ಮೇಲ್ಮನೆ ಅಂತಿಮ 'ಹಣಾ'ಹಣಿ; ಕೆಲ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ಸಾಧ್ಯತೆ

ಕಾಂಗ್ರೆಸ್‌ ಅಥವಾ ಬಿಜೆಪಿಗೆ ಜೆಡಿಎಸ್‌ ಮತ ವರ್ಗಾವಣೆ ಆಗುವುದರಿಂದ ಹೆಚ್ಚಿನ ಬದಲಾವಣೆಯೇನೂ ಆಗುವುದಿಲ್ಲ. ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಕಡಿಮೆ. ಯಾಕೆಂದರೆ, ದ್ವಿಸದಸ್ಯತ್ವವಿರುವ ಕ್ಷೇತ್ರಗಳಲ್ಲಿ ಹೆಚ್ಚುಕಡಿಮೆ ಫಲಿತಾಂಶ ನಿರ್ಧಾರವಾದಂತಿದೆ.

ಮೇಲ್ಮನೆ ಅಂತಿಮ 'ಹಣಾ'ಹಣಿ; ಕೆಲ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ಸಾಧ್ಯತೆ
Linkup
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸುವವರನ್ನು ಸೆಳೆಯುವ ಚಟುವಟಿಕೆ ಭರದಿಂದ ಸಾಗಿದೆ. ಹಣ ಮತ್ತು ಆಭರಣಗಳ ಆಮಿಷ ಜೋರಾಗಿದೆ. ಈ ನಡುವೆ, ಕೆಲ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಮತ ವರ್ಗಾಯಿಸುವುದಾಗಿ ಜೆಡಿಎಸ್‌ನ ಸ್ಥಳೀಯ ಮುಖಂಡರು ಹೇಳಿಕೊಂಡಿರುವುದು ಗಮನ ಸೆಳೆದಿದೆ. ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ನಡುವೆ ಒಪ್ಪಂದದ ಮಾತು ಕೇಳಿಬಂದಿತ್ತು. ಸ್ಪರ್ಧಿಸದ ಕಡೆ ಬಿಜೆಪಿಗೆ ಬೆಂಬಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಹಿರಂಗವಾಗಿಯೇ ಮನವಿ ಮಾಡಿಕೊಂಡಿದ್ದರು. ಈ ಬೆಳವಣಿಗೆ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ರಾಜಕೀಯ ವಲಯದ ಈ ಚರ್ಚೆಗೆ ಪುಷ್ಟಿ ಸಿಗುವಂತೆ ಮಾಡಿದ್ದರು. ಮೈತ್ರಿ ಬಗ್ಗೆ ಕುಮಾರಸ್ವಾಮಿ ನಿರ್ಧರಿಸುತ್ತಾರೆ ಎಂದೂ ಗೌಡರು ಹೇಳಿದ್ದರು. ರಾಜಕೀಯ ಮುಖಂಡರು ತಮ್ಮದೇ ಕಾರ್ಯತಂತ್ರದಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್‌ನತ್ತ ಒಲವು ಇದರ ನಡುವೆ ''ಸ್ಥಳೀಯ ನಾಯಕರು ಯಾರಿಗೆ ಮತ ನೀಡಬೇಕು ಎಂಬುದನ್ನು ನಿರ್ಧರಿಸಲಿ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ'' ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ಕುಮಾರಸ್ವಾಮಿ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್‌ಗೆ ಬೆಂಬಲಿಸಲು ಜೆಡಿಎಸ್‌ನ ರಾಯಚೂರು ಘಟಕ ತೀರ್ಮಾನ ಕೈಗೊಂಡಿತು. ಈ ಬಗ್ಗೆ ಮಾಜಿ ಸಚಿವ ವೆಂಕಟರಾವ್‌ ನಾಡಗೌಡ ಅಧಿಕೃತ ಹೇಳಿಕೆ ನೀಡಿದ್ದಾರೆ. ಇದೀಗ ಹುಬ್ಬಳ್ಳಿ-ಧಾರವಾಡದಿಂದಲೂ ಜೆಡಿಎಸ್‌ ಮತಗಳನ್ನು ಕಾಂಗ್ರೆಸ್‌ಗೆ ಟ್ರಾನ್ಸ್‌ಫರ್‌ ಮಾಡುವ ನಿರ್ಧಾರವಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖರು ಜೆಡಿಎಸ್‌ ಬೆಂಬಲವೇ ಬೇಕಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಈ ನಡುವೆಯೂ ಜೆಡಿಎಸ್‌ನಲ್ಲಿಕಾಂಗ್ರೆಸ್‌ನತ್ತ ಒಲವು ವ್ಯಕ್ತವಾಗುತ್ತಿದೆ. ಅಥವಾ ಬಿಜೆಪಿಗೆ ಜೆಡಿಎಸ್‌ ಮತ ವರ್ಗಾವಣೆ ಆಗುವುದರಿಂದ ಹೆಚ್ಚಿನ ಬದಲಾವಣೆಯೇನೂ ಆಗುವುದಿಲ್ಲ. ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಕಡಿಮೆ. ಯಾಕೆಂದರೆ, ದ್ವಿಸದಸ್ಯತ್ವವಿರುವ ಕ್ಷೇತ್ರಗಳಲ್ಲಿ ಹೆಚ್ಚುಕಡಿಮೆ ಫಲಿತಾಂಶ ನಿರ್ಧಾರವಾದಂತಿದೆ. ಇನ್ನು ಜೆಡಿಎಸ್‌ ಸ್ಪರ್ಧಿಸಿರುವ 6 ಕ್ಷೇತ್ರಗಳ ಪೈಕಿ ಕೆಲವೆಡೆ ತ್ರಿಕೋನ ಸ್ಪರ್ಧೆಯಿದೆ. ಇದರ ಹೊರತಾಗಿ ಜೆಡಿಎಸ್‌ ಕಣಕ್ಕಿಳಿಯದ ಕ್ಷೇತ್ರಗಳಲ್ಲಿಆ ಪಕ್ಷಕ್ಕೆ ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ಮತಗಳೂ ಇಲ್ಲ. ಹಾಗಾಗಿ ಜೆಡಿಎಸ್‌ನ ಸ್ಥಳೀಯ ನಾಯಕರು ತಮ್ಮ ರಾಜಕೀಯ ಭವಿಷ್ಯದ ಸಂಬಂಧ ನಿರ್ಧಾರ ಕೈಗೊಳ್ಳಲು ಈ ಚುನಾವಣೆಯನ್ನು ಬಳಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಪರಿಷತ್‌ ಚುನಾವಣೆಯಲ್ಲಿ ತಮ್ಮ ಪಕ್ಷದ ಮತದಾರರು ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲ ನೀಡಬಹುದು ಎಂದು ಜೆಡಿಎಸ್‌ ಸೂಚಿಸಿದ್ದರ ಹಿಂದೆ ಅನೇಕ ಸಂಶಯಗಳಿವೆ. - ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಅಧಿಕಾರವನ್ನು ಜೆಡಿಎಸ್‌ ಮುಖಂಡರು ಸ್ಥಳೀಯ ನಾಯಕರಿಗೆ ನೀಡಿದ್ದಾರೆ. ಆ ನಾಯಕರು ಪಂಚಾಯಿತಿ ಸದಸ್ಯರ ಸ್ವಂತ ತೀರ್ಮಾನಕ್ಕೆ ಬಿಡುತ್ತಾರೆ. ನಮಗೆ ಅವರಿಂದ ಸಕಾರಾತ್ಮಕ ಬೆಂಬಲ ವ್ಯಕ್ತವಾಗಲಿದೆ. - ಸಿ ಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ