ಮಾಂಜಾ ದಾರ ಮಾರಾಟಕ್ಕಿಲ್ಲ ಕಡಿವಾಣ; ಪ್ರಾಣಿ ಪಕ್ಷಿಗಳಷ್ಟೇ ಅಲ್ಲ, ಮನುಷ್ಯರ ಜೀವಕ್ಕೂ ಕಂಟಕ!

ಮಾಂಜಾ ದಾರ ಪ್ರಾಣಿ-ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗಿವೆ. ಮಾಂಜಾ ದಾರಕ್ಕೆ ಸಿಲುಕಿ ಪ್ರತಿ ವರ್ಷ 200ಕ್ಕೂ ಅಧಿಕ ಪಕ್ಷಿಗಳ ಸಾವನ್ನಪ್ಪುತ್ತವೆ. ರಾಜ್ಯ ಸರಕಾರ 2017ರಲ್ಲಿ ಮಾಂಜಾ ದಾರದ ತಯಾರಿಕೆ, ಬಳಕೆ, ಮಾರಾಟವನ್ನು ನಿಷೇಧಿಸಿ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಆದರೆ, ಇದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ.

ಮಾಂಜಾ ದಾರ ಮಾರಾಟಕ್ಕಿಲ್ಲ ಕಡಿವಾಣ; ಪ್ರಾಣಿ ಪಕ್ಷಿಗಳಷ್ಟೇ ಅಲ್ಲ, ಮನುಷ್ಯರ ಜೀವಕ್ಕೂ ಕಂಟಕ!
Linkup
ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು ಹಾರಿಸಲು ಬಳಕೆ ಮಾಡುವ 'ಮಾಂಜಾ' ದಾರ ನಿಷೇಧ ಕಾಗದದಲ್ಲಷ್ಟೇ ಉಳಿದಿದೆ. ಅಪಾಯಕಾರಿ ಮಾರಾಟ, ಬಳಕೆ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಫ್ಯಾನ್ಸಿ ಸ್ಟೋರ್‌ಗಳು, ಸಣ್ಣಪುಟ್ಟ ಅಂಗಡಿಗಳಲ್ಲಿ ಈ ದಾರವು ಸುಲಭವಾಗಿ ಸಿಗುತ್ತಿದೆ. ಇವುಗಳು ಪ್ರಾಣಿ-ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗಿವೆ. ಕತ್ತಿಯಂತೆ ಹರಿತವಾಗಿರುವ ಗಾಜುಲೇಪಿತ ಚೈನೀಸ್‌ ಮಾಂಜಾ ದಾರಗಳು ಪಕ್ಷಿಗಳ ರೆಕ್ಕೆಗಳು, ಕಾಲುಗಳನ್ನೇ ತುಂಡರಿಸಿ ಊನ ಮಾಡುತ್ತಿವೆ. ರಸ್ತೆಯಲ್ಲಿ ಬಿದ್ದಿದ್ದ ಗಾಳಿಪಟದ ದಾರವು ಆಡುಗೋಡಿ ಬಳಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಮಲ್ಲಿಕಾರ್ಜುನ್‌ ಎಂಬುವರ ಕತ್ತು ಕೊಯ್ದು ಬೆರಳು ತುಂಡಾಗುವಂತೆ ಮಾಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ವಿಡಿಯೊ ಚಿತ್ರೀಕರಿಸಿರುವ ಅವರು, 'ನಗರದಲ್ಲಿ ಗಾಳಿಪಟ ಹಾರಾಟ ನಿಷೇಧಿಸಿ, ಸವಾರರ ಜೀವ ಉಳಿಸಿ' ಎಂದು ಒತ್ತಾಯಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿದೆ. ಆದರೆ, ಬಹುತೇಕ ಘಟನೆಗಳು ಬೆಳಕಿಗೆ ಬರುತ್ತಲೇ ಇಲ್ಲ. 6 ತಿಂಗಳಲ್ಲಿ 1223 ಪಕ್ಷಿಗಳ ರಕ್ಷಣೆ ನಗರದಲ್ಲಿನ ಏವಿಯನ್‌ ಮತ್ತು ರೆಪ್ಟೈಲ್‌ ಪುನರ್ವಸತಿ ಕೇಂದ್ರ, ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಹಾಗೂ ಪೀಪಲ್‌ ಫಾರ್‌ ಅನಿಮಲ್ಸ್‌ ಸಂಸ್ಥೆಗಳು ಗಾಳಿಪಟದ ಮಾಂಜಾ ದಾರದಲ್ಲಿ ಸಿಕ್ಕಿ ಹಾಕಿಕೊಂಡು ನರಳಾಡುವ ಪಕ್ಷಿಗಳನ್ನು ರಕ್ಷಿಸಿ ಚಿಕಿತ್ಸೆ ನೀಡಿದ ಬಳಿಕ ಅವುಗಳ ವಾಸ ಸ್ಥಾನಕ್ಕೆ ಬಿಡುತ್ತಿವೆ. ಈ ಸಂಸ್ಥೆಗಳು ನೀಡುವ ಅಂಕಿ-ಅಂಶಗಳ ಪ್ರಕಾರ ಕಳೆದ ಆರು ತಿಂಗಳಲ್ಲಿ ಮಂಜಾ ದಾರಕ್ಕೆ ಸಿಲುಕಿ ಗಾಯಗೊಂಡ ಪಕ್ಷಿಗಳ ಸಂಖ್ಯೆ 1223. 2020ರಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 1333 ಪಕ್ಷಿಗಳನ್ನು ರಕ್ಷಣೆ ಮಾಡಲಾಗಿದೆ. ನಗರದಲ್ಲಿ ಪ್ರತಿ ವರ್ಷವೂ 200ಕ್ಕೂ ಅಧಿಕ ಪಕ್ಷಿಗಳು ಮಾಂಜಾ ದಾರಕ್ಕೆ ಸಿಕ್ಕಿ ಹಾಕಿಕೊಂಡು ಒದ್ದಾಡಿ ಸಾಯುತ್ತಿವೆ. ಹತ್ತಿ ದಾರ ಬಳಸಿ ಗಾಳಿಪಟ ಹಾರಿಸಿದರೆ, ಯಾರಿಗೂ ಹಾನಿ ಇಲ್ಲ. ನಿಷೇಧ ಆದೇಶ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ತೀರ್ಪಿನಂತೆ ರಾಜ್ಯ ಸರಕಾರ 2017ರಲ್ಲಿ ಮಾಂಜಾ ದಾರದ ತಯಾರಿಕೆ, ಬಳಕೆ, ಮಾರಾಟವನ್ನು ನಿಷೇಧಿಸಿ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಆದರೆ, ಇದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. 'ಗಾಳಿ ಪಟ ಹಾರಿಸುವುದೇ ನಿಷೇಧಿಸಲಿ' ಪಕ್ಷಿಗಳು ದಾರಕ್ಕೆ ಸಿಲುಕಿ ಹಾಕಿಕೊಂಡಿರುವ ಕುರಿತು ನಿತ್ಯ 10ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಕಳೆದ ಲಾಕ್‌ಡೌನ್‌ ವೇಳೆಯಲ್ಲಿ 400ಕ್ಕೂ ಅಧಿಕ ಕರೆಗಳು ಬಂದಿದ್ದವು. ರಾಜ್ಯದಲ್ಲಿ ಮಾಂಜಾ ದಾರದ ಮಾರಾಟ, ಬಳಕೆ ಮತ್ತು ನಿಷೇಧವು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಚೆನ್ನೈನಲ್ಲಿ ಗಾಳಿಪಟ ಹಾರಿಸುವುದನ್ನೇ ನಿಷೇಧಿಸಲಾಗಿದೆ. ರಾಜ್ಯದಲ್ಲೂ ನಿಷೇಧಿಸಿದರೆ, ನೂರಾರು ಪಕ್ಷಿಗಳ ಜೀವ ಉಳಿಯುತ್ತದೆ,''. ಎಂ.ರಾಜೇಶ್‌ಕುಮಾರ್‌, ವನ್ಯಜೀವಿ ಸಂರಕ್ಷಕ