ನಮ್ಮ ಮೆಟ್ರೋ ವಾಜಪೇಯಿ ಕೊಡುಗೆ..! ರಾಮನಗರದವರೆಗೂ ವಿಸ್ತರಣೆ ಗುರಿ: ಬಸವರಾಜ ಬೊಮ್ಮಾಯಿ

ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ಅಟಲ್‌ ಬಿಹಾರಿ ವಾಜಪೇಯಿ ಅವರ ಕೊಡುಗೆ. ರಾಮನಗರದವರೆಗೂ ಮೆಟ್ರೋ ರೈಲು ಸಂಚಾರ ವಿಸ್ತರಿಸುವ ಗುರಿ ಹೊಂದಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೆಂಪೇಗೌಡರ ಅಂದಿನ ದೂರದೃಷ್ಟಿ ಗಮನದಲ್ಲಿಟ್ಟುಕೊಂಡು ಬೆಂಗಳೂರು ಕಟ್ಟೋಣ ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

ನಮ್ಮ ಮೆಟ್ರೋ ವಾಜಪೇಯಿ ಕೊಡುಗೆ..! ರಾಮನಗರದವರೆಗೂ ವಿಸ್ತರಣೆ ಗುರಿ: ಬಸವರಾಜ ಬೊಮ್ಮಾಯಿ
Linkup
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕೊಡುಗೆ. , ರಾಜಾನುಕುಂಟೆ, ಮಾಗಡಿವರೆಗೆ ಮೆಟ್ರೋ ವಿಸ್ತರಿಸುವ ಗುರಿ ಹೊಂದಿದ್ದೇವೆ. 2024ರ ವೇಳೆಗೆ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಮುಕ್ತಾಯಗೊಳಿಸಲು ಸೂಚಿಸಿದ್ದೇನೆ. ಕೆಂಪೇಗೌಡರ ಆವತ್ತಿನ ದೂರದೃಷ್ಟಿ ಗಮನದಲ್ಲಿಟ್ಟುಕೊಂಡು ಬೆಂಗಳೂರನ್ನು ಕಟ್ಟೋಣ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಾಯಂದನಹಳ್ಳಿಯಿಂದ ಕೆಂಗೇರಿವರೆಗೆ ನಮ್ಮ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಎಲ್ಲಿ ಜನಸಂದಣಿ ಇರಲಿದೆಯೋ, ಅಲ್ಲಿಗೆ ಮೆಟ್ರೋ ಹೋಗಬೇಕು. ಎಲ್ಲಿ ಜಾಗ ಸಿಗಲಿದೆ ಅಲ್ಲಿ ಮೆಟ್ರೋ ಮಾಡಬೇಕು. ಈ ಏಳುವರೆ ಕಿಮೀ ಭಾಗದಲ್ಲಿ ಅತಿ ಹೆಚ್ಚು ಜನಸಂದಣಿ ಇದೆ. ಈ ಭಾಗದಲ್ಲಿ ಮೆಟ್ರೋ ರೈಲು ತಂದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೆಟ್ರೋ ಬೆಂಗಳೂರಿನ ನಾಡಿ ಅಲ್ಲ, ಭವಿಷ್ಯದ ಜೀವನಾಡಿ ಎಂದರು. ನಮ್ಮ ಮೆಟ್ರೋ ಇರುವುದರಿಂದ ಬೆಂಗಳೂರಿಗೆ ಐಟಿ ಜನರು ಇಲ್ಲಿಗೆ ಬರ್ತಿದ್ದಾರೆ. ಮೂರು ಕಮ್ಯುನಿಕೇಷನ್ ಮೂಲಕ ವಿಮಾನ ನಿಲ್ದಾಣಕ್ಕೆ ಮಾರ್ಗ ಮಾಡ್ತಿದ್ದೇವೆ. ಯಾವ ನಗರದಲ್ಲೂ ಕೂಡ ಈ ಯೋಜನೆ ಇಲ್ಲ. ಅದನ್ನ ನಾವು ಮಾಡ್ತಿದ್ದೇವೆ. ನಮ್ಮಲ್ಲಿ ದುಡಿಯುವ ವರ್ಗ ಇದೆ. ಅವುಗಳನ್ನ ಗಮನದಲ್ಲಿಟ್ಟುಕೊಂಡಿದ್ದೇವೆ. 75 ಸ್ಲಂಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿದರು. ಸಂಚಾರಿ ದಟ್ಟಣೆ ಇರೋ ಎಲ್ಲಾ ಮಾರ್ಗಗಳಿಗೆ ಯಾವುದೇ ಅಡೆತಡೆ ಇಲ್ಲದೆ ಮುಕ್ತ ಸಂಚಾರ ಮಾಡುತ್ತೇವೆ. ಜನ ವಸತಿ ಪ್ರದೇಶ, ಬಿಬಿಎಂಪಿ, 110 ಹಳ್ಳಿಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಸಿಪಿಡಿ ಡಿಸ್ಟ್ರಿಕ್ಟ್ ಮಾಡುವ ಉದ್ದೇಶ ಇದೆ. ಕೇಂದ್ರದಿಂದ ಸಂಪೂರ್ಣ ಸಹಕಾರ ದೊರೆತಿದೆ. ಬರುವ ದಿನಗಳಲ್ಲಿ ಬೆಂಗಳೂರನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ. ಮೆಟ್ರೋ 56 ಕಿಮೀ ಸಾಧನೆ ಮಾಡಿದೆ. 2024ಕ್ಕೆ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಮುಗಿಸಲು ಸೂಚಿಸಿದ್ದೇನೆ ಎಂದರು. ಇನ್ನು, ವಿಮಾನ ನಿಲ್ದಾಣವನ್ನು ಕೊಟ್ಟವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಬೆಂಗಳೂರಿಗೆ ಮೆಟ್ರೋ ಯೋಜನೆ ಕೊಟ್ಟವರು ಕೂಡ ವಾಜಪೇಯಿ. ಅಂದಿನ ನಿಯೋಗದಲ್ಲಿ ನಾನು ಹೋಗಿದ್ದೆ. ಮೋದಿಯವರು ಕೂಡ ಶೀಘ್ರವಾಗಿ ಮುಗಿಸಲು ಸೂಚಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಬೆಂಗಳೂರಿಗೆ ಕೆಲವೇ ದಿನಗಳಲ್ಲಿ ಅಮೃತ ನಗರೋತ್ಥಾನ ಯೋಜನೆ ಘೋಷಿಸುತ್ತೇನೆ ಎಂದು ಹೇಳಿದರು.