'ಕೃಷ್ಣ ಟಾಕೀಸ್' ಮೂಲಕ ಹಾರರ್ ಥ್ರಿಲ್ಲರ್ ಕಥೆ ಹೇಳಲು ಹೊರಟ ಅಜಯ್ ರಾವ್, ಅಪೂರ್ವ!

ನಟ ಅಜಯ್ ರಾವ್ ಅವರು ಕೃಷ್ಣ ಹೆಸರಿನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ 'ಕೃಷ್ಣ ಟಾಕೀಸ್' ಸಿನಿಮಾ ಮೂಲಕ ರಿಲೀಸ್‌ಗೆ ರೆಡಿಯಾಗುತ್ತಿದೆ. ಈ ಚಿತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

'ಕೃಷ್ಣ ಟಾಕೀಸ್' ಮೂಲಕ ಹಾರರ್ ಥ್ರಿಲ್ಲರ್ ಕಥೆ ಹೇಳಲು ಹೊರಟ ಅಜಯ್ ರಾವ್, ಅಪೂರ್ವ!
Linkup
(ಶುಭಾ ವಿಕಾಸ್‌) ಹಾರರ್‌ ಥ್ರಿಲ್ಲರ್‌ ಸಿನಿಮಾ 'ಕೃಷ್ಣ ಟಾಕೀಸ್‌' ಬಿಡುಗಡೆಗೆ ಸಿದ್ಧವಾಗಿದ್ದು, ವಿಭಿನ್ನ ಕಥಾ ಹಂದರವಿರುವ ಈ ಚಿತ್ರದಲ್ಲಿ ನಾಯಕ ಅಜಯ್‌ ರಾವ್‌ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ ಗೌಡ. ನಗರದಿಂದ ಹಳ್ಳಿಗೆ ಬರುವ ಅಪೂರ್ವ ಬಬ್ಲಿ ಹುಡುಗಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಇದೆ ಎಂದಿದ್ದಾರೆ. ಕ್ಷಣಕ್ಷಣಕ್ಕೂ ತಿರುವು ಪಡೆಯುವ ಈ ಚಿತ್ರದ ಕಥೆ ಹಾಗೂ ತಮ್ಮ ನಟನೆ ಇನ್ನಷ್ಟು ಅವಕಾಶಗಳಿಗೆ ತಮ್ಮನ್ನು ತೆರೆದುಕೊಳ್ಳಲು ದಾರಿಯಾಗಲಿದೆ ಎಂದಿರುವ ಅಪೂರ್ವ ಈ ಸಿನಿಮಾ ಚಿತ್ರೀಕರಣದ ರೋಚಕ ಅನುಭವಗಳನ್ನು 'ಲವಲವಿಕೆ' ಜತೆ ಹಂಚಿಕೊಂಡಿದ್ದಾರೆ. 'ಈ ಸಿನಿಮಾದಲ್ಲಿ ನನ್ನದ್ದೊಂದು ಮಾತು ಹಲವು ತಿರುವುಗಳನ್ನು ಪಡೆಯಲು ಕಾರಣ ಆಗುತ್ತದೆ' ಎನ್ನುವ ಅವರು, 'ಇಡೀ ಸಿನಿಮಾದ ಚಿತ್ರೀಕರಣ ಸಂದರ್ಭವನ್ನು ನೆನೆದರೆ ಈಗಲೂ ಭೀತಿ ಹುಟ್ಟುತ್ತದೆ' ಎನ್ನುತ್ತಾರೆ. ಶೂಟಿಂಗ್‌ ಅನುಭವ ಭಯಂಕರ ಈ ಸಿನಿಮಾದ ಶೂಟಿಂಗ್‌ ಸಮಯದಲ್ಲಿಅಪೂರ್ವ ಸಿಕ್ಕಾಪಟ್ಟೆ ಭಯಗೊಂಡಿದ್ದರಂತೆ. 'ಮಧ್ಯರಾತ್ರಿ ಕಾಡಲೆಲ್ಲ ಶೂಟಿಂಗ್‌ ಮಾಡಬೇಕಿದ್ದರಿಂದ ಕತ್ತಲು ನನ್ನನ್ನು ಭಯಗೊಳಿಸುತ್ತಿತ್ತು. ಸಣ್ಣದೊಂದು ಸದ್ದು, ಯಾರದ್ದೋ ಮಾತು, ನಡುಗೆಯೆಲ್ಲವೂ ನಡುಕ ಹುಟ್ಟಿಸುತ್ತಿದ್ದವು. ಸಿನಿಮಾ ಮಂದಿರದಲ್ಲಿ ಶೂಟ್‌ ಮಾಡುವಾಗ ವಿಚಿತ್ರ ಅನುಭವ ಆಯ್ತು. ಶೂಟ್‌ ಮುಗಿಸಿ ಬರುವಾಗ ಯಾರೋ ಹಿಂದಿನಿಂದ ನನ್ನ ಬಟ್ಟೆಯನ್ನು ಹಿಡಿದು ಎಳೆದ ಅನುಭವ ಆಯ್ತು. ಆಗ ಬಂದ ಜ್ವರ ವಾಸಿಯಾಗಲು ಹೆಚ್ಚಿನ ಸಮಯ ತೆಗೆದುಕೊಂಡಿತು. ಇವತ್ತಿಗೂ ಆ ದಿನದ ಭಯ ನನ್ನನ್ನು ಬಿಟ್ಟು ಹೋಗಿಲ್ಲ. ಅಂತಹ ಹಲವು ಅನುಭವಗಳು ಈ ಚಿತ್ರದ ಶೂಟಿಂಗ್‌ ಸಮಯದಲ್ಲಿಆಗಿದೆ. ಒಂದು ರೀತಿಯ ಭಯ ನನ್ನೊಳಗೆ ಆವರಿಸಿಬಿಟ್ಟಿತ್ತು. ಧೈರ‍್ಯಕ್ಕೆ ಅಂತಲೇ ಮನೆಯವರನ್ನೆಲ್ಲ ಶೂಟಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದೆ. ಆದರೂ ಯಾವುದೋ ಒಂದು ಶಕ್ತಿ ನನ್ನನ್ನು ವಿಚಿತ್ರವಾಗಿ ಕಾಡಿದ ಅನುಭವ ಆಗಿದೆ' ಎನ್ನುತ್ತಾರೆ. ಈ ಸಿನಿಮಾ ಯಾಕೆ ನೋಡಬೇಕು ಎಂಬುದಕ್ಕೆ ಅಪೂರ್ವ ಹೇಳುವುದೇನು ಅಂದರೆ, 'ಹಾರರ್‌ ಥ್ರಿಲ್ಲರ್‌, ಸೆಂಟಿಮೆಂಟ್‌, ಆ್ಯಕ್ಷನ್‌ ಹೀಗೆ ಕಂಪ್ಲೀಟ್‌ ಪ್ಯಾಕೇಜ್‌ ಸಿನಿಮಾ ಇದು. ಸೋಶಿಯಲ್‌ ಮೀಡಿಯಾ ಬಳಕೆಗೆ ಸಂಬಂಧಿಸಿದಂತೆ ಯುವ ಜನತೆಗೆ ಉತ್ತಮ ಸಂದೇಶ ಕೂಡ ನೀಡಲಾಗಿದೆ. ಒಳ್ಳೆಯ ಹಾಡುಗಳು ಇದರಲ್ಲಿಇವೆ. ಅವೆಲ್ಲವನ್ನೂ ಮೀರಿ ಚಿತ್ರಮಂದಿರದಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಇರುವ ಈ ಸಮಯದಲ್ಲಿ ಸಿನಿಮಾ ನೋಡುವುದು ಪ್ರೇಕ್ಷಕರಿಗೆ ಸುರಕ್ಷೆ. ಈ ಮೂಲಕ ಯಾವುದೇ ಅಳುಕಿಲ್ಲದೆ ಚಿತ್ರಮಂದಿರಗಳಿಗೆ ಭೇಟಿ ನೀಡಿ ಸಿನಿಮಾ ನೋಡಿ ನಮ್ಮನ್ನು ಗೆಲ್ಲಿಸಿ' ಎಂದಿದ್ದಾರೆ. ಅಪೂರ್ವ ಅವರನ್ನು ಒಂದಾದ ಮೇಲೊಂದು ಸಿನಿಮಾ ಅವಕಾಶಗಳು ಅರಸಿ ಬರುತ್ತಿದ್ದು, ವಿಕ್ಕಿ ವರುಣ್‌ ಜತೆಯಾಗಿ 'ಕಾಲಾಪತ್ಥರ್‌' ಸಿನಿಮಾ ಒಪ್ಪಿಕೊಂಡಿದ್ದು, ಇನ್ನೂ ಕೆಲವು ಪ್ರಾಜೆಕ್ಟ್‌ಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. 'ಕೃಷ್ಣ ಟಾಕೀಸ್‌' ಇದೇ ಏ.16ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಈ ಸಿನಿಮಾದ ಹಾಡುಗಳಿಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ವಿಜಯ್‌ ಆನಂದ್‌ ನಿರ್ದೇಶನದ ಈ ಸಿನಿಮಾದಲ್ಲಿ ಚಿತ್ರದ ನಾಯಕ ಅಜಯ್‌ ರಾವ್‌ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ. ಸಿಂಧು ಲೋಕನಾಥ್‌, ಚಿಕ್ಕಣ್ಣ, ಪ್ರಮೋದ್‌ ಶೆಟ್ಟಿ, ಮಂಡ್ಯ ರಮೇಶ್‌ ಮೊದಲಾದವರು ಚಿತ್ರದಲ್ಲಿಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜನೆಯಿದೆ. ಅಭಿಷೇಕ್‌ ಜಿ.ಕಾಸರಗೋಡು ಛಾಯಾಗ್ರಹಣವಿದೆ. "ಡ್ರೀಮ್‌ ರೋಲ್‌ ಹಿಂದೆ ಬೀಳುವುದಿಲ್ಲ ನಾನು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ. ಈ ಮೂಲಕ ಯಾವುದೇ ಪಾತ್ರವಾದರೂ ಅದಕ್ಕೆ ನ್ಯಾಯ ಒದಗಿಸುವುದೇ ನನ್ನ ಗುರಿ" ಎಂದು ಹೇಳಿದ್ದಾರೆ ನಟಿ ಅಪೂರ್ವ ಗೌಡ