ಬ್ಯಾಡಗಿ ಮಾರುಕಟ್ಟೆ ಮತ್ತೆ ಒಪನ್, ಮೊದಲ ದಿನವೇ 31 ಸಾವಿರ ಮೆಣಸಿನಕಾಯಿ ಚೀಲ ಆವಕ
ಬ್ಯಾಡಗಿ ಮಾರುಕಟ್ಟೆ ಮತ್ತೆ ಒಪನ್, ಮೊದಲ ದಿನವೇ 31 ಸಾವಿರ ಮೆಣಸಿನಕಾಯಿ ಚೀಲ ಆವಕ
ಅನ್‌ಲಾಕ್ ಹಿನ್ನೆಲೆಯಲ್ಲಿ ಮತ್ತೆ ವ್ಯಾಪಾರ ವಹಿವಾಟು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆರಂಭವಾಗಿದ್ದು, ಸೋಮವಾರ ಮೊದಲ ದಿನವೇ ಒಟ್ಟು 31,203 ಮೆಣಸಿನಕಾಯಿ ಚೀಲಗಳು ಆವಕವಾಗಿವೆ.
(): ಅನ್‌ಲಾಕ್ ಹಿನ್ನೆಲೆಯಲ್ಲಿ ಬ್ಯಾಡಗಿ ಮಾರುಕಟ್ಟೆ ಮತ್ತೆ ವ್ಯಾಪಾರ ವಹಿವಾಟು ಆರಂಭಿಸಿದ್ದು, ಸೋಮವಾರ ಒಟ್ಟು 31,203 ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಆವಕವಾಗಿವೆ. ಈ ಮೂಲಕ ಮೊದಲ ದಿನವೇ ಬೆಳೆಗಾರರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಸಕ್ತ ವರ್ಷ ಮೆಣಸಿನಕಾಯಿಗೆ ದಾಖಲೆ ದರ ನೀಡಿದ ಬ್ಯಾಡಗಿ ಮಾರುಕಟ್ಟೆ, ಕೃಷಿ ಕಾಯಿದೆಗಳ ತಿದ್ದುಪಡಿ ಹೊರತಾಗಿಯೂ ಸಾವಿರಾರು ಕೋಟಿ ರೂ. ವ್ಯಾಪಾರ ವಹಿವಾಟು ನಡೆಸಿ ದೇಶದ ಗಮನ ಸೆಳೆದಿದೆ.
ಆದರೆ ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳನ್ನು ಕಳೆದ ಕೆಲವು ದಿನಗಳಿಂದ ಬಂದ್ ಮಾಡಲಾಗಿತ್ತು. ಇದೀಗ ಸಂಜೆ 5 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿದ್ದು, ಸೋಮವಾರ ಎಂದಿನಂತೆ ಮಾರುಕಟ್ಟೆ ನಡೆಯಿತು.
ಸೋಮವಾರದ ಮಾರುಕಟ್ಟೆ ದರ