ಕೋವಿಡ್‌ನಿಂದ ಬಳಲುತ್ತಿರುವ ಜೂ. ಎನ್‌ಟಿಆರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಚಿರಂಜೀವಿ!

ದಕ್ಷಿಣ ಭಾರತದ ಖ್ಯಾತ ನಟ ಜೂ. ಎನ್‌ಟಿಆರ್ ಅವರಿಗೆ ಕೊರೊನಾ ಪಾಸಿಟಿವ್ ಆಗಿರುವ ಈಚೆಗೆ ಬಹಿರಂಗಗೊಂಡಿತ್ತು. ಈ ಬಗ್ಗೆ ಟ್ವೀಟ್ ಮೂಲಕ ಅವರು ಮಾಹಿತಿ ನೀಡಿದ್ದರು. ಈಗ ಅವರ ಆರೋಗ್ಯ ಹೇಗಿದೆ? ಆ ಬಗ್ಗೆ ಮೆಗಾ ಸ್ಟಾರ್ ಚಿರಂಜೀವಿ ಮಾಹಿತಿ ನೀಡಿದ್ದಾರೆ.

ಕೋವಿಡ್‌ನಿಂದ ಬಳಲುತ್ತಿರುವ ಜೂ. ಎನ್‌ಟಿಆರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಚಿರಂಜೀವಿ!
Linkup
ಟಾಲಿವುಡ್‌ ನಟ ಜೂ. ಎನ್‌ಟಿಆರ್ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ವಿಚಾರವನ್ನು ಎನ್‌ಟಿಆರ್‌ ಎಲ್ಲರೊಂದಿಗೂ ಹಂಚಿಕೊಂಡಿದ್ದರು. ಸದ್ಯ ಅವರ ಆರೋಗ್ಯ ಬೇಗ ಸುಧಾರಿಸಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಇದೀಗ 'ಮೆಗಾ ಸ್ಟಾರ್‌' ಅವರು ಎನ್‌ಟಿಆರ್‌ಗೆ ಕಾಲ್ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೇಗ ಗುಣವಾಗುತ್ತಾರೆ! ಈ ಕುರಿತು ಟ್ವೀಟ್ ಮಾಡಿರುವ ಚಿರಂಜೀವಿ, 'ನಾನು ಫೋನ್‌ನಲ್ಲಿ ತಾರಕ್ (ಎನ್‌ಟಿಆರ್) ಜೊತೆಗೆ ಮಾತನಾಡಿದೆ. ಕ್ವಾರಂಟೈನ್‌ನಲ್ಲಿ ಅವರು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅವರು ಮತ್ತು ಅವರ ಕುಟುಂಬದವರು ಉತ್ತಮವಾಗಿದ್ದಾರೆ. ಜೂ. ಎನ್‌ಟಿಆರ್ ಎನರ್ಜಿ, ಉತ್ಸಾಹ ಕಂಡು ನನಗೆ ತುಂಬ ಸಂತೋಷವಾಯಿತು. ಅವರು ಬೇಗ ಗುಣವಾಗಲಿ ಎಂದು ಹಾರೈಸುತ್ತೇನೆ. ತಾರಕ್ ನಿಮಗೆ ಒಳ್ಳೆಯದಾಗಲಿ' ಎಂದು ಬರೆದುಕೊಂಡಿದ್ದಾರೆ. ಕೊರೊನಾ ಪಾಸಿಟಿವ್ ಆಗಿದ್ದರ ಬಗ್ಗೆ ಮಾಹಿತಿ ನೀಡಿದ್ದ ನಟ ಇನ್ನು ತಮಗೆ ಪಾಸಿಟಿವ್ ಆಗಿರುವ ಕುರಿತು ಎನ್‌ಟಿಆರ್ ಮಾಹಿತಿ ಹಂಚಿಕೊಂಡಿದ್ದರು. 'ನಾನು ಕೋವಿಡ್‌-19 ಪಾಸಿಟಿವ್ ಆಗಿದ್ದೇನೆ. ಯಾವುದೇ ಆತಂಕ ಬೇಡ, ನಾನು ಸಂಪೂರ್ಣವಾಗಿ ಆರಾಮಾಗಿದ್ದೇನೆ. ನಾನು ಮತ್ತು ನನ್ನ ಕುಟುಂಬ ಐಸೋಲೇಟ್ ಆಗಿದ್ದೇವೆ ಮತ್ತು ವೈದ್ಯರ ಮಾರ್ಗದರ್ಶನದಲ್ಲಿ ಎಲ್ಲ ರೀತಿಯ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ. ಕಳೆದ ಕೆಲ ದಿನಗಳಲ್ಲಿ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ. ಎಲ್ಲರೂ ಸುರಕ್ಷಿತವಾಗಿರಿ' ಎಂದು ಎನ್‌ಟಿಆರ್ ಹೇಳಿದ್ದರು. ತೆಲುಗಿನ ಅಲ್ಲು ಅರ್ಜುನ್‌, ರಾಮ್ ಚರಣ್, ವರುಣ್ ತೇಜ್, ನಾಗ ಬಾಬು, ಪವನ್‌ ಕಲ್ಯಾಣ್‌, ಪೂಜಾ ಹೆಗ್ಡೆ ಮುಂತಾದವರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ಇಂದು (ಮೇ 12) ನಟ ಅಲ್ಲು ಅರ್ಜುನ್ 15 ದಿನಗಳ ಕ್ವಾರಂಟೈನ್ ಮುಗಿಸಿ, ತಮ್ಮ ಕೊರೊನಾ ನೆಗೆಟಿವ್ ಬಂದ ಮೇಲೆ ಮನೆಗೆ ಹೋಗಿದ್ದಾರೆ. ಬಹಳ ಸಮಯದ ನಂತರ ಮಕ್ಕಳನ್ನು ನೋಡಿ, ಮುದ್ದಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.