ನಟಿ ಸಮಂತಾ ಬಗ್ಗೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಒಂದೆರಡಲ್ಲ. ಅದರಲ್ಲೂ ‘’ನಟಿ ಸಮಂತಾ ಮತ್ತು ಪತಿ ಮಧ್ಯೆ ಎಲ್ಲವೂ ಸರಿಯಿಲ್ಲ’’ ಎಂಬ ಗುಸುಗುಸು ಕಾಡ್ಗಿಚ್ಚಿನಂತೆ ಹಬ್ಬಿದೆ. ‘’ಸಮಂತಾ, ನಾಗ ಚೈತನ್ಯ ಸಂಸಾರ ಸರಿಗಮ ತಾಳ ತಪ್ಪಿದೆ, ಇಬ್ಬರೂ ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರಂತೆ’’ ಎಂಬ ಅಂತೆ-ಕಂತೆ ತೆಲುಗು ಸಿನಿ ಅಂಗಳದ ತುಂಬೆಲ್ಲಾ ರೆಕ್ಕೆ-ಪುಕ್ಕ ಕಟ್ಟಿಕೊಂಡು ಹಾರಾಡುತ್ತಿದೆ.
ಅಷ್ಟಕ್ಕೂ, ಈ ಗಾಸಿಪ್ ಶುರುವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನಲ್ಲಿ ಸಮಂತಾ ಮಾಡಿದ ಬದಲಾವಣೆಯಿಂದ. ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ‘’ ಅಂತಿದ್ದ ಹೆಸರಿಗೆ ಸಮಂತಾ ಕತ್ತರಿ ಪ್ರಯೋಗ ಮಾಡಿಬಿಟ್ಟರು. ‘ಸಮಂತಾ ಅಕ್ಕಿನೇನಿ’ ಅಂತ ಇದ್ದ ಹೆಸರನ್ನು ತೆಗೆದು ಬರೀ ‘ಎಸ್’ ಅಂತ ಹಾಕಿಕೊಂಡುಬಿಟ್ಟರು. ಏಕಾಏಕಿ ‘ಅಕ್ಕಿನೇನಿ’ ಹೆಸರನ್ನು ಕೈಬಿಟ್ಟಿದ್ದಕ್ಕೆ ನೂರೆಂಟು ಗುಸುಗುಸು ಆರಂಭವಾಯಿತು. ‘’ಸಮಂತಾ ಮತ್ತು ನಾಗ ಚೈತನ್ಯ ಮಧ್ಯೆ ಬಿರುಕು ಮೂಡಿದೆ.. ಇದೇ ಕಾರಣಕ್ಕೆ ‘ಅಕ್ಕಿನೇನಿ’ ಹೆಸರನ್ನು ತೆಗೆದು ಹಾಕಿದ್ದಾರೆ’’ ಎಂಬ ಮಾತುಗಳು ಕೇಳಲಾರಂಭಿಸಿದವು.
ಸ್ಪಷ್ಟನೆ ಕೊಡದ ಸಮಂತಾ
ದಿಢೀರ್ ಅಂತ 'ಸಮಂತಾ ಅಕ್ಕಿನೇನಿ' ಹೆಸರನ್ನು ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳಿಂದ ಸಮಂತಾ ತೆಗೆದಿದ್ದು ಯಾಕೆ ಎಂಬುದಕ್ಕೆ ಸಮಂತಾ ಸ್ಪಷ್ಟನೆ ಕೊಡಲಿಲ್ಲ. ಆದರೆ, ''ಯಾವುದೇ ವಿವಾದ ಅಥವಾ ಟ್ರೋಲ್‌ಗಳಿಗೆ ನನಗೆ ಪ್ರತಿಕ್ರಿಯಿಸಬೇಕು ಎನಿಸಿದರೆ ಮಾತ್ರ ನಾನು ಪ್ರತಿಕ್ರಿಯೆ ಕೊಡುತ್ತೇನೆ. ಯಾರೋ ಪ್ರತಿಕ್ರಿಯೆ ನೀಡಿ ಎಂದ ಮಾತ್ರಕ್ಕೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲ್ಲ. ಇಂತಹ ವಿಚಾರಗಳನ್ನು ಚರ್ಚಿಸುವುದು ನನಗೆ ಇಷ್ಟವಿಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ಹೇಗೆ ಹೇಳುವುದಕ್ಕೆ ಹಕ್ಕು ಇದೆಯೋ, ಹಾಗೇ ನನಗೂ ಹಕ್ಕು ಇದೆ'' ಎಂದು ಸಂದರ್ಶನವೊಂದರಲ್ಲಿ ನಟಿ ಸಮಂತಾ ಹೇಳಿದ್ದರು.
ಸಮಂತಾ ಸ್ಪಷ್ಟನೆ ಕೊಡದ ಕಾರಣ ಧಗಧಗ ಉರಿಯುತ್ತಿದ್ದ ಗಾಸಿಪ್‌ಗೆ ಹೆಚ್ಚು ತುಪ್ಪ ಸುರಿದಂಗಾಯ್ತು. ಇನ್ನೂ ನಾಗಾರ್ಜುನ ಹುಟ್ಟುಹಬ್ಬದ ಆಚರಣೆಯಲ್ಲೂ ಸಮಂತಾ ಪಾಲ್ಗೊಳ್ಳಲಿಲ್ಲ. ಇದೂ ಕೂಡ ಊಹಾಪೋಹಕ್ಕೆ ಕಾರಣವಾಗಿತ್ತು. ಇದೀಗ ಎಲ್ಲಾ ಅಂತೆಕಂತೆಗಳಿಗೆ ಬ್ರೇಕ್ ಹಾಕಲು ಸಮಂತಾ ಮತ್ತು ನಾಗ ಚೈತನ್ಯ ಮುಂದಾದ್ರಾ?
‘ಲವ್ ಸ್ಟೋರಿ’
ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ‘ಲವ್ ಸ್ಟೋರಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ಲವ್ ಸ್ಟೋರಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಈ ಬಗ್ಗೆ ನಾಗ ಚೈತನ್ಯ ಟ್ವೀಟ್ ಮಾಡಿದ್ದರು. ಪತಿ ನಾಗ ಚೈತನ್ಯ ಮಾಡಿದ್ದ ಟ್ವೀಟ್‌ಅನ್ನು ಸಮಂತಾ ರೀ-ಟ್ವೀಟ್ ಮಾಡಿದ್ದಾರೆ. ಜೊತೆಗೆ ‘’ವಿನ್ನರ್.. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್’’ ಎಂದು ಸಮಂತಾ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗೇ, ತಮ್ಮ ಟ್ವೀಟ್‌ನಲ್ಲಿ ನಟಿ ಸಾಯಿ ಪಲ್ಲವಿ ಅವರ ಹ್ಯಾಂಡಲ್ ಹಾಕಿದ್ದಾರೆ.
ನಟಿ ಸಮಂತಾ ಮಾಡಿರುವ ಈ ಟ್ವೀಟ್‌ಗೆ ನಾಗ ಚೈತನ್ಯ ಪ್ರತಿಕ್ರಿಯೆ ನೀಡಿದ್ದಾರೆ. ‘’ಥ್ಯಾಂಕ್ಸ್ ಸ್ಯಾಮ್’’ ಎಂದು ನಾಗ ಚೈತನ್ಯ ರಿಪ್ಲೈ ಮಾಡಿದ್ದಾರೆ. ಅಲ್ಲಿಗೆ, ಸಮಂತಾ ಮತ್ತು ನಾಗ ಚೈತನ್ಯ ಒಂದಾಗಿದ್ದಾರೆ ಅಂತ ಕಟ್ಟಾ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.
ಆದರೂ ಹುಳುಕು ಹುಡುಕುತ್ತಿದ್ದಾರೆ ನೆಟ್ಟಿಗರು!
‘’ನಟಿ ಸಮಂತಾ ಮಾಡಿರುವ ಟ್ವೀಟ್‌ನಲ್ಲಿ ನಾಗ ಚೈತನ್ಯ ಹ್ಯಾಂಡಲ್ ಹಾಕಿಲ್ಲ. ಸಮಂತಾಗೆ ನೀಡಿದ ತಮ್ಮ ರಿಪ್ಲೈನಲ್ಲಿ ನಾಗ ಚೈತನ್ಯ ‘ಹಾರ್ಟ್ ಇಮೋಜಿ’ ಬಳಸಿಲ್ಲ’’ ಅಂತೆಲ್ಲಾ ಕೆಲ ನೆಟ್ಟಿಗರು ಹುಳುಕು ಹುಡುಕುತ್ತಿದ್ದಾರೆ.
ನಾಗ ಚೈತನ್ಯ ಮತ್ತು ಸಮಂತಾ ಬಗ್ಗೆ ಗಾಸಿಪ್ ಏನೇ ಇರಬಹುದು.. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಹೆಸರಿಗೆ ಸಮಂತಾ ಕತ್ತರಿ ಹಾಕಿರಬಹುದು. ಆದರೆ, ಫೇಸ್‌ಬುಕ್‌ನಲ್ಲಿ ಮಾತ್ರ ಆಕೆಯ ಹೆಸರು ಇನ್ನೂ ‘ಸಮಂತಾ ಅಕ್ಕಿನೇನಿ’ ಅಂತಲೇ ಇದೆ. ನಾಗಾರ್ಜುನ ಬರ್ತಡೇ ಸೆಲೆಬ್ರೇಷನ್‌ನಲ್ಲಿ ಸಮಂತಾ ಕಾಣಿಸಿಕೊಳ್ಳದೇ ಇರಬಹುದು. ಆದರೆ, ಟ್ವಿಟ್ಟರ್‌ನಲ್ಲಿ ಮಾವ ನಾಗಾರ್ಜುನಗೆ ಸಮಂತಾ ಮನತುಂಬಿ ಶುಭ ಹಾರೈಸಿದ್ದು ಸುಳ್ಳಲ್ಲ. ಇದೀಗ ಪತಿಯ ಚಿತ್ರಕ್ಕೂ ಸಮಂತಾ ವಿಶ್ ಮಾಡಿದ್ದಾರೆ. ಪತ್ನಿ ‘ಸ್ಯಾಮ್’ಗೆ ನಾಗ ಚೈತನ್ಯ ಥ್ಯಾಂಕ್ಸ್ ಹೇಳಿದ್ದಾರೆ. ಈಗಾಲಾದರೂ ಗಾಸಿಪ್ ಪಂಡಿತರ ಬಾಯಿಗೆ ಬೀಗ ಬೀಳಬಹುದಾ?