ಕೊರೊನಾ 2ನೇ ಅಲೆಯಿಂದಾಗಿ ನಟಿ ಸಾಯಿ ಪಲ್ಲವಿ ಅಭಿಮಾನಿಗಳಿ‌ಗೆ ಸಿಕ್ಕಿದೆ ಬ್ಯಾಡ್ ನ್ಯೂಸ್‌!

ಕೊರೊನಾ ಎರಡನೇ ಅಲೆ ಜೋರಾಗಿ ವ್ಯಾಪಿಸುತ್ತಿದ್ದು, ಜನಜೀವನ ಪುನಃ ಅಸ್ತವ್ಯಸ್ತವಾಗುವ ಸೂಚನೆ ಸಿಗುತ್ತಿದೆ. ಈ ಮಧ್ಯೆ ಕೊರೊನಾದಿಂದಾಗಿ ನಟಿ ಸಾಯಿ ಪಲ್ಲವಿ ಅಭಿಮಾನಿಗಳು ಬೇಸರವಾಗುವಂತಹ ಸುದ್ದಿಯೊಂದು ಹೊರಬಿದ್ದಿದೆ.

ಕೊರೊನಾ 2ನೇ ಅಲೆಯಿಂದಾಗಿ ನಟಿ ಸಾಯಿ ಪಲ್ಲವಿ ಅಭಿಮಾನಿಗಳಿ‌ಗೆ ಸಿಕ್ಕಿದೆ ಬ್ಯಾಡ್ ನ್ಯೂಸ್‌!
Linkup
ಕೊರೊನಾ ಎರಡನೇ ಅಲೆ ದೇಶಾದ್ಯಂತ ಜೋರಾಗಿ ಹಬ್ಬುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇಷ್ಟೊಂದು ವೇಗವಾಗಿ ಕೊರೊನಾ ಹಬ್ಬುತ್ತಿರುವುದರ ಮಧ್ಯೆ ನಟಿ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಸಿಕ್ಕಿದೆ. ಅದಕ್ಕೂ ಕೊರೊನಾ ಎರಡನೇ ಅಲೆಯೇ ಕಾರಣ! ಕೊರೊನಾದಿಂದಾಗಿ ಸಿನಿಮಾ ಪೋಸ್ಟ್‌ಪೋನ್ಸಾಯಿ ಪಲ್ಲವಿ ಅಭಿನಯದ ತೆಲುಗಿನ 'ವಿರಾಟ ಪರ್ವಂ' ಸಿನಿಮಾಗಾಗಿ ಅಭಿಮಾನಿಗಳು ಬಹಳ ಕಾತುರದಿಂದ ಕಾದಿದ್ದರು. ಈ ಸಿನಿಮಾದಲ್ಲಿ ಪಲ್ಲವಿ ಹಳ್ಳಿ ಹುಡುಗಿಯಾಗಿ, ತುಂಬ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ರಿಲೀಸ್ ಆಗಿರುವ ಪೋಸ್ಟರ್‌ಗಳು, ಅವರ ಫಸ್ಟ್ ಲುಕ್‌ಗಳು ಎಲ್ಲರ ಗಮನಸೆಳೆದಿದ್ದವು. 2018ರಲ್ಲಿ ತೆರೆಕಂಡ 'ಪದಿ ಪದಿ ಲೇಚೆ ಮನಸು' ನಂತರ ಅವರ ಯಾವ ತೆಲುಗು ಸಿನಿಮಾವೂ ತೆರೆಕಂಡಿಲ್ಲ. ಹಾಗಾಗಿ, 'ವಿರಾಟ ಪರ್ವಂ' ಮೇಲೆ ಅವರ ತೆಲುಗು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೀಗ ಆ ಸಿನಿಮಾವೇ ಪೋಸ್ಟ್‌ಪೋನ್ ಆಗಿದೆ. ಏಪ್ರಿಲ್‌ 30ಕ್ಕೆ ಬರುವುದಿಲ್ಲ 'ವಿರಾಟ ಪರ್ವಂ'!ಈ ಮೊದಲು ಚಿತ್ರತಂಡ ಏಪ್ರಿಲ್ 30ರಂದು ಸಿನಿಮಾವನ್ನು ತೆರೆಗೆ ತರುವುದಾಗಿ ಹೇಳಿಕೊಂಡಿತ್ತು. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಈಗ 2ನೇ ಅಲೆ ಜೋರಾಗಿರುವುದರಿಂದ, ಸರ್ಕಾರಗಳು ಯಾವಾಗ ಯಾವ ನಿರ್ಧಾರ ತೆಗೆದುಕೊಳ್ಳುತ್ತವೋ ಗೊತ್ತಿಲ್ಲ. ಸುಮ್ಮನೆ ರಿಸ್ಕ್ ಯಾಕೆ ಎಂದು ಚಿತ್ರತಂಡ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಿದೆ. 'ಹಬ್ಬುತ್ತಿರುವ ಕೊರೊನಾದಿಂದಾಗಿ ನಾವು ಸಿನಿಮಾವನ್ನು ಏಪ್ರಿಲ್ 30ರಂದು ರಿಲೀಸ್ ಮಾಡುತ್ತಿಲ್ಲ. ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಘೋ‍ಷಣೆ ಮಾಡಲಿದ್ದೇವೆ. ನೀವೆಲ್ಲರೂ ಸುರಕ್ಷಿತವಾಗಿ, ಎಚ್ಚರಿಕೆಯಿಂದಿರಿ' ಎಂದು ಚಿತ್ರತಂಡ ಹೇಳಿದೆ. 'ವಿರಾಟ ಪರ್ವಂ'ನಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರೆ, ಪ್ರಿಯಾಮಣಿ, ನಂದಿತಾ ದಾಸ್, ನಿವೇದಾ ಪೇತುರಾಜ್, ನವೀನ್ ಚಂದ್ರ, ಈಶ್ವರಿ ರಾವ್ ಮುಂತಾದವರು ನಟಿಸಿದ್ದಾರೆ. ನಕ್ಸಲಿಸಂ ಕುರಿತ ಕಥೆ ಈ ಸಿನಿಮಾದಲ್ಲಿದೆ ಎನ್ನಲಾಗಿದೆ. ವೇಣು ಉಡುಗಲ ಇದರ ನಿರ್ದೇಶಕರು. ಸುಧಾಕರ್ ಚೆರುಕುರಿ ಮತ್ತು ಡಿ. ಸುರೇಶ್ ಬಾಬು ಜಂಟಿಯಾಗಿ ಹಣ ಹಾಕಿದ್ದಾರೆ.