ಪತಿ ಚಿರಂಜೀವಿ ಸರ್ಜಾಗೆ "ಐ ಲವ್ ಯೂ, ಮರಳಿ ಬಾ" ಎಂದ ನಟಿ ಮೇಘನಾ ರಾಜ್!

ನಟಿ ಮೇಘನಾ ರಾಜ್ ಅವರ ಪತಿ ನಟ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ ಒಂದು ವರ್ಷವಾಯ್ತು. ಈಗ ಪತಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಮೇಘನಾ ಮರಳಿ ಬಾ ಎಂದು ಹೇಳಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಪತಿ ಚಿರಂಜೀವಿ ಸರ್ಜಾಗೆ "ಐ ಲವ್ ಯೂ, ಮರಳಿ ಬಾ" ಎಂದ ನಟಿ ಮೇಘನಾ ರಾಜ್!
Linkup
ಸಾವಿನ ನೋವು ಸದಾ ಕಾಡುತ್ತಿರುತ್ತದೆ, ಅದರಲ್ಲೂ ಪ್ರೀತಿ ಪಾತ್ರರು ಅಕಾಲಿಕ ಮರಣಕ್ಕೆ ತುತ್ತಾದರೆ ಕೇಳಬೇಕೇ? ಸ್ಯಾಂಡಲ್‌ವುಡ್ ನಟಿ ಪತಿ ಅವರು ನಿಧನರಾಗಿ ಒಂದು ವರ್ಷವಾಗುತ್ತ ಬಂತು. ಆದರೆ ಅವರ ಸಾವಿನ ನೋವು ಇನ್ನೂ ಕಡಿಮೆಯಾಗಿಲ್ಲ. ಪತ್ನಿ ಮೇಘನಾ ಅವರು 'ಮರಳಿ ಬಾ' ಎಂದು ಹೇಳಿದ್ದಾರೆ. ಮೇಘನಾ ಪೋಸ್ಟ್ ಹೀಗಿದೆ ಚಿರಂಜೀವಿ ಜೊತೆಗೆ ಐಫೆಲ್ ಟವರ್‌ ಕೆಳಗೆ ನಿಂತ ಫೋಟೋವನ್ನು ಹಂಚಿಕೊಂಡ ಮೇಘನಾ ಅವರು 'ನಾನು, ನಿನ್ನ ಪ್ರೀತಿಸುತ್ತೇನೆ. ಮರಳಿ ಬಾ' ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ ಕಂಡು ಅನೇಕರು ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರು ಚಿರು ಮತ್ತೆ ಬರಲಿ ಎಂದು ಆಶಿಸುತ್ತೇವೆ, ನಿಮ್ಮಿಬ್ಬರನ್ನು ಸದಾ ಪ್ರೀತಿ ಮಾಡುತ್ತೇವೆ, ಚಿಂತಿಸಬೇಡಿ ಎಂದು ಕೂಡ ಕೆಲವರು ಮೇಘನಾ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಚಿರಂಜೀವಿಗೆ ಹೃದಯಾಘಾತ ಚಿರಂಜೀವಿ ಸರ್ಜಾ ಅವರಿಗೆ ಕಳೆದ ವರ್ಷ ಜೂನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹೋಗಿತ್ತು. ವೈದ್ಯರು ಹೃದಯಾಘಾತ ಎಂದರು. ಇದು ಅವರ ಕುಟುಂಬ, ಆತ್ಮೀಯರು, ಚಿತ್ರರಂಗ ಸೇರಿ ಎಲ್ಲರಿಗೂ ಶಾಕ್ ನೀಡಿತ್ತು. ಆರೋಗ್ಯವಂತ ನಟ ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಧನರಾಗಿರೋದು ಕೇಳಿದರೆ ಎಂಥಹವರಿಗೂ ಬೇಸರ ಆಗುತ್ತದೆ. ಜ್ಯೂನಿಯರ್ ಚಿರುಗೆ ಆರು ತಿಂಗಳ ಹುಟ್ಟುಹಬ್ಬದ ಸಂಭ್ರಮ ಇನ್ನು ಚಿರಂಜೀವಿ ಸರ್ಜಾ ನಿಧನರಾದಾಗ ಮೇಘನಾ ರಾಜ್ ಅವರು ಗರ್ಭಿಣಿ ಎಂಬ ವಿಷಯ ಕೂಡ ಎಲ್ಲರಿಗೂ ತಿಳಿಯಿತು. ಆಗ ಇನ್ನೂ ಹೆಚ್ಚಿನ ನೋವು ಆಗಿದ್ದಂತೂ ಹೌದು. ಮೇಘನಾ ರಾಜ್ ಅವರಿಗೆ ಮಗು ಹುಟ್ಟಿ ಆರು ತಿಂಗಳು ಕಳೆದಿದೆ. ಇತ್ತೀಚೆಗೆ ಮಗ ಹುಟ್ಟಿ ಆರು ತಿಂಗಳ ಬರ್ತಡೇ ಆಚರಣೆಯೂ ನಡೆದಿದೆ. ಕೊರೊನಾ ಕಾರಣದಿಂದ ಎಲ್ಲವೂ ಸರಳವಾಗಿ ಆಯ್ತು. ಇನ್ನು ಧ್ರುವ ಸರ್ಜಾ ಮನೆಯಲ್ಲಿ ಚಿರು ಮಗನ ತೊಟ್ಟಿಲು ಹಾಕುವ ಶಾಸ್ತ್ರ ನಡೆಯಬೇಕಿದೆ. ಮಗನೇ ನನ್ನ ಶಕ್ತಿ ಎಂದ ಮೇಘನಾ ಅಣ್ಣನ ಮಗನಿಗಾಗಿ ಧ್ರುವ ಸರ್ಜಾ ಅವರು ಬೆಳ್ಳಿಯ ತೊಟ್ಟಿಲು ಖರೀದಿ ಮಾಡಿದ್ದರು. ಇನ್ನು "ನನ್ನ ಮಗನೇ ನನ್ನ ಶಕ್ತಿ. ನಾನು ಅವನಿಗಾಗಿ ಬದುಕುವೆ" ಎಂದು ಈ ಹಿಂದೆ ನೀಡಿದ ಸಂದರ್ಶನದಲ್ಲಿ ಮೇಘನಾ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮೇಘನಾ ಅವರು ಅಭಿಮಾನಿಗಳು ಸೃಷ್ಟಿ ಮಾಡಿದ ಫೋಟೋ, ವಿಡಿಯೋಗಳನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ.