ನನ್ನ ಮದುವೆಗೆ ಯಾರೂ ಬರಲ್ಲ ಅಂತ ನನ್ನ ತಾಯಿ ಹೇಳಿದ್ರು: 'ಸ್ಯಾಂಡಲ್‌ವುಡ್ ಕ್ವೀನ್' ನಟಿ ರಮ್ಯಾ

ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ 1 ನಟಿಯಾಗಿದ್ದ 'ಸ್ಯಾಂಡಲ್‌ವುಡ್ ಕ್ವೀನ್' ರಮ್ಯಾ ಅವರು ಇನ್‌ಸ್ಟಾಗ್ರಾಮ್‌ ಲೈವ್ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ, ಅನೇಕ ವಿಷಯ ಹಂಚಿಕೊಂಡಿದ್ದಾರೆ.

ನನ್ನ ಮದುವೆಗೆ ಯಾರೂ ಬರಲ್ಲ ಅಂತ ನನ್ನ ತಾಯಿ ಹೇಳಿದ್ರು: 'ಸ್ಯಾಂಡಲ್‌ವುಡ್ ಕ್ವೀನ್' ನಟಿ ರಮ್ಯಾ
Linkup
ಸಿನಿಮಾ, ರಾಜಕಾರಣದಿಂದ ದೂರವಾಗಿರುವ 'ಸ್ಯಾಂಡಲ್‌ವುಡ್ ಕ್ವೀನ್' ನಟಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಪತ್ತೆ ಆಗ್ತಾರೆ. ಸಮಾಜದಲ್ಲಿ ನಡೆಯುವ ಘಟನೆ, ರಾಜಕಾರಣ ಬೆಳವಣಿಗೆ, ಸಿನಿಮಾ ಕುರಿತಂತೆ ಅವರು ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ವರ್ಷಗಳ ನಂತರ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಬಂದು ರಮ್ಯಾ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಇನ್‌ಸ್ಟಾಗ್ರಾಮ್ ಲೈವ್ ಬರುವೆ ಎಂದು ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು ಸಿಕ್ಕಾಪಟ್ಟೆ ಕುತೂಹಲದಿಂದಿದ್ದರು. ರಮ್ಯಾ ಇನ್‌ಸ್ಟಾ ಲೈವ್ ಬರೋದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಈ ವಿಚಾರ ರಮ್ಯಾ ಗಮನಕ್ಕೆ ಬಂದಾಗ ಅವರು ಜಾಸ್ತಿ ನಿರೀಕ್ಷೆ ಇಟ್ಟುಕೊಳ್ಳಬೇಡಿ, ಸಹಜವಾದ ಲೈವ್ ಎಂದು ತಿಳಿಸಿ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ಮಾಡಿದ್ದರು. ಸಂದರ್ಶಕರ ಪ್ರಶ್ನೆಗಳಿಗೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ರಮ್ಯಾ ಹೇಳಿದ್ದೇನು? ಇಲ್ಲಿದೆ ಮಾಹಿತಿ (ಸಿನಿಮಾಕ್ಕೆ ಮತ್ತೆ ಯಾವಾಗ ಮರಳುತ್ತೀರಿ ಎಂದು ಕೇಳಿದಾಗ ರಮ್ಯಾ ಅವರು ಸದ್ಯ ಇಲ್ಲ ಅಂತ ಹೇಳಿ ಸರಿಯಾಗಿ ಉತ್ತರ ನೀಡದೆ ಜಾರಿಕೊಂಡಿದ್ದಾರೆ. ಈಗ ಎಲ್ಲಿ ವಾಸವಾಗಿರೋದು ಅಂತ ಕೂಡ ರಮ್ಯಾ ರಿವೀಲ್ ಮಾಡಿಲ್ಲ) ನಿಮ್ಮ ಸೌಂದರ್ಯದ ಗುಟ್ಟೇನು? ನಾನು ಅಷ್ಟೊಂದು ಚೆನ್ನಾಗಿ ಇದೀನಿ ಅಂತ ಅಂದುಕೊಳ್ಳೋದಿಲ್ಲ. ನಾನು ಎವರೇಜ್ ಗರ್ಲ್. ಸಿನಿಮಾ ಮಾಡುವಾಗ ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿದ್ದೆ. ಆಗ ಡಯೆಟ್, ವ್ಯಾಯಾಮ ಮಾಡುತ್ತಿದ್ದೆ. ಈಗ ಮನಸ್ಸಿಗೆ ಬಂದಿದ್ದನ್ನೆಲ್ಲ ತಿನ್ನುತ್ತೇನೆ, ಆದಾಗ ವ್ಯಾಯಾಮ ಮಾಡುತ್ತೇನೆ. ಇಷ್ಟವಾದ ಆಹಾರ ಯಾವುದು? ಐಸ್‌ಕ್ರೀಂ, ಜೋಳದ ರೊಟ್ಟಿ-ಎಣ್ಣೆಗಾಯಿ, ಮಶ್ರೂಮ್, ಕೇಕ್, ರೆಡ್ ಸಿಗ್ನಲ್ ಜಂಪ್ ಮಾಡಿದ್ದೀರಾ? ಹೌದು ಯಾರ ಮದುವೆಗೆ ಹೋಗಿದ್ರಿ? ಏನು ಉಡುಗೊರೆ ಕೊಡುವಿರಿ? ನಾನು ಯಾರ ಮದುವೆಗೂ ಹೋಗಲ್ಲ, ಅದಕ್ಕೆ ನನ್ನ ತಾಯಿ ನಿನ್ನ ಮದುವೆಗೂ ಯಾರೂ ಬರಲ್ಲ ಅಂತ ಹೇಳ್ತಿದ್ರು. ನಾನು ವಾವ್ ಅಂತಿದ್ದೆ, ಸ್ನೇಹಿತರ ಹುಟ್ಟುಹಬ್ಬಕ್ಕೆ ನಾನು ಹೂವು ಕಳಿಸುವೆ. ಲಾಕ್‌ಡೌನ್‌ನಲ್ಲಿ ಚೌಕಾಶಿ ಮಾಡಿಕೊಳ್ಳೋದು ಮಿಸ್ ಮಾಡಿಕೊಳ್ತೀರಾ? ಇಲ್ಲ, ಆದರೆ ಈಗ ಎಲ್ಲರಿಗೂ ಕಷ್ಟ ಇರೋದರಿಂದ ನಾನು ಅನೇಕರಿಗೆ ಹೆಚ್ಚು ಹಣ ನೀಡುವೆ. ನಿಮಗೆ ಸಾಧ್ಯ ಆದರೆ ಹಣ ನೀಡಿ. ಡವ್ ಮತ್ತು ಲವ್‌ಗೆ ಏನು ವ್ಯತ್ಯಾಸ? ಡವ್ ಅಂದರೆ ಡವ್‌ ಹೊಡೆಯುತ್ತಾರೆ. ಆದರೆ ಲವ್‌ನಲ್ಲಿ ಪ್ರಿಯಕರ ಆಗಿ ಗಂಡ ಆಗ್ತಾರೆ. ಮುಂದಿನ ವರ್ಷದ ಬರ್ತಡೇ ಪ್ಲ್ಯಾನ್ ಏನು? 39ನೇ ವಯಸ್ಸಿಗೆ ಏನು ಮಾಡೋದು? ಏನೂ ಇಲ್ಲ. ಕೇಕ್ ತಿನ್ನಬಹುದು. ನಿಮ್ಮ ಫೇವರಿಟ್ ನಟಿ ಯಾರು? ಎಲ್ಲರೂ ತುಂಬ ಚೆನ್ನಾಗಿ ಕಾಣುತ್ತಾರೆ. ಅಷ್ಟಾಗಿ ಸಿನಿಮಾ ನೋಡಿಲ್ಲ, ಹಾಡು ನೋಡಿದ್ದೇನೆ ಅಷ್ಟೇ... ಬೆಂಗಳೂರಿನಲ್ಲಿ ಫೇವರಿಟ್ ಬಡಾವಣೆ ಯಾವುದು? ಬಸವನಗುಡಿ, ಗಾಂಧಿನಗರ ಫೇವರಿಟ್ ಕ್ರಿಕೆಟರ್ ಯಾರು? ರಾಹುಲ್ ದ್ರಾವಿಡ್