ಕ್ರಿಪ್ಟೋಕರೆನ್ಸಿ ಮೇಲೆ ಪೂರ್ಣ ನಿರ್ಬಂಧ ಹೇರಿದ ವಿಶ್ವದ 5 ರಾಷ್ಟ್ರಗಳಿವು!

ವಿಶ್ವಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಕ್ರಿಪ್ಟೋಕರೆನ್ಸಿ ಟ್ರೆಂಡ್‌. ಪ್ರತಿಯೊಬ್ಬರೂ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಬಯಸುತ್ತಿದ್ದಾರೆ. ಆದರೆ, ವಿಶ್ವದ ಐದು ದೇಶಗಳಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಕ್ರಿಪ್ಟೋಕರೆನ್ಸಿ ಮೇಲೆ ಪೂರ್ಣ ನಿರ್ಬಂಧ ಹೇರಿದ ವಿಶ್ವದ 5 ರಾಷ್ಟ್ರಗಳಿವು!
Linkup
ಹೊಸದಿಲ್ಲಿ: ವಿಶ್ವಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಟ್ರೆಂಡ್‌. ಪ್ರತಿಯೊಬ್ಬರೂ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಪಾಲ್ಗೊಂಡು, ದಿನನಿತ್ಯದ ಬೆಲೆ ಏರಿಳಿತದ ಆಟಕ್ಕೆ ಪ್ರವೇಶಿಸಲು ಬಯಸುತ್ತಾರೆ. ಪ್ರಸ್ತುತ ವಿಶ್ವದ ಅತಿ ದುಬಾರಿ ಎನಿಸಿರುವ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ 33 ಲಕ್ಷ ರೂ. (ಸುಮಾರು 43 ಸಾವಿರ ಡಾಲರ್) ಬೆಲೆಯಲ್ಲಿ ವಹಿವಾಟು ನಡೆಸುತ್ತಿದ್ದರೆ, ಎರಡನೇ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಇಥೆರಿಯಂ ಸುಮಾರು 2.3 ಲಕ್ಷ ರೂ. ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಗೆ ಅಧಿಕೃತವಾಗಿ ಮಾನ್ಯತೆ ನೀಡಿಲ್ಲವಾದರೂ, ಚಲಾವಣೆಯಲ್ಲಿರುವ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧ ಹೇರಿಲ್ಲ. ಆದರೆ, ಕೆಲವು ದೇಶಗಳು ಕ್ರಿಪ್ಟೋಕರೆನ್ಸಿ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿವೆ. ಈ ಡಿಜಿಟಲ್ ಟೋಕನ್‌ಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಂಡಿವೆ. ವಿಶ್ವದ ಐದು ದೇಶಗಳಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ. ಚೀನಾ ಡಿಜಿಟಲ್ ಕರೆನ್ಸಿಗಳ ಕುರಿತಂತೆ ಚೀನಾ ಕಠಿಣ ನಿಲುವು ತಾಳಿದ್ದು, ನಿರ್ಬಂಧ ವಿಧಿಸಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದ ಸರಕಾರವು ಡಿಜಿಟಲ್ ಟೋಕನ್ ಗಳನ್ನು ಭಾರೀ ಪ್ರಮಾಣದಲ್ಲಿ ಭೇದಿಸಿದೆ. ಪ್ರತಿ ವರ್ಷವೂ ಕ್ರಿಪ್ಟೋಕರೆನ್ಸಿಗಳ ವಿರುದ್ಧ ಧಮನಕಾರಿ ನೀತಿ ಕೈಗೊಳ್ಳುತ್ತಿದೆ. ಬಿಟ್‌ಕಾಯಿನ್ ನಂತಹ ಕ್ರಿಪ್ಟೋ ದೈತ್ಯನನ್ನು ನಿಯಂತ್ರಿಸುವ ಸಲುವಾಗಿ, ಚೀನಾ ತಮ್ಮದೇ ಕೇಂದ್ರೀಕೃತ ಡಿಜಿಟಲ್ ಕರೆನ್ಸಿಯನ್ನು (ಡಿಜಿಟಲ್ ರೆನ್‌ಮಿನ್‌ಬಿ -RMB) ಪರಿಚಯಿಸಿದೆ. ಬೊಲಿವಿಯಾ ಬೊಲಿವಿಯಾ ದೇಶ ಕ್ರಿಪ್ಟೋಕರೆನ್ಸಿಗಳ ಮೇಲೆ ಪೂರ್ಣ ನಿರ್ಬಂಧ ಹೇರಿದೆ. ಅದು ತನ್ನ ಆರ್ಥಿಕ ವ್ಯವಸ್ಥೆಯಲ್ಲಿ ನಿಯಂತ್ರಣಕ್ಕೆ ಒಳಪಡದ ಯಾವುದೇ ಕರೆನ್ಸಿಯನ್ನು ಬಿಟ್ಟುಕೊಳ್ಳುದಿಲ್ಲ ಎಂಬ ಕಠಿಣ ನಿಲುವು ತಾಳಿದೆ. ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ಒಂದಾದ ಬೊಲಿವಿಯಾ ಸರ್ಕಾರವು ವಿವಿಧ ಪೋಂಜಿ ಯೋಜನೆಗಳು ಮತ್ತು ಕ್ರಿಮಿನಲ್ ಚಟುವಟಿಕೆಗಳ ಸಾಧ್ಯತೆಗಳನ್ನು ಉಲ್ಲೇಖಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇಂಡೋನೇಷಿಯಾ ಸೆಂಟ್ರಲ್ ಬ್ಯಾಂಕ್ ಆಫ್ ಇಂಡೋನೇಷ್ಯಾ ಕ್ರಿಪ್ಟೋಕರೆನ್ಸಿಗಳ ಪ್ರಚಾರ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಿದೆ. 2018ರ ಜನವರಿ 1 ರಿಂದಲೇ ಡಿಜಿಟಲ್ ಟೋಕನ್‌ಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಟರ್ಕಿ ಯಾವುದೇ ಸರಕು ಅಥವಾ ಸೇವೆಗಳಿಗೆ ಕ್ರಿಪ್ಟೋಕರೆನ್ಸಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸುವುದನ್ನು ಕಾನೂನುಬಾಹಿರ ಎಂದು ಘೋಷಿಸುವ ಮೂಲಕ ಟರ್ಕಿಯ ಕೇಂದ್ರೀಯ ಬ್ಯಾಂಕ್ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ದೇಶದಲ್ಲಿ ಗರಿಷ್ಠ ಸಂಖ್ಯೆಯ ಕ್ರಿಪ್ಟೋಕರೆನ್ಸಿ ವಹಿವಾಟುಗಳನ್ನು ಕಂಡ ದೇಶಗಳಲ್ಲಿ ಟರ್ಕಿ ಕೂಡ ಒಂದು. ಕ್ರಿಪ್ಟೋಕರೆನ್ಸಿ ಕುರಿತ ಮಾರ್ಗಸೂಚಿಗಳಲ್ಲಿ ಮನಿ ಲಾಂಡರಿಂಗ್ ವಿರೋಧಿ ಮತ್ತು ಭಯೋತ್ಪಾದನೆ ಹಣಕಾಸು ಷರತ್ತುಗಳು ಕೂಡ ಸೇರಿವೆ. ಈಜಿಪ್ತ್‌ ಈಜಿಪ್ತ್ ಪ್ರಾಥಮಿಕ ಇಸ್ಲಾಮಿಕ್ ಸಲಹಾ ಸಂಸ್ಥೆ, ದಾರ್ ಅಲ್-ಎಲ್‌ಫ್ಟಾ (Dar al-lfta), ದೇಶವು ಯಾವುದೇ ಕ್ರಿಪ್ಟೋಕರೆನ್ಸಿ ವಹಿವಾಟನ್ನು ಶರಿಯಾ ಕಾನೂನಿನ ಅಡಿಯಲ್ಲಿ 'ಹರಾಮ್' ಎಂದು ಪರಿಗಣಿಸುತ್ತದೆ. ಇದನ್ನು ಇಸ್ಲಾಮಿಕ್ ಕಾನೂನಿನಡಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.