ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡುವ ಬಗ್ಗೆ ಸ್ಪಷ್ಟನೆ ನೀಡಿದ 'ಸ್ಯಾಂಡಲ್‌ವುಡ್ ಕ್ವೀನ್' ರಮ್ಯಾ

ನಟಿ ರಮ್ಯಾರನ್ನು ತೆರೆಯ ಮೇಲೆ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಬರಲಿದ್ದಾರಾ? ಆ ಬಗ್ಗೆ ಅವರು ಹೇಳಿದ್ದೇನು?

ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡುವ ಬಗ್ಗೆ ಸ್ಪಷ್ಟನೆ ನೀಡಿದ 'ಸ್ಯಾಂಡಲ್‌ವುಡ್ ಕ್ವೀನ್' ರಮ್ಯಾ
Linkup
ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ 1 ನಟಿಯಾಗಿ ಮೆರೆದ ನೋಡಿ ಅನೇಕ ಹುಡುಗಿಯರು ನಟಿಯಾಗಬೇಕು ಎಂದು ಆಸೆಪಟ್ಟುಕೊಂಡು ಸಿನಿಮಾ ರಂಗ ಪ್ರವೇಶ ಮಾಡಿದ ಉದಾಹರಣೆ ಇದೆ. ಸಿನಿಮಾದಲ್ಲಿ ಹೆಸರು ಮಾಡುತ್ತಿದ್ದಂತೆ ರಾಜಕೀಯಕ್ಕೆ ಕಾಲಿಟ್ಟ ನಟಿ ರಮ್ಯಾ ಅವರು ಸಿನಿಮಾಗಳಲ್ಲಿ ನಟಿಸದೆ ಹಲವು ವರ್ಷಗಳಾಯ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಮತ್ತೆ ಸಿನಿಮಾ ಮಾಡುವಂತಾಗಲಿ ಎಂದು ಅನೇಕರು ಬಯಸುತ್ತಿದ್ದಾರೆ. ಆದರೆ ರಮ್ಯಾ ಏನು ಮಾಡ್ತಾರೆ? ಸಿನಿಮಾಗಳಲ್ಲಿ ಯಶಸ್ಸು ಕಂಡ ರಮ್ಯಾ ರಾಜಕೀಯದಲ್ಲಿ ಅಷ್ಟಾಗಿ ಹೆಸರು ಮಾಡಲಿಲ್ಲ. ಹಾಗಾಗಿ ಅವರು ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗುತ್ತಾರಾ ಎಂಬ ಪ್ರಶ್ನೆ ಕಾಡಿತ್ತು. ಇದ್ದಕ್ಕಿದ್ದಂತೆ ರಾಜಕೀಯಕ್ಕೆ ರಮ್ಯಾ ಗುಡ್‌ಬೈ ಹೇಳಿ ಒಂದು ವರ್ಷಗಳ ಕಾಲ ಮರೆಯಾದರು, ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದೇ ಪ್ರೇಕ್ಷಕರಿಗೆ ಪ್ರಶ್ನೆಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿಯೂ ವರ್ಷಗಳ ಕಾಲ ಕಾಣಿಸಿಕೊಳ್ಳದ ರಮ್ಯಾ ಮತ್ತೆ ಸೋಶಿಯಲ್ ಮೀಡಿಯಾಕ್ಕೆ ಮರಳಿದ್ದಾರೆ. ಸದ್ಯ ರಮ್ಯಾ ಎಲ್ಲಿದ್ದಾರೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಡುತ್ತಿಲ್ಲ. ರಮ್ಯಾ ಆಧ್ಮಾತ್ಮಿಕತೆಗೆ ಸಂಬಂಧಪಟ್ಟಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಅವರು ಡಯೆಟ್ ಎಲ್ಲವನ್ನು ಬಿಟ್ಟು ಜೀವನವನ್ನು ಎಂಜಾಯ್ ಮಾಡುತ್ತಿದ್ದಾರಂತೆ. ಇತ್ತೀಚೆಗೆ ಸಿನಿಮಾಕ್ಕೆ ಹಾರೈಸಿದ್ದ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಾಲಿಡುತ್ತಾರಾ? ಎಂಬುದೇ ಎಲ್ಲರ ಪ್ರಶ್ನೆ. ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ರಮ್ಯಾಗೆ ಪದೇ ಪದೇ ಈ ಪ್ರಶ್ನೆಗಳು ಎದುರಾಗುತ್ತಿರುತ್ತವೆ. ಅದಕ್ಕೆ ರಮ್ಯಾ ಉತ್ತರ ನೀಡಿದ್ದಾರೆ. "ನಾನು ಸಿನಿಮಾ ಮಾಡಲು ಒಪ್ಪಿಕೊಳ್ಳುವೆ ಎಂದು ಹೇಳಿದರೆ ಸಾಕಷ್ಟು ಜನರಿಗೆ ಖುಷಿಯಾಗುತ್ತದೆ. ನನ್ನ ಬಳಿ ಸಿನಿಮಾ ಮಾಡಲು ಕೆಲ ಆಫರ್ ಬಂದಿವೆ, ಅವುಗಳಿಗೆ ನಾನು ಓಕೆ ಹೇಳಬೇಕೋ, ಬೇಡವೋ ಎಂದು ಯೋಚನೆ ಮಾಡುತ್ತಿದ್ದೇನೆ. ಆದರೆ ನಿಜ ಹೇಳಬೇಕು ಎಂದರೆ ನೋಡೋಣ ಅಂತ ಹೇಳಬೇಕಾಗುತ್ತದೆ. ನಾನು ಆಗಲ್ಲ, ಸಿನಿಮಾ ಮಾಡಲ್ಲ ಎಂದು ಹೇಳಿದರೆ ಅನೇಕರು ಬೇಸರ ಮಾಡಿಕೊಳ್ತಾರೆ. ಜೀವನದಲ್ಲಿ ನಾವು ಎಂದಿಗೂ ಇಲ್ಲ ಅಂತ ಎಂದಿಗೂ ಹೇಳಲು ಆಗಲ್ಲ" ಎಂದು ನಟಿ ರಮ್ಯಾ ಅವರು ಚಿತ್ರರಂಗಕ್ಕೆ ಕಾಲಿಡುವ ಬಗ್ಗೆ ಅಭಿಪ್ರಾಯ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುವ ಅವರು ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ನಮ್ಮ ನಟರು ಬೇರೆ ಭಾಷೆಯಲ್ಲಿ ಬೆಳೆಯುತ್ತಿರುವುದು ನಮ್ಮ ಹೆಮ್ಮೆ' ಎಂದು ರಮ್ಯಾ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಸತೀಶ್ ನೀನಾಸಂ ಅಭಿನಯದ 'ಪಗೈವನುಕು ಅರುಳ್ವೈ' ಸಿನಿಮಾಕ್ಕೆ ಶುಭ ಹಾರೈಸಿದ್ದರು. ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಹಿಳೆಯರ ಉಡುಪಿನ ಬಗ್ಗೆಯೂ ಕಾಮೆಂಟ್ ಬರುತ್ತಿರುತ್ತದೆ, ಈ ಬಗ್ಗೆ ಅಭಿಪ್ರಾಯ ಹೊರಹಾಕಿದ್ದ ಪ್ರತಿ ಬಾರಿ ಮಹಿಳೆಯರೇ ಏಕೆ ಆಪಾದನೆಯನ್ನು ಹೊತ್ತುಕೊಳ್ಳಬೇಕು? ಮಹಿಳೆಯರೇ ಯಾಕೆ ಎಲ್ಲಾದರಲ್ಲೂ ಕಾಂಪ್ರೊಮೈಸ್ ಆಗಬೇಕು? ಎಂದು ಆಕ್ರೋಶ ಹೊರಹಾಕಿದ್ದರು.