ಸ್ಟಾರ್‌ಗಳನ್ನು ಮಾತಾಡೋಕೆ ಬಿಡಲ್ಲ: ಖ್ಯಾತ ಆಂಕರ್ ಸುಮಾ ಮೇಲೆ ನೆಟ್ಟಿಗರಿಗೆ ಸಿಟ್ಟು!

‘ಲವ್ ಸ್ಟೋರಿ’ ಚಿತ್ರತಂಡದ ಸಂದರ್ಶನವನ್ನು ಇತ್ತೀಚೆಗಷ್ಟೇ ಸುಮಾ ಕನಕಲ ಮಾಡಿದ್ದರು. ಸಂದರ್ಶನದಲ್ಲಿ ಸುಮಾ ಕನಕಲ ತಾರೆಯರನ್ನ ಮಾತನಾಡೋಕೆ ಬಿಟ್ಟಿಲ್ಲ ಅಂತ ನೆಟ್ಟಿಗರು ಮುನಿಸಿಕೊಂಡಿದ್ದಾರೆ.

ಸ್ಟಾರ್‌ಗಳನ್ನು ಮಾತಾಡೋಕೆ ಬಿಡಲ್ಲ: ಖ್ಯಾತ ಆಂಕರ್ ಸುಮಾ ಮೇಲೆ ನೆಟ್ಟಿಗರಿಗೆ ಸಿಟ್ಟು!
Linkup
ತೆಲುಗು ಸಿನಿ ಅಂಗಳದಲ್ಲಿ ಸ್ಟಾರ್ ಅಂತಲೇ ಗುರುತಿಸಿಕೊಂಡಿರುವವರು ಸುಮಾ ಕನಕಲ. ಅನೇಕ ತೆಲುಗು ಚಿತ್ರಗಳ ಆಡಿಯೋ ಲಾಂಚ್, ಪ್ರಶಸ್ತಿ ಪ್ರದಾನ ಸಮಾರಂಭಗಳು ಮತ್ತು ಹಲವು ಫಂಕ್ಷನ್‌ಗಳನ್ನು ನಿರೂಪಣೆ ಮಾಡಿರುವ ಖ್ಯಾತಿ ಅವರದ್ದು. ಕಿರುತೆರೆಯ ಅನೇಕ ಗೇಮ್ ಶೋಗಳನ್ನೂ ಹೋಸ್ಟ್ ಮಾಡಿರುವ ಸುಮಾ ಕನಕಲ ಕೆಲ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಇಂತಿಪ್ಪ ಸುಮಾ ಕನಕಲ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಳು ಹುರಿದ ಹಾಗೆ ಪಟ ಪಟ ಅಂತ ಮಾತನಾಡುವ ಸುಮಾ ಕನಕಲ ನಡೆಸಿಕೊಡುವ ಶೋಗಳು ತುಂಬಾ ಲವಲವಿಕೆಯಿಂದ ಕೂಡಿರುತ್ತವೆ ಅನ್ನೋದೇನೋ ಸತ್ಯ. ಆದರೆ, ಕೆಲವೊಮ್ಮೆ ಸುಮಾ ಕನಕಲ ಅತೀ ಎನಿಸುವಷ್ಟು ಮಾತನಾಡುತ್ತಾರೆ. ಕಾರ್ಯಕ್ರಮಕ್ಕೆ ಬಂದಿರುವ ಸೆಲೆಬ್ರಿಟಿಗಳನ್ನು ಮಾತನಾಡೋಕೆ ಬಿಡದೇ ಸುಮಾ ಕನಕಲ ಅವರೇ ಹೆಚ್ಚು ಮಾತನಾಡುತ್ತಾರೆ ಎಂಬುದು ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ. ‘ಲವ್ ಸ್ಟೋರಿ’ ಚಿತ್ರತಂಡ ಸಂದರ್ಶನ ನಟ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ‘ಲವ್ ಸ್ಟೋರಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ಲವ್ ಸ್ಟೋರಿ’ ಚಿತ್ರತಂಡದ ಸಂದರ್ಶನವನ್ನು ಇತ್ತೀಚೆಗಷ್ಟೇ ಸುಮಾ ಕನಕಲ ಮಾಡಿದ್ದರು. ಸಂದರ್ಶನವನ್ನ ಸುಮಾ ಕನಕಲ ಚೆನ್ನಾಗಿ ನಡೆಸಿಕೊಟ್ಟಿದ್ದಾರೆ ಎಂಬುದು ಸುಳ್ಳಲ್ಲ. ಆದರೆ, ಸಂದರ್ಶನದಲ್ಲಿ ಸುಮಾ ಕನಕಲ ತಾರೆಯರನ್ನ ಮಾತನಾಡೋಕೆ ಬಿಟ್ಟಿಲ್ಲ ಅಂತ ನೆಟ್ಟಿಗರು ಮುನಿಸಿಕೊಂಡಿದ್ದಾರೆ. ‘’ಸಂದರ್ಶನದಲ್ಲಿ ನಿರೂಪಕಿ ಸುಮಾ ಕನಕಲ ಅವರೇ ಹೆಚ್ಚು ಮಾತನಾಡಿದ್ದಾರೆ. ತಾರೆಯರನ್ನ ಮಾತನಾಡೋಕೆ ಬಿಟ್ಟಿಲ್ಲ. ಪ್ರಶ್ನೆಗಳಿಗೆ ತಾರೆಯರು ಉತ್ತರ ಕೊಡುವ ಮುನ್ನವೇ ಬೇರೇನೋ ಮಾತನಾಡಿ ಸುಮಾ ಕನಕಲ ಪ್ರಶ್ನೆಗಳನ್ನು ಡೈವರ್ಟ್ ಮಾಡಿದ್ದಾರೆ. ಸಂದರ್ಶನದಲ್ಲಿ ಸೆಲೆಬ್ರಿಟಿಗಳಿಗೆ ಹೆಚ್ಚು ಸಮಯ ನೀಡಿಲ್ಲ’’ ಅಂತ ತೆಲುಗು ಸಿನಿ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಗೇ, ಸಂದರ್ಶನದಲ್ಲಿ ತಾರೆಯರಿಗೆ ಮಾತನಾಡಲು ಸುಮಾ ಕನಕಲ ಹೆಚ್ಚು ಸಮಯಾವಕಾಶ ನೀಡಬೇಕು ಅಂತ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಸ್ಟಾರ್ ಆಂಕರ್ ಸುಮಾ ಕನಕಲ ಸುಮಾ ಕನಕಲ ಕೇರಳ ಮೂಲದವರಾದರೂ ತೆಲುಗು ಭಾಷೆಯನ್ನ ಸರಾಗಿ ಮಾತನಾಡುತ್ತಾರೆ. ‘ಪವಿತ್ರ ಪ್ರೇಮ’, ‘ವರ್ಷಂ’, ‘ಬಾದ್‌ಷಾ’ ಸೇರಿದಂತೆ ಕೆಲ ತೆಲುಗು ಚಿತ್ರಗಳಲ್ಲಿ ಸುಮಾ ಕನಕಲ ಅಭಿನಯಿಸಿದ್ದಾರೆ. ಮಲಯಾಳಂ ಹಾಗೂ ತಮಿಳಿನಲ್ಲಿ ಅನೇಕ ಸಿನಿಮಾಗಳಲ್ಲೂ ಸುಮಾ ಕನಕಲ ನಟಿಸಿದ್ದಾರೆ. ‘ಸ್ವಯಂವರಂ’, ‘ಅನ್ವೇಷಿತಾ’, ‘ಗೀತಾಂಜಲಿ’ ಸೇರಿದಂತೆ ಕೆಲ ಸೀರಿಯಲ್‌ಗಳಲ್ಲೂ ಸುಮಾ ಕನಕಲ ಕಾಣಿಸಿಕೊಂಡಿದ್ದಾರೆ. ‘ಲೇಡಿ ಬಾಸ್’, ‘ಸ್ಟಾರ್ ಮಹಿಳಾ’, ‘ಜೀನ್ಸ್’ ಮುಂತಾದ ಗೇಮ್ ಶೋಗಳ ನಿರೂಪಣೆಯನ್ನೂ ಸುಮಾ ಕನಕಲ ನಿರೂಪಣೆ ಮಾಡಿದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್ ಸೇರಿದಂತೆ ತೆಲುಗು ಚಿತ್ರರಂಗದ ಸ್ಟಾರ್ ನಟ ಈವೆಂಟ್‌ಗಳನ್ನೂ ನಿರೂಪಣೆ ಮಾಡುವ ಸುಮಾ ಕನಕಲ ಅತಿ ಹಚ್ಚು ಸಂಭಾವನೆ ಪಡೆಯುವ ನಿರೂಪಕಿ ಕೂಡ ಹೌದು. ಕೇವಲ 2 ಗಂಟೆಯ ಕಾರ್ಯಕ್ರಮಗಳಿಗೆ 3 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಸುಮಾ ಕನಕಲ.