ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಸ್ಟುಪಿಡ್ ವರ್ಡ್ ಎಂದ ನಟ ರಾಗಿಣಿ ದ್ವಿವೇದಿ

ಸ್ಯಾಂಡಲ್‌ವುಡ್‌ನ ನಟಿ ರಾಗಿಣಿ ದ್ವಿವೇದಿ ಅವರು ಡ್ರಗ್ಸ್ ಮಾಫಿಯಾ ವಿಚಾರವಾಗಿ ಜೈಲು ಸೇರಿದ್ದರು. ಆ ಕುರಿತು ಮಾತನಾಡಿದ್ದು ಕಾಸ್ಟಿಂಗ್ ಕೌಚ್ ಕುರಿತು ಕೂಡ ಮಾತನಾಡಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಸ್ಟುಪಿಡ್ ವರ್ಡ್ ಎಂದ ನಟ ರಾಗಿಣಿ ದ್ವಿವೇದಿ
Linkup
ನಾನು ಯಾವುದೇ ತಪ್ಪು ಮಾಡಿಲ್ಲ. ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಆದರೆ ಹೆಚ್ಚಿಗೆ ಮಾತನಾಡಲ್ಲ ಎಂದು ನಟಿ ತಿಳಿಸಿದರು. ಡ್ರಗ್ಸ್ ವಿಚಾರದಲ್ಲಿ ಟಾರ್ಗೆಟ್ ಮಾಡಲಾಗಿದೆ ವಿಜಯಪುರ ಹೋಟೆಲ್ ಮಿಲನ್‌ನಲ್ಲಿ ಬಾಲಾಜಿ ಗುತ್ತೇದಾರ ಬ್ರಿಗೇಡ್ ಫೌಂಡೇಶನ್ ವತಿಯಿಂದ ಮಂಗಳಮುಖಿಯರಿಗೆ ಆಹಾರ ಧಾನ್ಯ ಕಿಟ್ ವಿತರಿಸಿದ ಅವರು, "ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸವಿದೆ. ನಾವು ತಪ್ಪು ಮಾಡಿಲ್ಲ ಅಂದ್ರೆ ಟೆನ್ಶನ್ ಮಾಡಿಕೊಳ್ಳಬಾರದು. ಡ್ರಗ್ಸ್ ವಿಚಾರದಲ್ಲಿ ಟಾರ್ಗೆಟ್ ಮಾಡಲಾಗಿದೆ. ಬರೀ ಒಂದು ಕೇಸ್ ವಿಚಾರವಾಗಿ ಮಾತ್ರವಲ್ಲ. ಹೆಣ್ಣು ಮಕ್ಕಳು ಅಂದ್ರೆ ಸಾಕು ಪ್ರತಿಯೊಂದು ವಿಚಾರದಲ್ಲೂ ಟಾರ್ಗೆಟ್ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳನ್ನು ತುಂಬಾ ಸುಲಭವಾಗಿ ಟಾರ್ಗೆಟ್ ಮಾಡೋದು ಹವ್ಯಾಸವಾಗಿದೆ " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್ ಸಂಬರಗಿ ಪರಿಚಯವಿಲ್ಲ "ಬ್ಲೇಮ್ ಮಾಡೋ ಬದಲು ಎಲ್ಲರೂ ಅವರವವರ ಕೆಲಸದಲ್ಲಿ ಕರೆಕ್ಟ್ ಆಗಿದ್ರೆ ಸಾಕು. ಪ್ರಶಾಂತ ಸಂಬರಗಿ ಅವರು ನಿಜವಾಗಿಯೂ ನನಗೆ ಪರಿಚಯವಿಲ್ಲ, ಅವರೊಂದಿಗೆ ನಾನು ಮಾತಾಡಿಯೂ ಇಲ್ಲ. ಅವರು ಏನು ಮಾತಾಡ್ತಾರೋ ಮಾತಾಡಲಿ. ನನಗೆ ಫ್ಯಾನ್ಸ್ ಇದಾರೆ, ಅವರಿಗೆಲ್ಲ ಧನ್ಯವಾದ ಹೇಳ್ತೆನೆ. ನನ್ನನ್ನು ಇಷ್ಟ ಪಟ್ಟವರಿಗೂ, ಇಷ್ಟಪಡದವರಿಗೂ ಥ್ಯಾಂಕ್ಯೂ" ಎಂದು ವಿರೋಧಿಗಳಿಗೆ ರಾಗಿಣಿ ಟಾಂಗ್ ನೀಡಿದರು. ಅನ್ನೋದು ಸ್ಟುಪಿಡ್ ವರ್ಡ್ "ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನೀವು ನಡೆಸುವ ಜೀವನದ ಜರ್ನಿ ಮೇಲೆ ಅದು ಆಧಾರಿತ ಆಗಿರುತ್ತೆ. ಯಾವತ್ತೂ ಒಂದೇ ಕೈಯಲ್ಲಿ ಚಪ್ಪಾಳೆ ಆಗೋದಿಲ್ಲ. ಎರಡು ಥರ ಜೀವನ ಇದೆ. ಒಂದು ಶಾರ್ಟ್ ಕಟ್ ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ನಾವು ಬೆಳೆಯುತ್ತೇವೆ, ಶಾರ್ಟ್ ಕಟ್ ತಗೊಂಡ್ರೆ ಕೆಲವೊಮ್ಮೆ ರಾಂಗ್ ಪರ್ಸನ್ ಮೀಟ್ ಮಾಡಬೇಕಾಗುತ್ತೆ. ಇನ್ನು ಅತೀ ಶೀಘ್ರದಲ್ಲಿ ಹೆಸರಿ, ಖ್ಯಾತಿ, ದುಡ್ಡು ಗಳಿಸೋದನ್ನ ಬಿಟ್ಟು, ನಮ್ಮ ಕೆಲಸದ ಮೇಲೆ ನಾವು ಏನು ಮಾಡ್ತಿವಿ ಅನ್ನೋದರ ಮೇಲೆ ಫೋಕಸ್ ಮಾಡಬೇಕು" ಎಂದು ರಾಗಿಣಿ ಹೇಳಿದ್ದಾರೆ. ಕಾಸ್ಟಿಂಗ್ ಕೌಚ್ ನೋಡಿಲ್ಲ "12 ವರ್ಷದಿಂದ ಸಿನಿಮಾ ಇಂಡಸ್ಟ್ರೀಯಲ್ಲಿದ್ದೇನೆ, ನಾನು ಕಾಸ್ಟಿಂಗ್ ಕೌಚ್ ಬಗ್ಗೆ ನೋಡಿಲ್ಲ. ಯಾರಾದರೂ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ರೆ ಬಹುಶಃ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಅವರಿಗೆ ಆ ಥರ ಅನುಭವ ಆಗಿರಬೇಕು, ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ" ಎಂದು ರಾಗಿಣಿ ಹೇಳಿದ್ದಾರೆ.