ಮನೆಯಲ್ಲೇ ಇದ್ದು ಬೊಜ್ಜು ಬಂದಿದ್ಯಾ? ಕೋವಿಡ್‌ ಚಿಕಿತ್ಸೆಗೆ ಸವಾಲಾಗಬಹುದು ಎಚ್ಚರ!

ಕೋವಿಡ್‌ ಬಂದ ನಂತರ ಮೆನಯಲ್ಲೇ ಇದ್ದು ಇದ್ದು ತೂಕ ಹೆಚ್ಚಿಸಿಕೊಂಡಿದ್ದೀರಾ. ಹಾಗಾದರೆ ನಿಮಗಿದು ಶಾಕಿಂಗ್‌ ಸುದ್ದಿ. ಬೊಜ್ಜುಹೊಟ್ಟೆ ಹೊಂದಿರುವವರಿಗೆ ಕೋವಿಡ್ ಬಂದರೆ ಚಿಕಿತ್ಸೆ ಬಲು ಕಷ್ಟ. ಅಲ್ಲದೆ ಗುಣವಾಗುವ ಅವಧಿ ಕೂಡ ದೀರ್ಘವಾಗುತ್ತದೆ ಎಂದಿದ್ದಾರೆ ವೈದ್ಯರು.

ಮನೆಯಲ್ಲೇ ಇದ್ದು ಬೊಜ್ಜು ಬಂದಿದ್ಯಾ? ಕೋವಿಡ್‌ ಚಿಕಿತ್ಸೆಗೆ ಸವಾಲಾಗಬಹುದು ಎಚ್ಚರ!
Linkup
ನಾಗಪುರ: ಕೋವಿಡ್‌ ಬಂದ ನಂತರ ಮೆನಯಲ್ಲೇ ಇದ್ದು ಇದ್ದು ತೂಕ ಹೆಚ್ಚಿಸಿಕೊಂಡಿದ್ದೀರಾ. ಹಾಗಾದರೆ ನಿಮಗಿದು ಶಾಕಿಂಗ್‌ ಸುದ್ದಿ. ಬೊಜ್ಜುಹೊಟ್ಟೆ ಹೊಂದಿರುವವರಿಗೆ ಕೋವಿಡ್ ಬಂದರೆ ಚಿಕಿತ್ಸೆ ಬಲು ಕಷ್ಟ. ಅಲ್ಲದೆ ಗುಣವಾಗುವ ಅವಧಿ ಕೂಡ ದೀರ್ಘವಾಗುತ್ತದೆ ಎಂದಿದ್ದಾರೆ ವೈದ್ಯರು. ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಸ್ಥೂಲಕಾಯದ ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿದರೆ ಚಿಕಿತ್ಸೆ ನೀಡುವುದು ಸವಾಲಿನ ಕಾರ್ಯವಾಗಿದೆ. ಅದರಲ್ಲೂ ಕೋವಿಡ್ ಎರಡನೇ ಅಲೆಯು ವ್ಯಕ್ತಿಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ತೆಳ್ಳಗಿನ ವ್ಯಕ್ತಿಗಳಿಗೆ ಹೋಲಿಸಿದರೆ ಸ್ಥೂಲಕಾಯದವರು ಗುಣವಾಗಲು ಹೆಚ್ಚು ಅವಧಿ ತೆಗೆದುಕೊಳ್ಳುತ್ತಾರೆ. ಅಲ್ಲದೆ, ಸ್ಥೂಲಕಾಯದವರಿಗೆ ಹೆಚ್ಚು ಒತ್ತಡದ ವೆಂಟಿಲೇಷನ್ ಅಗತ್ಯಬೀಳುವುದು ಗಮನಕ್ಕೆ ಬಂದಿದೆ. ಒಂದು ವರ್ಷದಿಂದೀಚೆಗೆ ಬಂದಿರುವ ವ್ಯಕ್ತಿಗಳಿಗೂ ಕೂಡ ಸ್ಥೂಲಕಾಯ ವ್ಯಕ್ತಿಗಳಷ್ಟೇ ಅಪಾಯ ಉಂಟಾಗಬಹುದು. ಉತ್ತಮ ದೇಹ ಹೊಂದಿರುವವರು ಹಾಗೂ ಸ್ವಲ್ಪ ಮಟ್ಟಿಗೆ ಹೊಟ್ಟೆ ಬಂದವರು ಸೋಂಕಿನಿಂದ ಬೇಗನೆ ಗುಣವಾಗುತ್ತಿದ್ದಾರೆ. ಆದರೆ, ಬೊಜ್ಜು ಹೊಂದಿರುವವರು ಗುಣವಾಗಲು ಹೆಚ್ಚು ಕಷ್ಟವಾಗುತ್ತದೆ. ಹೀಗಾಗಿ ಮೂರನೇ ಅಲೆ ಬರುವ ವೇಳೆಗೆ ತಮ್ಮ ದೈಹಿಕ ಆರೋಗ್ಯದ ಕಡೆಗೆ ಗಮನಹರಿಸಿ. ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾಗಿದ್ದರೆ ಕರಗಿಸುವುದರತ್ತ ವರ್ಕೌಟ್‌ ಮಾಡಿ. ಇದರಿಂದ ಕೋವಿಡ್‌ ಸೋಂಕಿನಿಂದ ಗಂಭೀರ ಅಪಾಯವಾಗುವುದನ್ನು ತಪ್ಪಿಸಿಕೊಳ್ಳಬಹುದು ಎಂಬುದು ವೈದ್ಯರ ಅತಿ ಮುಖ್ಯ ಸಲಹೆ. ಕ್ರಿಟಿಕಲ್‌ ಕೇರ್‌ ಸ್ಪೆಷಲಿಸ್ಟ್‌ ಡಾ. ಇಮ್ರಾನ್‌ ನೂರ್‌ ಮೊಹಮ್ಮದ್‌ ಹೇಳುವಂತೆ, ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾದಂತೆ ಹೆಚ್ಚು ಭಾರವಾಗುತ್ತದೆ. ಇದರಿಂದ ಶ್ವಾಶಕೋಶ ಸಂಕುಚಿತಗೊಂಡು, ಅದರ ದಕ್ಷತೆಯೂ ಕುಸಿಯುತ್ತದೆ. ಇದರಿಂದ ಶ್ವಾಶಕೋಶದ ಕಾರ್ಯನಿರ್ವಹಣೆ ಕಷ್ಟವಾಗುತ್ತ ಹೋಗುತ್ತದೆ. ವ್ಯಕ್ತಿಗೆ ಆಕ್ಸಿಜನ್‌ ಕೊರತೆಯಾಗುವುದೇ ಇದರಿಂದ. ಹೀಗಾಗಿ ಹೆಚ್ಚಿನ ಸ್ಥೂಲಕಾಯ ವ್ಯಕ್ತಿಗಳಿಗೆ ವೆಂಟಿಲೇಟರ್‌ ಅಗತ್ಯ ಬೀಳುತ್ತದೆ. ನಿಮ್ಮ ಹೊಟ್ಟೆ ಫ್ಲಾಟ್‌ ಆಗಿದ್ದಷ್ಟೂ, ಹೆಚ್ಚು ವೇಗವಾಗಿ ಗುಣವಾಗುತ್ತೀರಿ ಎನ್ನುತ್ತಾರೆ. ಮೊದಲ ಅಲೆ ಬಂದ ನಂತರ ಲಾಕ್‌ಡೌನ್‌, ವರ್ಕ್‌ ಫ್ರಂ ಹೋಮ್ ಮೊದಲಾದ ಕಾರಣಗಳಿಂದ ಬಹುತೇಕರು ಮನೆಯಲ್ಲೇ ಉಳಿದಿದ್ದಾರೆ. ಇದರಿಂದ ಕೆಲವರು ತೂಕ ಹೆಚ್ಚಿಸಿಕೊಂಡಿದ್ದಾರೆ. ಮೊದಲ ಅಲೆಯ ಸಂದರ್ಭದಲ್ಲಿ ಕೂಡ ಸ್ಥೂಲಕಾಯದವರು ಗುಣವಾಗಲು ಹೆಚ್ಚು ಕಷ್ಟಪಡುತ್ತಿದ್ದದ್ದು ಗಮನಕ್ಕೆ ಬಂದಿದೆ. ಸ್ಥಲಕಾಯದವರು ಚಿಕಿತ್ಸೆಗೆ ಬೇಗನೆ ಸ್ಪಂದಿಸುವುದಿಲ್ಲ ಎನ್ನುತ್ತಾರೆ ಕಿಂಗ್ಸ್‌ವೇ ಆಸ್ಪತ್ರೆಯ ಕೋವಿಡ್‌ ಇಂಚಾರ್ಜ್‌ ಡಾ. ಹರ್ಷವರ್ಧನ್‌ ಬೋರಾ.