ನಟ ದರ್ಶನ್ ಪರಿಚಯಿಸಿದ 'ಪುಡಾಂಗು' ಪದವನ್ನು ಶಿವರಾಜ್‌ಕುಮಾರ್ 'ಟಗರು' ಸಿನಿಮಾದಲ್ಲಿ ಬಳಸಲಾಗಿತ್ತು!

'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು ಸುದ್ದಿಗೋಷ್ಠಿ ನಡೆಸಿದ ವೇಳೆ ಪ್ರೇಮ್ ಅವರೇನು ಪುಡಾಂಗುನಾ ಎಂದು ಹೇಳಿದ್ದರು. ಆ ಪದದ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬ ಚರ್ಚೆ ನಡೆಯುತ್ತಿದೆ. ಕಾರಣ ಏನು?

ನಟ ದರ್ಶನ್ ಪರಿಚಯಿಸಿದ 'ಪುಡಾಂಗು' ಪದವನ್ನು ಶಿವರಾಜ್‌ಕುಮಾರ್ 'ಟಗರು' ಸಿನಿಮಾದಲ್ಲಿ ಬಳಸಲಾಗಿತ್ತು!
Linkup
ಒಂದೆರಡು ದಿನದ ಹಿಂದೆ ನಟ 'ಚಾಲೆಂಜಿಂಗ್ ಸ್ಟಾರ್' ಅವರು ಮೈಸೂರಿನ ತೋಟದಮನೆಯಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಆರೋಪಗಳಿಗೆ ಉತ್ತರ ನೀಡಲು ಸುದ್ದಿಗೋಷ್ಠಿ ನಡೆಸಿದ್ದಾಗ ಅವರ ಬಾಯಿಂದ ಪುಡಾಂಗು ಎನ್ನುವ ಪದ ಹೊರಬಂತು. ಅದಾದ ಮೇಲೆ ಆ ಪದದ ಅರ್ಥ ತಿಳಿದುಕೊಳ್ಳಲು ಅನೇಕರು ಎಲ್ಲ ನಿಘಂಟುಗಳನ್ನು ಒಮ್ಮೆ ಹುಡುಕಾಡಿ ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 'ಪುಡಾಂಗು' ಎನ್ನುವ ಶಬ್ದದ ಅರ್ಥವೇನು? ಪುಡಾಂಗು, ಪುಡಾಂಗ್, ಪುಡಾಂಗೋ ಈ ಮೂರು ಪದಗಳಲ್ಲಿ ಯಾವುದು ಸರಿ? ಎಂಬ ಚರ್ಚೆ ತುಸು ಜೋರಾಗಿಯೇ ನಡೆಯುತ್ತಿದೆ. 'ಪುಡಾಂಗ್' ಅರ್ಥವನ್ನು ಒಬ್ಬರು ಒಂದೊಂದು ತರ ಅರ್ಥೈಸುತ್ತಿದ್ದಾರೆ. ಹಾಗಾದರೆ ಅವುಗಳಲ್ಲಿ ಯಾವುದು ಸರಿಯಾದ ಪದ? ಜನರು ಹೇಳಿದ್ದೇನು? ನಟ ಶಿವರಾಜ್‌ಕುಮಾರ್ ನಟನೆಯ 'ಟಗರು' ಸಿನಿಮಾದಲ್ಲಿ 'ಪುಡಾಂಗು' ಎಂಬ ಪದ ಬಳಸಿದ್ದಾರಾದರೂ ಅದಷ್ಟು ಹೈಲೈಟ್ ಆಗಿಲ್ಲ. ಈ ಪದವನ್ನು ಪರಿಚಯಿಸಿ ಕನ್ನಡ ಭಾಷೆಯನ್ನು ಶ್ರೀಮಂತ ಮಾಡಿದ್ದಾರೆ. ಶೀಘ್ರದಲ್ಲಿಯೇ ಈ ಪದವನ್ನು ಇಟ್ಟುಕೊಂಡು ಛೇಂಬರ್‌ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸುವ ಸಾಧ್ಯತೆಯಿದೆ. ಪುಡಾಂಗು ಪದದಡಿ ಯಾರೂ ಇನ್ನೂ ಫೇಕ್ ಅಕೌಂಟ್ ಸೃಷ್ಟಿ ಮಾಡಿಲ್ವಾ? ಕ್ವಾರಂಟೈನ್, ಲಾಕ್‌ಡೌನ್, ಸೀಲ್‌ಡೌನ್ ನಂತರ ನಾನು ಕೇಳಿದ ಹೊಸ ಪದ 'ಪುಡಾಂಗು' ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಪುಡಾಂಗು ಪದದ ಅರ್ಥವೇನು? ಲೋಕಲ್ ಭಾಷೆಯಲ್ಲಿ ಪುಡಾಂಗು ಪದ ಬಳಸಲಾಗುವುದು. ಪುಡಾಂಗ್, ಪುಡಾಂಗು ಎಂದು ಕೂಡ ಕೆಲವರು ಹೇಳುವುದುಂಟು. ಇವರೇನು ದೊಡ್ಡ ಜನಾನಾ? ದಾದಾನಾ? ಪುಡುಂಗು ಅಂದರೆ ಅವನೇನು ವಿಶೇಷಾನಾ? ಕಿಲಾಡಿನಾ? ಎಂದು ಕೇಳುವಾಗ ಪುಡಾಂಗು ಎಂದು ಹೇಳುವುದು ಚಾಲ್ತಿಯಲ್ಲಿದೆ. ಪುಡಾಂಗು ಗ್ರಾಂಥಿಕ ಭಾಷೆಯಲ್ಲ. ಈ ಪದ ಬಳಸಿರುವುದಕ್ಕೆ ದೊಡ್ಡ ಮಟ್ಟದಲ್ಲಿ ಸೌಂಡ್ ಆಗಿದೆ. ದರ್ಶನ್ ಪರಿಚಯಿಸಿದ ಪುಡಾಂಗು ನಟ ದರ್ಶನ್‌ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪರಿಚಯ ಮಾಡಿಕೊಟ್ಟಿದ್ದು . ಸಿನಿಮಾ ಡೇಟ್ಸ್ ನೀಡುವ ವೇಳೆ ಪ್ರೇಮ್ ಏನು ಪುಡಾಂಗುನಾ? ಅವನಿಗೆ ಎರಡು ಕೊಂಬು ಇದೆಯಾ? ಅಂತ ಕೇಳಿದ್ದೆ ಎಂದು ದರ್ಶನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆ ಮಾತಿನಿಂದ ಮನನೊಂದ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ನೀಡಿ, ಸುದ್ದಿಗೋಷ್ಠಿ ಕೂಡ ನಡೆಸಿದ್ದರು.