ಗಡುವು ಹತ್ತಿರದಲ್ಲಿದೆ, ಆದರೂ ಸ್ಮಾರ್ಟ್‌ ಸಿಟಿಯ ಶೇ.49 ಯೋಜನೆಗಳು ಅಪೂರ್ಣ!

​​2016ರಲ್ಲಿ ಆರಂಭವಾದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ 'ಸ್ಮಾರ್ಟ್‌ ಸಿಟಿ' ಯೋಜನೆಯ ಮೊದಲ ಹಂತದ ಗಡುವು 2021ರಲ್ಲಿ ಸಮೀಪಿಸುತ್ತಿದೆ. ಆದರೆ ಶೇಕಡಾ 49ರಷ್ಟು ಯೋಜನೆಗಳು ಇನ್ನೂ ಅಪೂರ್ಣವಾಗಿವೆ.

ಗಡುವು ಹತ್ತಿರದಲ್ಲಿದೆ, ಆದರೂ ಸ್ಮಾರ್ಟ್‌ ಸಿಟಿಯ ಶೇ.49 ಯೋಜನೆಗಳು ಅಪೂರ್ಣ!
Linkup
ಹೊಸದಿಲ್ಲಿ: ದೇಶದ ನಗರಗಳ ಮೂಲ ಸೌಕರ್ಯ ಮತ್ತು ಗುಣಮಟ್ಟ ಸುಧಾರಣೆಯ ಉದ್ದೇಶದಲ್ಲಿ ಜಾರಿಯಾಗಿರುವ ಯೋಜನೆಯಲ್ಲಿನ ಶೇ.49ಕ್ಕೂ ಹೆಚ್ಚು ಯೋಜನೆಗಳು ಅಪೂರ್ಣವಾಗಿವೆ. ಒಟ್ಟು 5,000ಕ್ಕೂ ಹೆಚ್ಚು ಯೋಜನೆಗಳು ಇದರಲ್ಲಿವೆ. 2016ರಲ್ಲಿ ಆರಂಭವಾದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ ಸಿಟಿ ಯೋಜನೆಯ ಮೊದಲ ಹಂತದ ಗಡುವು 2021ರಲ್ಲಿ ಸಮೀಪಿಸುತ್ತಿದ್ದು, ಶೇಕಡಾ 49ರಷ್ಟು ಯೋಜನೆಗಳು ಅಪೂರ್ಣವಾಗಿವೆ. ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ಸುಧಾರಣೆ, ವಾಯು ಮಾಲಿನ್ಯ ನಿಯಂತ್ರಣ ಇತ್ಯಾದಿ ಗುರಿಗಳನ್ನು ಹೊಂದಿದೆ. ಆದರೆ ಭಾರತದ ಮೆಟ್ರೊ ನಗರಗಳು ಮಾಲಿನ್ಯ, ನೀರಿನ ಕೊರತೆ, ಸಂಚಾರ ದಟ್ಟಣೆ, ಸಂಪನ್ಮೂಲ ಕೊರತೆಗಳಿಂದ ಇನ್ನೂ ಬಳಲುತ್ತಿವೆ. ಸ್ಮಾರ್ಟ್‌ ಸಿಟಿ ಯೋಜನೆಯ ಅಡಿಯಲ್ಲಿ 100 ನಗರಗಳನ್ನು ಅಭಿವೃದ್ಧಿಗೆ ಗುರುತಿಸಲಾಗಿತ್ತು. ಇದು ಭಾರತದ ಶೇ.21ರಷ್ಟು ನಗರ ಜನಸಂಖ್ಯೆಯನ್ನು ಹೊಂದಿದೆ. 33 ನಗರಗಳು ಯೋಜನೆಗಳನ್ನು ಪೂರ್ಣಗೊಳಿಸಿವೆ. ಆದರೆ ಉಳಿದೆಡೆ ಬಜೆಟ್‌ನ ಕೊರತೆ, ಆಡಳಿತಾತ್ಮಕ ಸಮಸ್ಯೆಗಳು ಯೋಜನೆಗಳನ್ನು ಮಂದಗತಿಯಲ್ಲಿರಿಸಿವೆ ಎಂದು ತಜ್ಞರು ಹೇಳಿದ್ದಾರೆ.