತೆ ಅವರು 'ಬೀಸ್ಟ್‌' ಮೂಲಕ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ.