ಬಿಬಿಎಂಪಿಯಿಂದ 8 ವಲಯಗಳಿಗೆ ಪ್ರತ್ಯೇಕ ಕೋವಿಡ್ ಹೆಲ್ಪ್ ಲೈನ್ ಆರಂಭ!
ಬಿಬಿಎಂಪಿಯಿಂದ 8 ವಲಯಗಳಿಗೆ ಪ್ರತ್ಯೇಕ ಕೋವಿಡ್ ಹೆಲ್ಪ್ ಲೈನ್ ಆರಂಭ!
ಬಿಬಿಎಂಪಿ 8 ವಲಯಗಳಿಗೆ ಪ್ರತ್ಯೇಕ ಕೋವಿಡ್ ಹೆಲ್ಪ್ ಲೈನ್ ಆರಂಭಿಸಿದ್ದು,ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ದಿನದ 24 ಗಂಟೆಗಳ ಕಾಲ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.
ಬೆಂಗಳೂರು: ವ್ಯಾಪ್ತಿಯಲ್ಲಿನ ನಾಗರಿಕರು ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ 1912 ಸಹಾಯವಾಣಿ ಸಂಪರ್ಕಿಸಿಬಹುದು. 8 ವಲಯಗಳಿಗೆ ಪ್ರತ್ಯೇಕ ಸಹಾಯವಾಣಿ ಆರಂಭಿಸಿದ್ದು, ದಿನದ 24 ಗಂಟೆಗಳ ಕಾಲ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.
ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿರುವುದು, ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸುವುದು, ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಸಿಗೆ ಕಾಯ್ದಿರಿಸುವುದು ಹಾಗೂ ಬಿಬಿಎಂಪಿ ಆಂಬ್ಯುಲೆನ್ಸ್ ಸೌಲಭ್ಯ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಬಿಬಿಎಂಪಿಯ 8 ವಲಯದ ಸಹಾಯವಾಣಿ ಸಂಖ್ಯೆ
ಪೂರ್ವ ವಲಯ - 7411038024/ 9886496295
ಪಶ್ಚಿಮ ವಲಯ - 080- 68248454
ದಕ್ಷಿಣ ವಲಯ -8431816718
ಮಹದೇವಪುರ ವಲಯ - 080- 23010101/23010102
ಬೊಮ್ಮನಹಳ್ಳಿ ವಲಯ- 8884666670
ಯಲಹಂಕ ವಲಯ - 9480685964
ಆರ್‌ಆರ್ ನಗರ - 080-28601050
ದಾಸರಹಳ್ಳಿ ವಲಯ - 080 -29590057/29635904/5906
ಕೋವಿಡ್ ಲಕ್ಷಣಗಳ ಬಗ್ಗೆ ವೈದ್ಯಕೀಯ ಸಲಹೆಗಳಿಗಾಗಿ ಆಪ್ತಮಿತ್ರ ಸಹಾಯವಾಣಿ 14410ಗೂ ಕರೆ ಮಾಡಿ ಮಾಹಿತಿ ಪಡೆಯಬಹುದು.