ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ - ನಟಿ ಪತ್ರಲೇಖ

ಇಂದು (ನವೆಂಬರ್ 15) ಬಾಲಿವುಡ್ ನಟ ರಾಜ್‌ಕುಮಾರ್ ರಾವ್ - ಪತ್ರಲೇಖ ವಿವಾಹ ಮಹೋತ್ಸವ ನಡೆಯಲಿದೆ. ವರದಿಗಳ ಪ್ರಕಾರ, ಚಂಡೀಗಢದ ಸೆವೆನ್ ಸ್ಟಾರ್ ವೆಡ್ಡಿಂಗ್ ಡೆಸ್ಟಿನೇಷನ್‌ನಲ್ಲಿ ರಾಜ್‌ಕುಮಾರ್ ರಾವ್ - ಪತ್ರಲೇಖ ವಿವಾಹ ಜರುಗಲಿದೆ.

ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ - ನಟಿ ಪತ್ರಲೇಖ
Linkup
ಬಾಲಿವುಡ್‌ನಲ್ಲಿ ಸಂಭ್ರಮ ಜೋರಾಗಿದೆ. ಒಂದ್ಕಡೆ ಕತ್ರಿನಾ ಕೈಫ್ - ವಿಕ್ಕಿ ಕೌಶಲ್ ಮದುವೆ ತಯಾರಿ ನಡೆಯುತ್ತಿದೆ. ಇನ್ನೊಂದ್ಕಡೆ ನಟ - ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು (ನವೆಂಬರ್ 15) ಬಾಲಿವುಡ್ ನಟ ರಾಜ್‌ಕುಮಾರ್ ರಾವ್ - ಪತ್ರಲೇಖ ಮಹೋತ್ಸವ ನಡೆಯಲಿದೆ. ವರದಿಗಳ ಪ್ರಕಾರ, ಚಂಡೀಗಢದ ಸೆವೆನ್ ಸ್ಟಾರ್ ವೆಡ್ಡಿಂಗ್ ಡೆಸ್ಟಿನೇಷನ್‌ನಲ್ಲಿ ರಾಜ್‌ಕುಮಾರ್ ರಾವ್ - ಪತ್ರಲೇಖ ವಿವಾಹ ಜರುಗಲಿದೆ. ಅದ್ಧೂರಿಯಾಗಿ ಜರುಗಿದ ವಿವಾಹ ಪೂರ್ವ ಶಾಸ್ತ್ರಗಳು ಕಳೆದ ನವೆಂಬರ್ 13 ರಂದು ರಾಜ್‌ಕುಮಾರ್ ರಾವ್ - ಪತ್ರಲೇಖ ಅವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನಡೆಯಿತು. ನವೆಂಬರ್ 14 ರಂದು ಮೆಹಂದಿ ಮತ್ತು ಸಂಗೀತ ಸಮಾರಂಭ ಕೂಡ ಭರ್ಜರಿಯಾಗಿ ಸಾಗಿತು. ಇದೀಗ ನವೆಂಬರ್ 15 ರಂದು ವಿವಾಹ ಮಹೋತ್ಸವ ಜರುಗಲಿದೆ. ಮದುವೆಗೆ ಸಾಕ್ಷಿಯಾಗಲಿದ್ದಾರೆ ತಾರೆಯರು ನಟ ರಾಜ್‌ಕುಮಾರ್ ರಾವ್ ಹಾಗೂ ಪತ್ರಲೇಖ ಅವರ ವಿವಾಹಕ್ಕೆ ಫರಾ ಖಾನ್, ನಟಿ ಹುಮಾ ಖುರೇಶಿ, ಸಾಕಿಬ್ ಸಲೀಂ, ನಿರ್ದೇಶಕ ಮುದಸ್ಸಾರ್ ಅಜೀಜ್, ನಟಿ ಅದಿತಿ ರಾವ್ ಹೈದರಿ, ನಿರ್ದೇಶಕ ಅಮರ್ ಕೌಶಿಕ್, ಆಯುಷ್‌ಮಾನ್ ಖುರಾನಾ ಮತ್ತು ಪತ್ನಿ ತಾಹಿರಾ ಮುಂತಾದ ತಾರೆಯರು ಸಾಕ್ಷಿಯಾಗಲಿದ್ದಾರೆ. ಕೋವಿಡ್ ನಿಯಮಾವಳಿ ಅನುಸಾರ ಮದುವೆ ಸಮಾರಂಭಕ್ಕೆ 100-150 ಜನರಿಗೆ ಮಾತ್ರ ಅವಕಾಶ ಇರುವ ಕಾರಣ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖ ತಮ್ಮ ವಿವಾಹಕ್ಕೆ ಆಹ್ವಾನಿಸಿದ್ದಾರೆ. ವರ್ಷಗಳಿಂದ ಪ್ರೀತಿಸುತ್ತಿರುವ ರಾಜ್‌ಕುಮಾರ್ ರಾವ್ - ಪತ್ರಲೇಖ ನಟ ರಾಜ್‌ಕುಮಾರ್ ರಾವ್ ಹಾಗೂ ಪತ್ರಲೇಖ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಕೆಲ ವರ್ಷಗಳಿಂದ ರಾಜ್‌ಕುಮಾರ್ ರಾವ್ ಹಾಗೂ ಪತ್ರಲೇಖ ಡೇಟಿಂಗ್ ಮಾಡುತ್ತಿದ್ದಾರೆ. ಲಿವ್‌-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ರಾಜ್‌ಕುಮಾರ್ ರಾವ್ ಹಾಗೂ ಪತ್ರಲೇಖ ಇಂದು ವೈವಾಹಿಕ ಬದುಕಿಗೆ ನಾಂದಿ ಹಾಡಲಿದ್ದಾರೆ. ಆ ಮೂಲಕ ಅವರಿಬ್ಬರ ಪ್ರೀತಿಗೆ ಅಧಿಕೃತ ಮುದ್ರೆ ಬೀಳಲಿದೆ. ಅಸಲಿಗೆ, ನಟಿ ಪತ್ರಲೇಖ ಅವರನ್ನ ರಾಜ್‌ಕುಮಾರ್ ರಾವ್ ಮೊದಲ ಬಾರಿಗೆ ನೋಡಿದ್ದು ಆಡ್ ಫಿಲ್ಮ್‌ವೊಂದರಲ್ಲಿ. ಲವ್ ಅಟ್ ಫಸ್ಟ್ ಸೈಟ್ ಎಂಬಂತೆ ಮೊದಲ ನೋಟದಲ್ಲೇ ಪತ್ರಲೇಖ ಮೇಲೆ ರಾಜ್‌ಕುಮಾರ್ ರಾವ್‌ ಅವರಿಗೆ ಲವ್ ಆಗಿದೆ. ಇದಾದ ಒಂದು ತಿಂಗಳ ಬಳಿಕ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖ ಭೇಟಿಯಾಗಿದ್ದಾರೆ. ಮೊದಲು ಸ್ನೇಹಿತರಾದ ಇವರಿಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿದೆ. ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ಇದೀಗ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಎಂಗೇಜ್‌ಮೆಂಟ್ ವಿಡಿಯೋ ವೈರಲ್ ಎಂಗೇಜ್‌ಮೆಂಟ್ ವೇಳೆ ಉಂಗುರ ಹಿಡಿದು ‘’ವಿಲ್ ಯು ಮ್ಯಾರಿ ಮೀ’’ ಎಂದು ಮಂಡಿಯೂರಿ ಪತ್ರಲೇಖಗೆ ರಾಜ್‌ಕುಮಾರ್ ರಾವ್ ಕೇಳುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪತ್ರಲೇಖ ಕೂಡ ಮಂಡಿಯೂರಿ ರಾಜ್‌ಕುಮಾರ್ ರಾವ್‌ಗೆ ಉಂಗುರ ತೊಡಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ‘ಸೂಪರ್ ಕ್ಯೂಟ್ ಜೋಡಿ’ ಎನ್ನುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ನಾಂದಿ ಹಾಡುತ್ತಿರುವ ರಾಜ್‌ಕುಮಾರ್ ರಾವ್ ಹಾಗೂ ಪತ್ರಲೇಖಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.