ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ರಜನಿಕಾಂತ್ ಸಂತಾಪ; ಆಕ್ರೋಶ ಹೊರಹಾಕಿದ್ದೇಕೆ ನೆಟ್ಟಿಗರು?

'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ನಿಧನಕ್ಕೆ ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. ಆದರೆ ರಜನಿಕಾಂತ್ ಟ್ವೀಟ್ ನೋಡಿ ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಯಾಕೆ? ಏನಾಯ್ತು? ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ರಜನಿಕಾಂತ್ ಸಂತಾಪ; ಆಕ್ರೋಶ ಹೊರಹಾಕಿದ್ದೇಕೆ ನೆಟ್ಟಿಗರು?
Linkup
ನಟ ಅವರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರಜನಿಗೂ ಅನಾರೋಗ್ಯವಿದ್ದ ಕಾರಣ ಅಪ್ಪು ಸಾವಿನ ವಿಚಾರ ಅವರಿಗೆ ಬಹಳ ತಡವಾಗಿ ಗೊತ್ತಾಗಿದೆ. ಪುನೀತ್ ನಿಧನವಾಗಿ 12 ದಿನಗಳ ಬಳಿಕ ರಜನಿಕಾಂತ್ ಅಪ್ಪು ಬಗ್ಗೆ ಮಾತನಾಡಿದ್ದು, ಅದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪುನೀತ್‌ಗೆ ಸಂತಾಪ ಸೂಚಿಸಿದ ರಜನಿಕಾಂತ್ ಮಗಳ ಆಪ್‌ವೊಂದರಲ್ಲಿ ರಜನಿಕಾಂತ್ ಅವರು ಪುನೀತ್‌ಗೆ ಸಂತಾಪ ಸೂಚಿಸಿದ್ದಾರೆ. "ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಬೇಕು ಅಂತ ಒಪ್ಪಲಾಗದು" ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಆಪ್ ಮೂಲಕ ಸಂತಾಪ ಸೂಚಿಸಿದ್ದರು ಅನೇಕರಿಗೆ ಸಿಟ್ಟು ತರಿಸಿದೆ. ರಜನಿ ವಿರುದ್ಧ ಆಕ್ರೋಶ ಹೊರಹಾಕಿದ್ದೇಕೆ? ಇಂತಹ ಸಂದರ್ಭದಲ್ಲಿಯೂ ಆಪ್ ಪ್ರಮೋಶನ್‌ ಮಾಡಿರೋದು ಶಾಕಿಂಗ್ ಆಗುತ್ತಿದೆ. ನಿಮ್ಮ ಆಪ್‌ಗೂ ಸಂತಾಪಗಳು. ನಿಮ್ಮ ಟ್ವಿಟ್ಟರ್‌ನ್ನು ಯಾರು ಹ್ಯಾಂಡಲ್‌ ಮಾಡುತ್ತಾರೆ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಸೌಂದರ್ಯ ರಜನಿಕಾಂತ್ ಕೂಡ ಆಪ್ ಮೂಲಕ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ್ದರ ಬಗ್ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. "ಶಿವರಾಜ್‌ಕುಮಾರ್, ಪುನೀತ್‌ ರಾಜ್‌ಕುಮಾರ್ ( ) ಕುಟುಂಬದವರಿಗೆ ಸಾಂತ್ವನ ತಿಳಿಸಿ. ನೀವು ದೊಡ್ಮನೆ ಕುಟುಂಬದ ಬಗ್ಗೆ ಇಟ್ಟಿರುವ ಗೌರವದ ಬಗ್ಗೆ ಎಲ್ಲರಿಗೂ ತಿಳಿಸಿದೆ. ಆಪ್ ಬಗ್ಗೆ ಮಾತನಾಡುವವರಿಗೆ ನಿಮ್ಮ ಹಾಗೂ ಪುನೀತ್ ಕುಟುಂಬದ ಮಧ್ಯೆ ಇರುವ ಬಾಂಧವ್ಯ ಗೊತ್ತಿಲ್ಲ" ಎಂದು ಕೆಲವರು ರಜನಿ ಪರವಾಗಿಯೂ ಮಾತನಾಡಿದ್ದಾರೆ. ಡಾ ರಾಜ್‌ಕುಮಾರ್ ಹಾಗೂ ರಜನಿಕಾಂತ್ ನಡುವಿನ ಬಾಂಧವ್ಯ ತುಂಬ ಚೆನ್ನಾಗಿತ್ತು. ಚಿಕ್ಕ ವಯಸ್ಸಿನಿಂದಲೂ ಅಪ್ಪುರನ್ನು ರಜನಿಕಾಂತ್ ನೋಡಿಕೊಂಡು ಬಂದಿದ್ದಾರೆ. ಪುನೀತ್ ನಿಧನದ ಕೇಳಿ ರಜನಿಕಾಂತ್ ತುಂಬ ದುಃಖಪಟ್ಟರು ಎಂದು ಡಾ ಶಿವರಾಜ್‌ಕುಮಾರ್ ಅವರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. 'ಅಪ್ಪು' ಯಶಸ್ಸಿನ ಇವೆಂಟ್‌ನಲ್ಲಿ ರಜನಿ ಭಾಗಿ 'ಅಪ್ಪು' ಸಿನಿಮಾ 100 ದಿನಗಳ ಸಂಭ್ರಮ ಕಂಡಾಗ 2002ರಲ್ಲಿ ಆಯೋಜಿಸಿದ್ದ ಇವೆಂಟ್‌ನಲ್ಲಿ ರಜನಿಕಾಂತ್ ಅವರನ್ನು ಅತಿಥಿಯಾಗಿ ಕರೆಸಲಾಗಿತ್ತು. ಆ ಇವೆಂಟ್‌ನಲ್ಲಿ ಡಾ ರಾಜ್‌ಕುಮಾರ್ ಕೂಡ ಇದ್ದರು. ಆ ವೇಳೆ ಮಾತನಾಡಿದ್ದ "ಪುನೀತ್ ಜೊತೆ ಕೂತು 'ಅಪ್ಪು' ಸಿನಿಮಾ ನೋಡಿದೆ. ಆಗ ಇದು ಸಿಂಹದ ಮರಿ, ಘರ್ಜನೆ ಮಾಡ್ತಿದೆ, ಮುಂದೆ ಏನೇನು ಮಾಡತ್ತೋ ನೋಡಬೇಕು ಅಂತ ಖಂಡಿತ ನನಗೆ ಅನಿಸಿತು, ಸಿನಿಮಾದಲ್ಲಿ ಫೈಟ್, ಆ ಡ್ಯಾನ್ಸ್, ಎಕ್ಸ್‌ಪ್ರೆಶನ್ಸ್ ಎಲ್ಲವೂ ಸೂಪರ್. ಡಾ ರಾಜ್‌ಕುಮಾರ್ ಮಗ ಅಂತ ಎಲ್ಲರೂ ಸಿನಿಮಾ ನೋಡುತ್ತ ಕೂತುಕೊಳ್ಳಲ್ಲ, ಆ ಪ್ರತಿಭೆಗೆ ಚಪ್ಪಾಳೆ ಬಂದಿದೆ. ಪುನೀತ್ ಮೊದಲ ಸಿನಿಮಾದಲ್ಲಿ ಚೆನ್ನಾಗಿಯೇ ನಟಿಸಿದ್ದಾರೆ. ನಮಗೆ 70-80 ಸಿನಿಮಾದಲ್ಲಿ ನಟಿಸಿದ ನಂತರ ಪ್ರೌಢಿಮೆ ಬಂತು, ಆದರೆ ಅಪ್ಪುಗೆ ಮೊದಲ ಸಿನಿಮಾದಲ್ಲಿಯೇ ಆ ಪ್ರೌಢಿಮೆ ಬಂದಿದೆ. ಅಪ್ಪು ಪೆರ್ಫಾಮೆನ್ಸ್‌ ಕೇವಲ ಚೆನ್ನಾಗಿಲ್ಲ, ಅದು ಅಂತರಂಗದ ನಟನೆ" ಎಂದು ರಜನೀಕಾಂತ್ ಅವರು ಪುನೀತ್‌ರನ್ನು ಭರ್ಜರಿ ಹೊಗಳಿದ್ದರು.