ಲೈಂಗಿಕ ಕೆಲಸಗಾರರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ 'ಲಂಕೆ' ಯೋಗಿ ಹೋರಾಟ

ಯೋಗಿ ನಟನೆಯ ಹೊಸ ಚಿತ್ರ 'ಲಂಕೆ'ಯ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದ್ದು, ಅವರು ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾ ಕಥೆಯೇನಯ? ಯೋಗಿ ಅವರ ಲುಕ್ ವೈಶಿಷ್ಟ್ಯವೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಲೈಂಗಿಕ ಕೆಲಸಗಾರರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ 'ಲಂಕೆ' ಯೋಗಿ ಹೋರಾಟ
Linkup
(ಪದ್ಮಾ ಶಿವಮೊಗ್ಗ) ರಾಮ್‌ಪ್ರಸಾದ್‌ ಎಂ.ಡಿ. ನಿರ್ದೇಶನದ 'ಲಂಕೆ' ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಯೋಗಿ ಹೀರೋ ಆಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೆ ಅವರು ಸಿನಿಮಾದಲ್ಲಿ ಕಾಣಿಸಿಕೊಂಡ ರೀತಿಗೂ ಈ ಚಿತ್ರದ ಪಾತ್ರಕ್ಕೂ ಬಹಳ ವ್ಯತ್ಯಾಸವಿದೆ ಎಂದಿದ್ದಾರೆ ನಿರ್ದೇಶಕ ರಾಮ್‌ಪ್ರಸಾದ್‌. "ಯೋಗಿ ಈ ಹಿಂದೆಂದಿಗಿಂತಲೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಮೊದಲು ಅವರು ಮಾಡಿದ ಬಹುತೇಕ ಸಿನಿಮಾಗಳಲ್ಲಿ ಹಾಸ್ಯಮಿಶ್ರಿತ ಹಾವಭಾವ ಇರುತ್ತಿತ್ತು. ಈ ಚಿತ್ರದಲ್ಲಿ ಬಹಳ ಸಟಲ್ಡ್‌ ಆಗಿ ನಟಿಸಿದ್ದಾರೆ. ಹೆಚ್ಚು ಮಾತಿಲ್ಲ. ಸ್ಕ್ರಿಪ್ಟ್ ಡಿಸ್ಕಷನ್‌ನಲ್ಲಿ ಅವರೂ ಭಾಗಿಯಾಗುತ್ತಿದ್ದುದರಿಂದ ಪಾತ್ರವನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಹೇಗೆ ನಟಿಸಬೇಕು ಎಂಬುದು ಅವರಿಗೆ ಗೊತ್ತಾಯ್ತು. ನಾನು ಗೈಡ್‌ ಮಾಡುವ ಸಂದರ್ಭ ಬರಲಿಲ್ಲ" ಎಂದು ನಿರ್ದೇಶಕ ರಾಮ್‌ಪ್ರಸಾದ್‌ "ಯೋಗಿ ಲುಕ್‌ ಕೂಡ ಬೇರೆ ಥರ ಇದೆ. ಫಿಸಿಕಲಿ ಸ್ಟ್ರಾಂಗ್‌ ಆಗಿಯೂ ಕಾಣಿಸಬೇಕು ಎಂದಿದ್ದಕ್ಕೆ ಬಾಡಿಬಿಲ್ಡ್‌ ಮಾಡಿದ್ದಾರೆ. ಅವರ ಹಳೆಯ ಸಿನಿಮಾಗಳನ್ನು ಸ್ಟಡಿ ಮಾಡಿ ಅವರ ಲುಕ್‌ ಬದಲಾಯಿಸಿದ್ದೇವೆ. ರೆಗ್ಯುಲರ್‌ ಯೋಗಿ ಸಿನಿಮಾ ಎಂದು ಅನಿಸುವುದೇ ಇಲ್ಲ' ಎಂದಿದ್ದಾರೆ ನಿರ್ದೇಶಕ ರಾಮ್‌ಪ್ರಸಾದ್‌. ಇವರಿಗೆ ಇದು ಮೂರನೇ ಚಿತ್ರ. ಚಿತ್ರದಲ್ಲಿ ಲೈಂಗಿಕ ಕೆಲಸಗಾರರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೀರೊ ಹೋರಾಡುವ ಕಥೆ ಇದೆ. 'ಬಹಳ ವರ್ಷಗಳಿಂದ ನಮ್ಮ ಸಮಾಜದಲ್ಲಿ ಲೈಂಗಿಕ ವರ್ಕರ್‌ ಮೇಲೆ ದೌರ್ಜನ್ಯ ನಡೆಯುತ್ತಾ ಬಂದಿದೆ. ಹಲವು ಊರುಗಳಲ್ಲಿ ಅವರನ್ನು ಊರಾಚೆ ಇರಿಸಲಾಗುತ್ತದೆ. ಅಲ್ಲಿಯೇ ಅವರೆಲ್ಲ ಜೀವನ ಸಾಗಿಸಬೇಕು. ಈ ಸಮುದಾಯದಿಂದ ಬಂದ ಹುಡುಗನೊಬ್ಬನ ಕಥೆ ಇದರಲ್ಲಿದೆ. ಲೈಂಗಿಕ ವರ್ಕರ್‌ ಮೇಲೆ ದಬ್ಬಾಳಿಕೆ ನಡೆಸುವ ದೊಡ್ಡ ಜನಾಂಗದ ವಿರುದ್ಧ ಅವನು ಸೇಡು ತೀರಿಸಿಕೊಳ್ಳುತ್ತಾನೆ. ಇದು ಆ್ಯಕ್ಷನ್‌ ಚಿತ್ರ. ಮಾಸ್‌ ಎಂಟರ್‌ಟೇನ್‌ಮೆಂಟ್‌ ಜತೆ ಮೆಸೇಜ್‌ ಕೂಡ ಇದೆ. ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ತೋರಿಸುತ್ತಿದ್ದೇವೆ. ಎಲ್ಲಾ ರೀತಿಯ ಮನರಂಜನೆಯೂ ಇದೆ' ಎಂದಿದ್ದಾರೆ ರಾಮ್‌ಪ್ರಸಾದ್‌. ಬೆಂಗಳೂರು ಮತ್ತು ಸಂಗಮ ಫಾರೆಸ್ಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಸಂಚಾರಿ ವಿಜಯ್‌ ಅವರೂ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈಗಲೇ ಅವರ ಪಾತ್ರದ ವಿವರ ಬಿಟ್ಟುಕೊಡಲು ಚಿತ್ರತಂಡ ಸಿದ್ಧವಿಲ್ಲ. ಚಿತ್ರದಲ್ಲಿ ನಾಲ್ವರು ನಟಿಯರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಕೃಷಿ ತಾಪಂಡ, ಏಸ್ತರ್‌ ನರೋನ್ಹ, ಗಾಯತ್ರಿ ಜಯರಾಮ್‌, ಕಾವ್ಯಾ ಶೆಟ್ಟಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಬಹಳ ಅದ್ಧೂರಿಯಾಗಿ ಚಿತ್ರೀಕರಿಸಿದ್ದೇವೆ. ಯೋಗಿ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಇದುವರೆಗೆ ನೋಡದ ಯೋಗಿಯವರನ್ನು ಚಿತ್ರದಲ್ಲಿನೋಡಬಹುದು. ಅವರ ಸಿನಿ ಬದುಕಿನಲ್ಲಿ'ಲಂಕೆ' ಚಿತ್ರ ಒಂದು ತಿರುವು ನೀಡುತ್ತೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ ರಾಮ್‌ಪ್ರಸಾದ್‌