ಶಾಂತಿ ಭಂಗ, ಹಿಂಸಾಚಾರ ನಿಯಂತ್ರಣ; ಆರೋಪಿಗಳ ಗುರುತಿಸುವಿಕೆ ಮತ್ತಷ್ಟು ಬಿಗಿ

ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಆಯುಕ್ತ ಇದನ್ನು ಸಂಗ್ರಹಿಸಲು ಆದೇಶಿಸುವ ಅಧಿಕಾರ ನೀಡಲಾಗಿದೆ.‌

ಶಾಂತಿ ಭಂಗ, ಹಿಂಸಾಚಾರ ನಿಯಂತ್ರಣ; ಆರೋಪಿಗಳ ಗುರುತಿಸುವಿಕೆ ಮತ್ತಷ್ಟು ಬಿಗಿ
Linkup
ಬೆಂಗಳೂರು: ಶಾಂತಿ ಭಂಗ, ಮಾಡುವ ನಿಟ್ಟಿನಲ್ಲಿ ಅರೋಪಿಗಳ ಗುರುತಿಸುವಿಕೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಬಂದಿಗಳ ಗುರುತಿಸುವಿಕೆ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ತಿದ್ದುಪಡಿ ವಿಧೇಯಕದಲ್ಲಿ ಬಂದಿತ ಆರೋಪಿಗಳ ರಕ್ತದ ಮಾದರಿ, ಡಿಎನ್ ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನ್ ಮಾದರಿಯನ್ನು ಸಂಗ್ರಹಕ್ಕೆ ಅಧಿಕಾರ ನೀಡಲಾಗಿದೆ.‌ ಪ್ರಥಮ ದರ್ಜೆಯ ಮ್ಯಾಜಿಸ್ಟ್ರೇಟ್ ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಆಯುಕ್ತ ಇದನ್ನು ಸಂಗ್ರಹಿಸಲು ಆದೇಶಿಸುವ ಅಧಿಕಾರ ನೀಡಲಾಗಿದೆ.‌ ಹತ್ತು ವರ್ಷಗಳ ಬಳಿಕ ಸಂಗ್ರಹಿಸಿದ ದಾಖಲೆಗಳನ್ನು ನಾಶ ಮಾಡಲು ಆದೇಶ ನೀಡುವ ಅಧಿಕಾರವನ್ನು ಎಸ್ ಪಿ ಅಥವಾ ಪೊಲೀಸ್ ಆಯುಕ್ತರಿಗೆ ನೀಡಲಾಗಿದೆ. ಈ ಹಿಂದೆ ಪಾದದಚ್ಚು ಹಾಗೂ ಫಿಂಗರ್ ಫ್ರಿಂಟ್ ಸಂಗ್ರಹಕ್ಕೆ ಅವಕಾಶವಿತ್ತು.‌ ಆದರೆ ಇದೀಗ ತಿದ್ದುಪಡಿ ತರುವ ಮೂಲಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮತ್ತಷ್ಟು ಗುರುತುಗಳನ್ನು ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ.