ಅಫ್ಘಾನಿಸ್ತಾನದಿಂದ ಬಂದ 78 ಜನರ ಪೈಕಿ 16 ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್

ಅಫ್ಘಾನಿಸ್ತಾನದಿಂದ ಮಂಗಳವಾರ ಬೆಳಿಗ್ಗೆ ದಿಲ್ಲಿಗೆ ಕರೆತರಲಾದ 78 ಮಂದಿಯ ಪೈಕಿ 16 ಜನರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ. ಅವರಲ್ಲಿ ಯಾರೊಬ್ಬರಲ್ಲಿಯೂ ರೋಗ ಲಕ್ಷಣ ಕಂಡುಬಂದಿಲ್ಲ.

ಅಫ್ಘಾನಿಸ್ತಾನದಿಂದ ಬಂದ 78 ಜನರ ಪೈಕಿ 16 ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್
Linkup
ಹೊಸದಿಲ್ಲಿ: ಸಂಘರ್ಷಪೀಡಿತ ಅಫ್ಘಾನಿಸ್ತಾನದಿಂದ ಮಂಗಳವಾರ ಭಾರತಕ್ಕೆ ಕರೆತರಲಾದ 78 ಮಂದಿಯ ಪೈಕಿ 16 ಮಂದಿಯಲ್ಲಿ ಇರುವುದು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ 78 ಮಂದಿಯನ್ನು ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. ನೆಲದಿಂದ ರಕ್ಷಿಸಿ ಕರೆತಂದವರನ್ನು ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಂಗಳವಾರ ಪಾಸಿಟಿವ್ ದೃಢಪಟ್ಟ ಈ ಎಲ್ಲ 16 ಮಂದಿಯಲ್ಲಿಯೂ ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಕಾಬೂಲ್‌ನ ಗುರುದ್ವಾರದಿಂದ ಸಿಖ್ಖರ ಪವಿತ್ರ ಧಾರ್ಮಿಕ ಗ್ರಂಥಗಳನ್ನು ಹೊತ್ತು ತಂದ ಮೂವರು ಗ್ರಂಥಿಗಳಿಗೆ ಕೂಡ ಸೋಂಕು ತಗುಲಿದೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಿಗ್ಗೆ ಬಂದಿಳಿದ ಪವಿತ್ರ ಗ್ರಂಥಗಳ ಪ್ರತಿಗಳನ್ನು ಅವರಿಂದ ಪಡೆದುಕೊಂಡಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಅವುಗಳನ್ನು ತಮ್ಮ ತಲೆಯ ಮೇಲೆ ಇರಿಸಿಕೊಂಡು ನಡೆದಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಸೋಂಕಿತರೊಂದಿಗೆ ಅವರು ಪ್ರಾಥಮಿಕ ಸಂಪರ್ಕ ಹೊಂದಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದುರಾಕ್ರಮಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರಲು ಸರ್ಕಾರ ಪ್ರಯತ್ನಗಳನ್ನು ಚುರುಕುಗೊಳಿಸಿದೆ. ಭಾರತದ 228 ಪ್ರಜೆಗಳು ಸೇರಿದಂತೆ ಒಟ್ಟು 626 ಮಂದಿಯನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತಂದಿದೆ. ಇವರಲ್ಲಿ 77 ಮಂದಿ ಅಫ್ಘನ್ ಸಿಖ್ಖರಿದ್ದಾರೆ. ಹೀಗೆ ಸ್ಥಳಾಂತರವಾದ ಜನರ ಸಂಖ್ಯೆಯಲ್ಲಿ, ಭಾರತೀಯ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಸೇರಿಸಿಲ್ಲ ಎಂದು ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.