ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್! ಸರಕಾರವೇ ಬಿಟ್‌ಕಾಯಿನ್ ಖರೀದಿಸಿದೆ ಎಂದಿದ್ದ ಹ್ಯಾಕರ್ಸ್‌!

ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯನ್ನು ಶನಿವಾರ ಹ್ಯಾಕ್ ಮಾಡಲಾಗಿತ್ತು. ಈ ವಿಷಯವನ್ನು ಕೂಡಲೇ ಟ್ವಿಟ್ಟರ್‌ಗೆ ತಿಳಿಸಿ, ಖಾತೆಯನ್ನು ಭದ್ರಪಡಿಸಲಾಯಿತು ಎಂದು 'ಪ್ರಧಾನ ಮಂತ್ರಿ ಕಾರ್ಯಾಲಯ' ತಿಳಿಸಿದೆ.

ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್! ಸರಕಾರವೇ ಬಿಟ್‌ಕಾಯಿನ್ ಖರೀದಿಸಿದೆ ಎಂದಿದ್ದ ಹ್ಯಾಕರ್ಸ್‌!
Linkup
ಹೊಸದಿಲ್ಲಿ: ಪ್ರಧಾನಿ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯನ್ನು ಶನಿವಾರ ಹ್ಯಾಕ್ ಮಾಡಲಾಗಿತ್ತು. ಈ ವಿಷಯವನ್ನು ಕೂಡಲೇ ಟ್ವಿಟ್ಟರ್‌ಗೆ ತಿಳಿಸಿ, ಖಾತೆಯನ್ನು ಭದ್ರಪಡಿಸಲಾಯಿತು. ಈ ಮಧ್ಯೆ ಯಾವುದೇ ಟ್ವೀಟ್‌ಗಳು ಹಂಚಿಕೆಯಾಗಿದ್ದರೆ ಅದನ್ನು ಗಣನೆಗೆ ತೆಗೆದುಕೊಳ್ಳಬೇಡಿ ಎಂದು 'ಪ್ರಧಾನ ಮಂತ್ರಿ ಕಾರ್ಯಾಲಯ' ತಿಳಿಸಿದೆ. ಶನಿವಾರ ರಾತ್ರಿ (ಡಿ.11) ಪ್ರಧಾನಿ ಮೋದಿಯವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಹ್ಯಾಕರ್ಸ್ ಗಳು ಬಿಟ್‌ಕಾಯಿನ್() ಸಂಬಂಧಿಸಿದಂತೆ ಕೆಲವು ಸಾಲುಗಳನ್ನು ಬರೆದು ಟ್ವೀಟ್ ಮಾಡಿದ್ದರು. ಇದು ಗಮನಕ್ಕೆ ಬಂದ ಕೂಡಲೇ ಎಚ್ಚೆತ್ತುಕೊಂಡ ಟ್ವಿಟರ್ ಸಂಸ್ಥೆ ಪ್ರಧಾನಿ(PM Modi)ಯವರ ಟ್ವಿಟರ್ ಖಾತೆಯನ್ನು ಸರಿಮಾಡಿದೆ. ‘ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನು ಬದ್ಧಗೊಳಿಸಿದೆ. ಕೇಂದ್ರ ಸರ್ಕಾರವೇ ಖುದ್ದು 500 ಬಿಟ್‌ಕಾಯಿನ್(Bitcoin) ಗಳನ್ನು ಖರೀದಿಸಿದ್ದು, ದೇಶದ ನಾಗರಿಕರಿಗೆ ವಿತರಿಸುತ್ತಿದೆ’ ಎಂದು ಕ್ಯಾಪ್ಶನ್ ಬರೆದು ಕೆಳಗೆ ಒಂದು ಲಿಂಕ್ ಶೇರ್ ಮಾಡಲಾಗಿತ್ತು. ಭಾರತದಲ್ಲಿ ಬಿಟ್‌ಕಾಯಿನ್ ಅನ್ನು ಅಧಿಕೃತ ಕರೆನ್ಸಿಯಾಗಿ ಸ್ವೀಕರಿಸುವ ಯಾವುದೇ ಯೋಜನಗಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman)ಈ ಹಿಂದೆ ಸ್ಪಷ್ಟಪಡಿಸಿದ್ದರು. ಬಿಟ್‌ಕಾಯಿನ್‌ಗೆ ಯಾವುದೇ ಕಾನೂನುಬದ್ಧ ಮಾನ್ಯತೆ ನೀಡಲಾಗಿಲ್ಲ. ಬಿಟ್‌ಕಾಯಿನ್ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ದತ್ತಾಂಶ ಸಂಗ್ರಹಿಸಲ್ಲವೆಂದು ಕೇಂದ್ರ ಸರ್ಕಾರ ಕೂಡ ಸಂಸತ್‌ಗೆ ಲಿಖಿತ ಉತ್ತರ ನೀಡಿತ್ತು. ಹೊಂದಿರುವ ವಿಶ್ವದ ಒಟ್ಟು ಜನರ ಪೈಕಿ ಭಾರತೀಯರೇ ಹೆಚ್ಚಿದ್ದಾರೆ. ಬ್ರೋಕರ್‌ ಡಿಸ್ಕವರಿ ವರದಿ ಪ್ರಕಾರ ಭಾರತದಲ್ಲಿ 10.07 ಕೋಟಿ ಮಂದಿ ಕ್ರಿಪ್ಟೋಕರೆನ್ಸಿ ಹೊಂದಿದ್ದಾರೆ. ಅಮೆರಿಕದಲ್ಲಿ 2.74 ಕೋಟಿ ಜನ ಕ್ರಿಪ್ಟೋಕರೆನ್ಸಿಗಳನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ. ರಷ್ಯಾ 1.74 ಕೋಟಿ ಮಂದಿ, ನೈಜೀರಿಯಾದಲ್ಲಿ 1.30 ಕೋಟಿ ಮಂದಿ ಕ್ರಿಪ್ಟೋಕರೆನ್ಸಿ ಹೊಂದಿದ್ದಾರೆ. ಕ್ರಿಪ್ಟೋ ನಿಯಂತ್ರಣ ಪ್ರತಿಪಾದಿಸಿದ ಪ್ರಧಾನಿ ಕ್ರಿಪ್ಟೋ ಕರೆನ್ಸಿಯ ನಿಯಂತ್ರಣಕ್ಕೆ ಜಾಗತಿಕವಾಗಿ ನಿಯಮಗಳನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಆಯೋಜಿಸಿದ್ದ 'ಪ್ರಜಾಪ್ರಭುತ್ವ ಶೃಂಗಸಭೆ'ಯನ್ನು ಉದ್ದೇಶಿಸಿ ವರ್ಚ್ಯುವಲ್‌ ವೇದಿಕೆ ಮೂಲಕ ಶುಕ್ರವಾರ ಮಾತನಾಡಿದ ಅವರು, "ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ಜಾಗತಿಕ ಸಹಕಾರದ ಅಗತ್ಯವಿದೆ. ಅದರಲ್ಲೂ, ತಂತ್ರಜ್ಞಾನವೇ ಸರ್ವವೂ ಆಗಿರುವ ಇಂದಿನ ಕಾಲದಲ್ಲಿ ಮೌಲ್ಯ ರಕ್ಷಣೆ ಅತ್ಯವಶ್ಯಕವಾಗಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ಕ್ರಿಪ್ಟೋ ಕರೆನ್ಸಿಯಂತಹ ತಂತ್ರಜ್ಞಾನಗಳ ಬಳಕೆಗೆ ನಿಯಮ ರೂಪಿಸುವುದು ಅಗತ್ಯವಿದೆ. ಏಕೆಂದರೆ, ತಂತ್ರಜ್ಞಾನವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸಲು ಬಳಕೆಯಾಗಬೇಕೇ ಹೊರತು, ದುರ್ಬಲಗೊಳಿಸಲು ಬಳಕೆ ಆಗಬಾರದು. ಇದಕ್ಕಾಗಿ ಎಲ್ಲ ರಾಷ್ಟ್ರಗಳು ಒಗ್ಗೂಡಿ ನಿಯಮ ರೂಪಿಸಬೇಕು," ಎಂದರು.