ಬಂದರು, ಏರ್‌ಪೋರ್ಟ್‌ ಆಯ್ತು; ಈಗ ಸಿಮೆಂಟ್‌ ಉದ್ಯಮಕ್ಕೆ ಅದಾನಿ ಎಂಟ್ರಿ!

ದೇಶದ ಬಹುಪಾಲು ಬಂದರು ಮತ್ತು ವಿಮಾನ ನಿಲ್ದಾಣಗಳಲ್ಲಿ ಕೈ ವಶಪಡಿಸಿಕೊಂಡ ನಂತರ ಇದೀಗ ಸಿಮೆಂಟ್‌ ಉದ್ಯಮ ಪ್ರವೇಶಿಸಲು ಗೌತಮ್‌ ಅದಾನಿ ನಿರ್ಧರಿಸಿದ್ದಾರೆ. ಈ ಸಂಬಂಧ 'ಅದಾನಿ ಸಿಮೆಂಟ್‌ ಇಂಡಸ್ಟ್ರೀಸ್‌ ಲಿ.' ಕಂಪನಿ ಸ್ಥಾಪಿಸಿದ್ದಾರೆ.

ಬಂದರು, ಏರ್‌ಪೋರ್ಟ್‌ ಆಯ್ತು; ಈಗ ಸಿಮೆಂಟ್‌ ಉದ್ಯಮಕ್ಕೆ ಅದಾನಿ ಎಂಟ್ರಿ!
Linkup
ಮುಂಬಯಿ: ದೇಶದ ಬಂದರು ಮತ್ತು ವಿಮಾನ ನಿಲ್ದಾಣಗಳಲ್ಲಿ ಬಹುಪಾಲನ್ನು ವಶಪಡಿಸಿಕೊಂಡ ನಂತರ ಇದೀಗ ಸಿಮೆಂಟ್‌ ಉದ್ದಿಮೆ ವಲಯಕ್ಕೆ ಪ್ರವೇಶಿಸಲು ನೇತೃತ್ವದ ನಿರ್ಧರಿಸಿದೆ. ಅದಾನಿ ಎಂಟರ್‌ಪ್ರೈಸಸ್‌ ಶನಿವಾರ ನೀಡಿದ ಹೇಳಿಕೆಯಲ್ಲಿ, ಹೊಸ ' ಇಂಡಸ್ಟ್ರೀಸ್‌ ಲಿ.' ಕಂಪನಿಯ ವಿವರಗಳನ್ನು ನೀಡಿದೆ. ಗುಜರಾತ್‌ನಲ್ಲಿ ಈ ಕಂಪನಿಯ ಪ್ರಧಾನ ಕಚೇರಿ ಇದೆ. ಜೂನ್‌ 11 ರಂದು ಈ ಕಂಪನಿ ಸ್ಥಾಪನೆಯಾಗಿದೆ. "ಎಲ್ಲಾ ರೀತಿಯ ಸಿಮೆಂಟ್‌ನ ತಯಾರಿಕೆ, ಉತ್ಪಾದನೆ, ಸಂಸ್ಕರಣೆ ವ್ಯವಹಾರವನ್ನು ಮುಂದುವರಿಸಲು" ಈ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಫೈಲಿಂಗ್ ತಿಳಿಸಲಾಗಿದೆ. ಅದಾನಿ ಸಿಮೆಂಟ್ ಇಂಡಸ್ಟ್ರೀಸ್ ಇನ್ನೂ ಕಾರ್ಯಾಚರಣೆಯನ್ನು ಪ್ರಾರಂಭಿಸಿಲ್ಲ. ‘ಸಿಮೆಂಟ್‌ ಕಂಪನಿಯನ್ನು ಹೇಗೆ ಅದಾನಿ ಗ್ರೂಪ್‌ ಬೆಳೆಸಲಿದೆ ಎಂಬುದು ನೋಡಬೇಕಾಗಿದೆ. ಆದರೆ ಸಿಮೆಂಟ್‌ ವಲಯದ ಕಂಪನಿಗಳ ನಡುವೆ ಸ್ಪರ್ಧೆ ಹೆಚ್ಚಿಸುವ ನಿರೀಕ್ಷೆ ಇದೆ’ ಎಂದು ಮೋರ್ಗಾನ್‌ ಸ್ಟಾನ್ಲಿಯ ವ್ಯವಸ್ಥಾಪಕ ನಿರ್ದೇಶಕ ರಿಧಾಮ್‌ ದೇಸಾಯಿ ಹೇಳಿದ್ದಾರೆ. ಅದಾನಿ ಎಂಟರ್‌ಪ್ರೈಸಸ್ ಜೂನ್ 7 ರಂದು ವಿಂಡ್ ಟರ್ಬೈನ್ ಜನರೇಟರ್‌ಗಳನ್ನು ತಯಾರಿಸಲು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮುಂಡ್ರಾ ವಿಂಡ್‌ಟೆಕ್ ಲಿಮಿಟೆಡ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ಇದೀಗ ಅದಾನಿ ಸಿಮೆಂಟ್ ಕೂಡ ಶುರುವಾಗಿದೆ. ಗೌತಮ್ ಅದಾನಿ ನೇತೃತ್ವದ ಕಂಪನಿಯು ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್‌ ಅಲ್ಲದೆ ಎಂಎಂಸಿಜಿ (ಆಹಾರ ಉತ್ಪನ್ನಗಳು) ಉತ್ಪನ್ನಗಳನ್ನೂ ತಯಾರಿಸುತ್ತಿದೆ. ಕ್ಲೌಡ್‌ ಸೇವೆ ಮೂಲಕ ಅಂತರ್ಜಾಲ ವಲಯಕ್ಕೂ ಕಂಪನಿ ಕಾಲಿಟ್ಟಿದ್ದು, ಒಂದೊಂದೇ ಉದ್ಯಮಗಳನ್ನು ತನ್ನ ಪಟ್ಟಿಗೆ ಸೇರಿಸಿಕೊಳ್ಳುತ್ತಾ ಸಾಗಿದೆ. ಅದಾನಿ ಸಮೂಹ ಕಂಪನಿಗಳ ಮೌಲ್ಯ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದು, ಒಂದೇ ವರ್ಷದಲ್ಲಿ ಅದಾನಿ ಆಸ್ತಿ ಮೌಲ್ಯ 3 ಲಕ್ಷ ಕೋಟಿ ರೂ.ಗೂ (43 ಶತಕೋಟಿ ಡಾಲರ್) ಹೆಚ್ಚು ಏರಿಕೆಯಾಗಿದೆ. ಈ ಮೂಲಕ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯ ಸ್ಥಾನಕ್ಕೆ ಬಂದು ಅದಾನಿ ಕುಳಿತಿದ್ದಾರೆ.