ಬೆಂಗಳೂರು: ಕಬ್ಬನ್‌ ಪಾರ್ಕ್‌ನಲ್ಲಿ ಉಗ್ರ ಸ್ವರೂಪದ ನಾಯಿಗಳ ಪ್ರವೇಶ ನಿರ್ಬಂಧ

ಕಬ್ಬನ್‌ಪಾರ್ಕ್‌ಗೆ ಸಾಕು ನಾಯಿಗಳನ್ನು ಕರೆತರುವುದರಿಂದ ಉದ್ಯಾನಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ. ಉಗ್ರ ಸ್ವರೂಪದ ನಾಯಿಗಳು ಜನರ ಬಳಿಗೆ ಬರುವುದು, ಕಂಡ ಕಂಡಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತವೆ.

ಬೆಂಗಳೂರು: ಕಬ್ಬನ್‌ ಪಾರ್ಕ್‌ನಲ್ಲಿ ಉಗ್ರ ಸ್ವರೂಪದ ನಾಯಿಗಳ ಪ್ರವೇಶ ನಿರ್ಬಂಧ
Linkup
ಬೆಂಗಳೂರು: ಕಬ್ಬನ್‌ಪಾರ್ಕ್‌ನಲ್ಲಿ ಉಗ್ರ ಸ್ವರೂಪದ ನಾಯಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಾಕು ನಾಯಿಗಳನ್ನು ಕರೆ ತರುವವರು ನಾಯಿಯ ಜತೆಗೆ ಸ್ಕೂಪ್‌ (ನಾಯಿಯ ಮಲ ತೆಗೆಯುವ ಪರಿಕರ) ಅನ್ನು ಕಡ್ಡಾಯವಾಗಿ ತರಬೇಕು. ಜತೆಗೆ ಗರಿಷ್ಠ ಆರು ಅಡಿ ಉದ್ದ ಮೀರದಂತೆ ಚೈನ್‌ ಹಾಕಿ ಕರೆತರಬೇಕು. ರಾಜ್ಯ ತೋಟಗಾರಿಕೆ ಇಲಾಖೆಯು ಉದ್ಯಾನಕ್ಕೆ ಶ್ವಾನಗಳನ್ನು ಕರೆತರುವ ಶ್ವಾನ ಮೇಲ್ವಿಚಾರಕರಿಗೆ ಹೊಸದಾಗಿ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಆದೇಶಿಸಿದೆ. ಕಬ್ಬನ್‌ಪಾರ್ಕ್‌ಗೆ ಸಾಕು ನಾಯಿಗಳನ್ನು ಕರೆತರುವುದರಿಂದ ಉದ್ಯಾನಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ. ಉಗ್ರ ಸ್ವರೂಪದ ನಾಯಿಗಳು ಜನರ ಬಳಿಗೆ ಬರುವುದು, ಕಂಡ ಕಂಡಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತವೆ. ನಾಯಿಗಳ ಉಪಟಳ ಹೆಚ್ಚಾಗಿದೆ ಎಂದು ಕಬ್ಬನ್‌ಪಾರ್ಕ್ ನಡಿಗೆದಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ಕಬ್ಬನ್‌ಪಾರ್ಕ್ ಒಳಗಡೆ ನಾಯಿಗಳ ಉಪಟಳ ತಡೆಯಲು ಬಿಬಿಎಂಪಿ ತಾನಾಗಿಯೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಲಯವೇ ನೋಟಿಸ್‌ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಉಗ್ರ ಸ್ವಭಾವದ / ದೊಡ್ಡ ತಳಿಯ ನಾಯಿಗಳನ್ನು ಉದ್ಯಾನಕ್ಕೆ ಕರೆ ತರುವುದನ್ನು ನಿರ್ಬಂಧಿಸಲಾಗಿದೆ. ಮಕ್ಕಳು ಆಟವಾಡುವ ಪ್ರದೇಶ ಹಾಗೂ ವಾಯು ವಿಹಾರದ ಸ್ಥಳಗಳ ಹತ್ತಿರ ಬೀದಿ ನಾಯಿಗಳಿಗೆ ಆಹಾರ ನೀಡದೆ ಇರಲು ಸಲಹೆ ನೀಡಿದೆ. ಉದ್ಯಾನದಲ್ಲಿ ಸಾಕು ನಾಯಿಗಳು ಕಚ್ಚಿದಲ್ಲಿಇಲ್ಲವೇ ಗಾಯ ಮಾಡಿದಲ್ಲಿಅವುಗಳ ಮಾಲೀಕರೇ ಹೊಣೆಗಾರರಾಗಿರುತ್ತಾರೆ ಮತ್ತು ಈ ಸಂಬಂಧ ಇಂತಹ ಅಪಾಯಕ್ಕೆ ತಗಲುವ ವೆಚ್ಚಕ್ಕೆ ಮಾಲೀಕರೇ ಹೊಣೆಗಾರರಾಗುತ್ತಾರೆ ಎಂದು ರಾಜ್ಯ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌ ತಿಳಿಸಿದರು.