ಮಾಲಿವುಡ್‌ನ ಹ್ಯಾಂಡ್ಸಮ್ ವಿಲನ್ ರಿಜಬಾವ ವಿಧಿವಶ: ಕಂಬನಿ ಮಿಡಿದ ತಾರೆಯರು

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ರಿಜಬಾವ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ರಿಜಬಾವ ಸೋಮವಾರ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಮಾಲಿವುಡ್‌ನ ಹ್ಯಾಂಡ್ಸಮ್ ವಿಲನ್ ರಿಜಬಾವ ವಿಧಿವಶ: ಕಂಬನಿ ಮಿಡಿದ ತಾರೆಯರು
Linkup
ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ರಿಜಬಾವ ಸೋಮವಾರ (ಸೆಪ್ಟೆಂಬರ್ 13) ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ನಟ ರಿಜಬಾವ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ನಟ ರಿಜಬಾವ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ ಅವರಿಗೆ ಸ್ಟ್ರೋಕ್ ಉಂಟಾಗಿತ್ತು ಎಂದು ಇಂಡಸ್ಟ್ರಿಯ ಮೂಲಗಳು ತಿಳಿಸಿವೆ. ಸ್ಟ್ರೋಕ್ ಉಂಟಾದ ಬಳಿಕ ನಟ ರಿಜಬಾವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಿಜಬಾವ ಕೊನೆಯುಸಿರೆಳೆದಿದ್ದಾರೆ. 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟ ರಿಜಬಾವ ಮಲಯಾಳಂ ಚಿತ್ರರಂಗದಲ್ಲಿ ರಿಜಬಾವ ಸ್ಟೈಲಿಶ್ ವಿಲನ್ ಅಂತಲೇ ಖ್ಯಾತಿ ಗಳಿಸಿದವರು. ರಂಗಭೂಮಿಯಲ್ಲಿ ಪಳಗಿದ್ದ ರಿಜಬಾವ ‌ಗೆ ಪದಾರ್ಪಣೆ ಮಾಡಿದ್ದು ‘ಡಾ.ಪಶುಪತಿ’ ಚಿತ್ರದ ಮೂಲಕ. ಚೊಚ್ಚಲ ಚಿತ್ರದಲ್ಲೇ ರಿಜಬಾವ ಹೀರೋ ಆಗಿ ಅಭಿನಯಿಸಿದ್ದರು. ಆದರೆ, ರಿಜಬಾವಗೆ ಖ್ಯಾತಿ ತಂದುಕೊಟ್ಟಿದ್ದು ‘ಇನ್ ಹರಿಹರ್ ನಗರ್’ ಸಿನಿಮಾ. ಈ ಸಿನಿಮಾದಲ್ಲಿ ಖಳನಾಯಕನಾಗಿ ‘ಜಾನ್ ಹೊನೈ’ ಪಾತ್ರಕ್ಕೆ ರಿಜಬಾವ ಜೀವ ತುಂಬಿದ್ದರು. ‘ಜಾನ್ ಹೊನೈ’ ಪಾತ್ರದಿಂದ ರಿಜಬಾವ ರಾತ್ರೋ ರಾತ್ರಿ ಸ್ಟಾರ್ ಆಗ್ಬಿಟ್ಟರು. ರಿಜಬಾವ ಮಾಲಿವುಡ್‌ನಲ್ಲಿ ಬಹುಬೇಡಿಕೆಯ ಖಳನಾಯಕನಾದರು. ಅನೇಕ ಸಿನಿಮಾಗಳಲ್ಲಿ ಖಳನಟನಾಗಿಯೇ ರಿಜಬಾವ ಮಿಂಚಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 120ಕ್ಕೂ ಅಧಿಕ ಸಿನಿಮಾಗಳಲ್ಲಿ ರಿಜಬಾವ ನಟಿಸಿದ್ದಾರೆ. ಬಹುಬೇಡಿಕೆಯ ಖಳನಟನಾಗಿದ್ದ ರಿಜಬಾವ ‘ಇನ್ ಹರಿಹರ್ ನಗರ್’ ಚಿತ್ರದ ಬಳಿಕ ಬಹು ಬೇಡಿಕೆ ಕಂಡುಕೊಂಡ ರಿಜಬಾವ ‘ಜಾರ್ಜ್ ಕುಟ್ಟಿ ಕೇರ್‌ಆಫ್ ಜಾರ್ಜ್ ಕುಟ್ಟಿ’, ‘ಭೂಮಿಕಾ’, ‘ಫಸ್ಟ್ ಬೆಲ್’, ‘ಅಪರ್ಣಾ’, ‘ಸರೋವರಂ’, ‘ವಕೀಲ್ ವಾಸುದೇವ್’, ‘ತಾಕ್ಷಶೀಲ’, ‘ಮಾಣಿಕ್ಯನ್’, ‘ಹೈಜಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಕಣ್ಣೂರ್’, ‘ಮಾನಸಂ’, ‘ದಿ ಗ್ಯಾಂಗ್’, ‘ದಿ ಗಾಡ್ ಮ್ಯಾನ್’, ‘ಸಮ್ಮರ್ ಪ್ಯಾಲೇಸ್’, ‘ಲೈಫ್ ಈಸ್ ಬ್ಯೂಟಿಫುಲ್’, ‘ಕವರ್ ಸ್ಟೋರಿ’, ‘ಹೈ ವೇ ಪೊಲೀಸ್’, ‘ರೋಮಿಯೋ’, ‘ಪರದೇಸಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಲಯಾಳಂನ ಕೆಲವು ಸೀರಿಯಲ್‌ಗಳಲ್ಲೂ ರಿಜಬಾವ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ, ನಟ ರಿಜಬಾವ ಉತ್ತಮ ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ‘ಕರ್ಮಯೋಗಿ’ ಚಿತ್ರಕ್ಕಾಗಿ 2010ರಲ್ಲಿ ‘ಅತ್ಯುತ್ತಮ ಡಬ್ಬಿಂಗ್ ಆರ್ಟಿಸ್ಟ್’ ಕೇರಳ ರಾಜ್ಯ ಪ್ರಶಸ್ತಿಯನ್ನು ರಿಜಬಾವ ಸ್ವೀಕರಿಸಿದ್ದರು. ಕಂಬನಿ ಮಿಡಿದ ಮಾಲಿವುಡ್ ‘’ಯಾವುದೇ ಪಾತ್ರ ಕೊಟ್ಟರೂ, ಅದನ್ನ ರಿಜಬಾವ ಸ್ಮರಣೀಯವಾಗಿಸಿರುತ್ತಿದ್ದರು. ರಿಜಬಾವ ಕುಟುಂಬಕ್ಕೆ ನನ್ನ ಸಂತಾಪಗಳು’’ ಎಂದು ದುಲ್ಖರ್ ಸಲ್ಮಾನ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘’ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ನಟ ಪೃಥ್ವಿರಾಜ್ ಸುಕುಮಾರನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘’ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಅಜಯ್ ವಾಸುದೇವ್, ಉನ್ನಿ ಮುಕುಂದನ್, ರಿಮಿ ಟೋಮಿ, ಅಜು ವರ್ಗೀಸ್ ಮುಂತಾದ ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಕಂಬನಿ ಮಿಡಿದಿದ್ದಾರೆ.