ನಿಮ್ಮಲ್ಲಿ 1ರೂ. ನೋಟು ಇದೆಯೇ? ಹಾಗಿದ್ದರೆ ಮನೆಯಲ್ಲಿ ಕುಳಿತೇ ₹45000 ಸಂಪಾದಿಸಿ!

ಹಳೆಯ ಒಂದು ರೂಪಾಯಿ ನೋಟುಗಳನ್ನು ರದ್ದುಗೊಳಿಸಿದ್ದರೂ, ಈ ನೋಟಿಗೆ ಭಾರೀ ಬೇಡಿಕೆ ಬಂದಿದೆ. ಕೇವಲ 1ರೂಪಾಯಿ ನೋಟಿನಿಂದ ಸಾವಿರಾರು ರೂಪಾಯಿ ಗಳಿಸಬಹುದು. ಇದು ಹೇಗೆ ಸಾಧ್ಯ ಎಂಬ ಪೂರ್ಣ ವಿವರ ಇಲ್ಲಿದೆ.

ನಿಮ್ಮಲ್ಲಿ 1ರೂ. ನೋಟು ಇದೆಯೇ? ಹಾಗಿದ್ದರೆ ಮನೆಯಲ್ಲಿ ಕುಳಿತೇ ₹45000 ಸಂಪಾದಿಸಿ!
Linkup
ಬೆಂಗಳೂರು: ಕೆಲವರಿಗೆ ಹಳೆಯ ನಾಣ್ಯ ಹಾಗೂ ಕರೆನ್ಸಿ ನೋಟುಗಳನ್ನು ಸಂಗ್ರಹಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ. ಪ್ರಸ್ತುತ ಹಣದ ಚಲಾವಣೆಗೆ ನಾಣ್ಯಗಳಿಗಿಂತಲೂ ಹೆಚ್ಚಾಗಿ ನೋಟುಗಳನ್ನು ಬಳಸಲಾಗುತ್ತಿದೆ. ಹಳೆಯ ಒಂದು ರೂಪಾಯಿ ನೋಟುಗಳನ್ನು ರದ್ದುಗೊಳಿಸಿ ಹಲವು ವರ್ಷಗಳೇ ಆಗಿವೆ. ಆದರೆ, ಇದೀಗ ಈ ಹಳೇ ಕಾಲದ ಒಂದು ರೂಪಾಯಿ ನೋಟಿಗೆ ಭಾರೀ ಬೇಡಿಕೆ ಬಂದಿದೆ. ಒಂದು ರೂಪಾಯಿ ನೋಟನ್ನು ಸರಕಾರ ರದ್ದುಗೊಳಿಸಿದ್ದರೂ, ಇದರ ಮೌಲ್ಯ ಸಾವಿರಾರು ರೂಪಾಯಿ ಹೆಚ್ಚಿದೆ. ಕೇವಲ ಒಂದು ರೂಪಾಯಿ ನೋಟನ್ನು ಮಾರುವ ಮೂಲಕ ಸಾವಿರಾರು ರೂಪಾಯಿ ಗಳಿಸಬಹುದಾದ ಸುವರ್ಣಾವಕಾಶವಿದೆ. ಹಾಗೆಂದು ಈ ನೋಟನ್ನು ಅಕ್ರಮವಾಗಿ ಮಾರಾಟ ಮಾಡುವ ಅಗತ್ಯವಿಲ್ಲ. ಆನ್‌ ಲೈನ್‌ ವೇದಿಕೆಯಲ್ಲಿ ಬರೋಬ್ಬರಿ 45 ಸಾವಿರ ರೂಪಾಯಿಗೆ ಮಾರಾಟ ಮಾಡಬಹುದು. ಆದರೆ, ನಿಮ್ಮ ಬಳಿ ಇರುವ ನೋಟು 1957ನೇ ಇಸವಿಯದ್ದಾಗಿರಬೇಕು. ಹಾಗೂ ಅಂದಿನ ಗವರ್ನರ್‌ ಆಗಿದ್ದ ಎಚ್‌.ಎಂ. ಪಟೇಲ್‌ ಅವರ ಸಹಿಯನ್ನು ಹೊಂದಿರಬೇಕು. ಅಲ್ಲದೆ ಆ ನೋಟಿನ ಸೀರಿಯಲ್‌ ನಂಬರ್‌ 123456 ಆಗಿರಬೇಕು. ನಿಮ್ಮ ಬಳಿ ಏನಾದರೂ ಈ ನೋಟು ಇದ್ದರೆ, ಅದನ್ನು ಕಾಯಿನ್‌ಬಜಾರ್‌ ವೆಬ್‌ಸೈಟ್ (coinbazzar website) ನಲ್ಲಿ ಮಾರಾಟ ಮಾಡಬಹುದು. ಈ ಒಂದು ರೂಪಾಯಿ ನೋಟಿನ ಮೂಲ ಬೆಲೆ 49,999 ರೂಪಾಯಿ ಇದೆ. ಆದರೆ ರಿಯಾಯಿತಿ ನಂತರ 44,999ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನೀವು ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಬಹುದು. ವೆಬ್‌ಸೈಟ್‌ನ shop ಸೆಕ್ಷನ್‌ಗೆ ಹೋಗಿ ಅಲ್ಲಿ 'ನೋಟ್‌ ಬಂಡಲ್‌' ಮೇಲೆ ಕ್ಲಿಕ್‌ ಮಾಡಿದರೆ ನಿಮಗೆ ಎಲ್ಲ ಮಾಹಿತಿ ಸಿಗುತ್ತದೆ. 26 ವರ್ಷಗಳ ಹಿಂದೆಯೇ ಭಾರತ ಸರಕಾರ ಒಂದು ರೂಪಾಯಿ ನೋಟುಗಳನ್ನು ರದ್ದು ಮಾಡಿತು. ಆದರೆ ಕೆಲವರ ಬಳಿ ಇಂದಿಗೂ ಒಂದು ರೂಪಾಯಿ ನೋಟುಗಳ ಸಂಗ್ರಹವಿದೆ. ನೋಟುಗಳ ಮಾರಾಟಕ್ಕೆ ಬಿಡ್‌ ಕರೆಯಲಾಗುತ್ತದೆ. ನಿಮಗೂ ಕೂಡ ಹಳೆಯ ನೋಟುಗಳ ಸಂಗ್ರಹ ಮಾಡಬೇಕಿದ್ದರೆ, ಇಲ್ಲಿ ಕೊಂಡುಕೊಳ್ಳಬಹುದು. ಈ ವೆಬ್‌ಸೈಟ್‌ನಲ್ಲಿ ಸ್ವಾತಂತ್ರ್ಯಪೂರ್ವದ ಅಂದರೆ, ಬ್ರಿಟಿಷ್‌ ಆಡಳಿತ ಕಾಲದ ಕರೆನ್ಸಿ ನೋಟುಗಳೂ ಲಭ್ಯವಿವೆ. ಬ್ರಿಟಿಷರ ಕಾಲದ ಒಂದು ನೋಟಿಗೆ 7 ಲಕ್ಷ ರೂಪಾಯಿವೆರೆಗೆ ಬಿಡ್‌ ಮಾಡಲಾಗಿದೆ. ನಿಮ್ಮ ಬಳಿಯೂ ಇಂತಹ ಹಳೇ ಕಾಲದ ನೋಟುಗಳಿದ್ದರೆ, ಈ ವೆಬ್ಸೈಟ್‌ಗೆ ಲಾಗಿನ್‌ ಆಗುವ ಮೂಲಕ ಮಾರಾಟ ಮಾಡಬಹುದು. ಈ ಮಾಲಕ ಸಾವಿರಾರು ಅಥವಾ ಲಕ್ಷಾಂತರ ರೂಪಾಯಿ ಗಳಿಸಬಹುದು.