ಸಂಕಷ್ಟದಲ್ಲಿರುವ ರೈತರ ಬೆಳೆ ಖರೀದಿ ಮಾಡಲು ನಟ ಉಪೇಂದ್ರ ನಿರ್ಧಾರ

ಕೊರೊನಾ ಸೋಂಕಿನ ಎರಡನೇ ಅಲೆ ಮತ್ತು ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿ ಇರುವ ರೈತರ ಬೆಳೆಯನ್ನು ಖರೀದಿ ಮಾಡಿ ಅವಶ್ಯವಿರುವವರಿಗೆ ಹಂಚಲು ನಟ ಉಪೇಂದ್ರ ಮನಸ್ಸು ಮಾಡಿದ್ದಾರೆ.

ಸಂಕಷ್ಟದಲ್ಲಿರುವ ರೈತರ ಬೆಳೆ ಖರೀದಿ ಮಾಡಲು ನಟ ಉಪೇಂದ್ರ ನಿರ್ಧಾರ
Linkup
ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಕುಟುಂಬಗಳಿಗೆ ಸಹಾಯ ಮಾಡಲು ಈಗಾಗಲೇ ರಿಯಲ್ ಸ್ಟಾರ್ ಮುಂದಡಿಯಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ನಟ ಉಪೇಂದ್ರ ನಿರ್ಧರಿಸಿದ್ದಾರೆ. ನಟ ಉಪೇಂದ್ರ ಜೊತೆಗೆ ಶೋಭರಾಜ್, ಸಾಧು ಕೋಕಿಲ, ಪವನ್ ಒಡೆಯರ್, ಸರೋಜಾ ದೇವಿ, ಮಾನ್ಯ ಮುಂತಾದವರು ಕೈಜೋಡಿಸಿದ್ದಾರೆ. ಸಿನಿ ಕಲಾವಿದರ ಕುಟುಂಬಗಳ ಸಂಕಷ್ಟಕ್ಕೆ ಮಿಡಿದಿರುವ ನಟ ಉಪೇಂದ್ರ ಇದೀಗ ರೈತರಿಗೂ ನೆರವಾಗಲು ನಿರ್ಧರಿಸಿದ್ದಾರೆ. ಕೊರೊನಾ ಸೋಂಕಿನ ಎರಡನೇ ಅಲೆ ಮತ್ತು ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿ ಇರುವ ರೈತರ ಬೆಳೆಯನ್ನು ಖರೀದಿ ಮಾಡಿ ಅವಶ್ಯವಿರುವವರಿಗೆ ಹಂಚಲು ನಟ ಉಪೇಂದ್ರ ಮನಸ್ಸು ಮಾಡಿದ್ದಾರೆ. ಕೊರೊನಾ ಸಂಕಷ್ಟದಲ್ಲಿರುವವರಿಗೆ ಸಹಕಾರಿಯಾಗುವಂತೆ ದಿನಸಿ ಕಿಟ್‌ಗಳನ್ನು ಉಪೇಂದ್ರ ವಿತರಿಸುತ್ತಿದ್ದಾರೆ. ಇದರ ಜೊತೆಗೆ ರೈತಾಪಿ ವರ್ಗಕ್ಕೂ ಸಹಾಯವಾಗಲಿ ಎಂದು ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡಿ, ಅದನ್ನು ದಿನಸಿ ಕಿಟ್‌ ಮೂಲಕ ವಿತರಿಸಲು ಉಪೇಂದ್ರ ಪ್ಲಾನ್ ಮಾಡಿದ್ದಾರೆ. ಉಪೇಂದ್ರ ಟ್ವೀಟ್ ''ಕೊರೊನಾ ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗದೆ ಎಷ್ಟೋ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾನಿಗಳು ನೀಡಿರುವ ಹಣದಲ್ಲಿ ರೈತರಿಂದ ನೇರವಾಗಿ ತರಕಾರಿಗಳನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್‌ಗಳ ಜೊತೆಗೆ ವಿತರಿಸುತ್ತೇವೆ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ''ಬೆಳೆದ ಬೆಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರ ಗಮನಕ್ಕೆ.. ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ'' ಎಂದು ಟ್ವಿಟ್ಟರ್‌ನಲ್ಲಿ ಉಪೇಂದ್ರ ಬರೆದುಕೊಂಡಿದ್ದಾರೆ. ಜೊತೆಗೆ ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆಯನ್ನೂ ಉಪೇಂದ್ರ ಹಂಚಿಕೊಂಡಿದ್ದಾರೆ. ''ನೀವು ಬೆಳೆದ ಬೆಳೆ ಯಾವುದು? ಆ ಬೆಳೆ ಎಷ್ಟು ಕೆಜಿ/ಕ್ವಿಂಟಾಲ್ ಇದೆ? ಅದರ ಅಂತಿಮ ಬೆಲೆ ಎಷ್ಟು? ಅದನ್ನು ಬೆಂಗಳೂರಿಗೆ ಸಾಗಿಸಲು ಸಾರಿಗೆ ವೆಚ್ಚ ಎಷ್ಟು? ವಿವರಗಳನ್ನು ದಯವಿಟ್ಟು ಕಳಿಸಿಕೊಡಿ'' ಎಂದು ಉಪೇಂದ್ರ ಕೇಳಿಕೊಂಡಿದ್ದಾರೆ. ಉಪೇಂದ್ರ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ಪಾತ್ರವಾಗಿದೆ. ಸಂಕಷ್ಟದ ಸಮಯದಲ್ಲಿ ರೈತರ ಕೈಹಿಡಿಯಲು ಮುಂದೆ ಬಂದಿರುವ ಉಪೇಂದ್ರಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.