ಆಂಟಿಗುವಾದಿಂದ ಪಲಾಯನ ಮಾಡಿದ್ದ ಮೆಹುಲ್‌ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ

62 ವರ್ಷದ ಮೆಹುಲ್‌ ಚೋಕ್ಸಿ ಈ ವಾರದ ಆರಂಭದಲ್ಲಿ ಕೆರಿಬಿಯನ್‌ ದ್ವೀಪರಾಷ್ಟ್ರ ಆಂಟಿಗುವಾ ಮತ್ತು ಬರ್ಮುಡಾದಿಂದ ತಲೆಮರೆಸಿಕೊಂಡಿದ್ದರು. ಅವರು ಕ್ಯೂಬಾಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿತ್ತು.

ಆಂಟಿಗುವಾದಿಂದ ಪಲಾಯನ ಮಾಡಿದ್ದ ಮೆಹುಲ್‌ ಚೋಕ್ಸಿ ಡೊಮಿನಿಕಾದಲ್ಲಿ ಬಂಧನ
Linkup
ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 14,000 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ದೇಶಕ್ಕೆ ಬೇಕಾಗಿರುವ ಪ್ರಮುಖ ಆರೋಪಿ, ವಜ್ರೋದ್ಯಮಿ ಮೆಹುಲ್‌ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಲಾಗಿದೆ. ಕ್ಯೂಬಾಗೆ ಬೋಟ್‌ನಲ್ಲಿ ಪಲಾಯನ ಮಾಡಲು ಯತ್ನಿಸುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. 62 ವರ್ಷದ ಈ ವಾರದ ಆರಂಭದಲ್ಲಿ ಕೆರಿಬಿಯನ್‌ ದ್ವೀಪರಾಷ್ಟ್ರ ಆಂಟಿಗುವಾ ಮತ್ತು ಬರ್ಮುಡಾದಿಂದ ತಲೆಮರೆಸಿಕೊಂಡಿದ್ದರು. ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಮತ್ತು ಜಾರಿ ನಿರ್ದೇಶನಾಲಯ ಪ್ರಯತ್ನ ಜಾರಿಯಲ್ಲಿ ಇಟ್ಟಿರುವಾಗಲೇ ಈ ಬೆಳವಣಿಗೆ ನಡೆದಿತ್ತು. ಮೂಲಗಳ ಪ್ರಕಾರ ಮೆಹುಲ್‌ ಚೋಕ್ಸಿ ಬೋಟ್‌ ಮುಖಾಂತರ ಕೆರಿಬಿಯನ್‌ ದ್ವೀಪರಾಷ್ಟ್ರ ಡೊಮಿನಿಕಾ ತಲುಪಿದ್ದರು. ಅವರ ವಿರುದ್ಧ ಲುಕ್‌ಔಟ್‌ ನೊಟಿಸ್‌ ಹೊರಡಿಸಿದ್ದರಿಂದ ಸ್ಥಳೀಯ ಪೊಲೀಸರು ಬಂಧಿಸಿ, ಕಸ್ಟಡಿಗೆ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಆಂಟಿಗುವಾಕ್ಕೆ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಮತ್ತು ಬಂಧಿತರಾಗಿರುವ ವಿಚಾರವನ್ನು ಸಿಬಿಐ ಹಾಗೂ ಇ.ಡಿಗೆ ತಿಳಿಸಲಾಗಿದೆ. ಈ ಪಲಾಯಾನ ಯತ್ನದಿಂದಾಗಿ, ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿ ಆಂಟಿಗುವಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೆಚ್ಚಿನ ಬಲ ಬಂದಿದೆ ಎಂದು ಸಿಬಿಐ ಮೂಲಗಳು ಹೇಳಿವೆ. ಜತೆಗೆ ಶೀಘ್ರದಲ್ಲಿ ಚೋಕ್ಸಿ ಭಾರತಕ್ಕೆ ಬರಲಿದ್ದಾರೆ ಎಂದು ತನಿಖಾ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.