'ಮುಖ್ಯಮಂತ್ರಿ ಆಗ್ಬೇಕು.. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಗೆಲ್ಲಿಸುತ್ತೀರಾ'- ಉಪೇಂದ್ರ ಪ್ರಶ್ನೆ!

'ರಿಯಲ್ ಸ್ಟಾರ್' ಉಪೇಂದ್ರ ಜನರ ಸೇವೆ ಮಾಡಲು ಪ್ರಜಾಕೀಯ ಪಕ್ಷ ಶುರು ಮಾಡಿದ್ದಾರೆ. ತಮ್ಮ ವಿಭಿನ್ನ, ವಿಶಿಷ್ಠ ಆಲೋಚನೆಗಳಿಂದ ಕಾರ್ಮಿಕನಂತೆ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ. ಈ ಮಧ್ಯೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಸಖತ್ ವೈರಲ್ ಆಗಿದೆ.

'ಮುಖ್ಯಮಂತ್ರಿ ಆಗ್ಬೇಕು.. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಗೆಲ್ಲಿಸುತ್ತೀರಾ'- ಉಪೇಂದ್ರ ಪ್ರಶ್ನೆ!
Linkup
ಜನರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ನಟ ಉಪೇಂದ್ರ ಆರಂಭಿಸಿದರು. ರಾಜಕೀಯಕ್ಕಿಂತ ಭಿನ್ನವಾದ ಆಲೋಚನೆಗಳನ್ನು ಇಟ್ಟುಕೊಂಡು, ಪ್ರಜಾಕೀಯ ಮೂಲಕ ಕೆಲಸ ಶುರು ಮಾಡಿದ್ದಾರೆ ಉಪ್ಪಿ. ಇಲ್ಲಿ ರಾಜಕಾರಣಿ ಇರಬಾರದು, ಪ್ರಜೆಗಳ ಸೇವೆ ಮಾಡುವ ಕಾರ್ಮಿಕ ಇರಬೇಕು ಎಂಬುದು ಅವರ ಮಾತು. ಅಂದಹಾಗೆ, ಇದುವರೆಗೂ ಪ್ರಜಾಕೀಯ ಮೂಲಕ ಚುನಾವಣೆಗೆ ಸ್ಪರ್ಧಿಸಿಲ್ಲ. ಆದರೆ, ಇದೀಗ ಅವರು ಹಾಕಿರುವ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 'ಮುಖ್ಯಮಂತ್ರಿ ಆಗ್ಬೇಕು.. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ನನ್ನನ್ನ ಗೆಲ್ಲಿಸುತ್ತೀರಾ' ಎಂದು ಪೋಸ್ಟ್‌ನ ಆರಂಭದಲ್ಲೇ ಪ್ರಶ್ನಿಸಿರುವ ಉಪೇಂದ್ರ, ನಂತರ ಸಾಕಷ್ಟು ವಿಚಾರಗಳನ್ನು ಇದರಲ್ಲಿ ಹೇಳುತ್ತಾ ಸಾಗಿದ್ದಾರೆ. ಹಾಗಾದರೆ, ಈ ಪೋಸ್ಟ್‌ನಲ್ಲಿ ಏನಿದೆ? ಆ ಕುರಿತ ಪೂರ್ಣ ಸಾರಾಂಶ ಇಲ್ಲಿದೆ. ನಾನು ಉಪೇಂದ್ರ, ಈ ರಾಜ್ಯದ ಮುಖ್ಯಮಂತ್ರಿ (CM) ಆಗ್ಬೇಕು... ನಾನು ಚುನಾವಣೇಲಿ ಸ್ಪರ್ಧಿಸಿದರೆ, ನೀವು ನನ್ನನ್ನ ಗೆಲ್ಲಿಸ್ತೀರಾ? ನೋಡಿ ನಾನು ಸಮಾಜ ಸೇವೆ ಮಾಡ್ತಿದೀನಿ! ರೈತರಿಂದ ಬೆಳೆ ಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚ್ತಿದೀನಿ, ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ, ಆಡಳಿತ ಪಕ್ಷ, ವಿರೋಧ ಪಕ್ಷ ಜನರಿಗೆ ಏನೂ ಮಾಡ್ದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳ್ತೀನಿ, ಇವರನ್ನೆಲ್ಲಾ ಕಿತ್ತು ಹಾಕಿ ನನಗೆ ಒಂದು ಅವಕಾಶ ಕೊಡಿ, ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ, ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ, ನನ್ನನ್ನ ಗೆಲ್ಲಿಸುತ್ತೀರಾ??? ನೀವು ನನ್ನನ್ನ ಗೆಲ್ಲಿಸ್ತೀರೋ, ಸೋಲುಸ್ತೀರೋ… ಆದ್ರೆ.. ನಾನು ಎಲೆಕ್ಷನ್‌ಗೆ ನಿಲ್ಲಲ್ಲ. ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೆ ಅಂತ ಕೇಳ್ತೀರಾ? ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿರೋರು, ಫೇಮಸ್ ವ್ಯಕ್ತಿಗಳು, ಮೇಲೆ ಹೇಳಿದ ಯಾವ ಕ್ವಾಲಿಟೀ ಇರೋ ನಾಯಕರು ನಿಲ್ಲಲ್ಲ, ದೊಡ್ಡ ನಾಯಕರನ್ನ ಕೊಡೋದು ! ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೋ ಸಾಮಾನ್ಯರು ಚುನಾವಣೆಗೆ ನಿಲ್ತಾರೆ, ಬರೀ ಪ್ರಜಾಕೀಯ ವಿಚಾರ ತಳ್ಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ, ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸೆ ಪೈಸೆ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡ್ತಾರೆ. ಪ್ರಜಾಕೀಯದ ( SOP) ಕಾರ್ಯವೈಖರಿ ಥರ ಕೆಲಸ ಮಾಡ್ಲಿಲ್ಲ, ನಿಮಗೆ ಅವನ/ಅವಳ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ, ನಾನು ಉಪೇಂದ್ರ ಸಿಎಂ ಆಗಿ ನಿಮ್ ಜೊತೆ ನಿಲ್ತೀನಿ, ನಿಮ್ ಜೊತೆ ಉಗ್ರ ಹೋರಾಟ ಮಾಡಿ, ಅಂತಾ ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ. ಈ ವ್ಯವಸ್ಥೆ ಸರೀ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ.. ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು/ ಅವಳು ಕೆಳಗಿಳೀಬೇಕು ಅಂತಾ ಕಾನೂನು ಬರ್ಬೇಕು. ಅದಕ್ಕೆ ನಿಮ್ ಜೊತೆ ನಾನು ಯಾವಾಗ್ಲೂ ಇರೋ permanent C M ( ಕಾಮನ್ ಮೆನ್ ) ಜನ ಸಾಮಾನ್ಯ... ಇಲ್ಲ ಇಲ್ಲ.... ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ… ಸರೀನಾ..?