‘ಶಿವಸೇನೆ ನಮ್ಮ ಶತ್ರುವಲ್ಲ’; ಮತ್ತೆ ಹಳೇ ದೋಸ್ತಿಗಳ ಮೈತ್ರಿಗೆ ಪುಷ್ಠಿ ನೀಡಿದ ಫಡ್ನವೀಸ್ ಹೇಳಿಕೆ

‘ಶಿವಸೇನೆ ನಮ್ಮ ಶತ್ರುವಲ್ಲ. ಆ ಪಕ್ಷ ಕಳೆದ ಚುನಾವಣೆಯಲ್ಲಿ ನಮ್ಮ ಜತೆಗೆ ಸ್ಪರ್ಧಿಸಿತ್ತು. ಫಲಿತಾಂಶದ ಬಳಿಕ, ನಾವು ಯಾರ ವಿರುದ್ಧ ಸ್ಪರ್ಧಿಸಿದ್ದೆವೋ, ಅವರ ಜತೆಯೇ ಮುನ್ನಡೆಯಿತು. ರಾಜಕೀಯದಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಪರಿಸ್ಥಿತಿಗೆ ತಕ್ಕಹಾಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಶಿವಸೇನೆ ನಮ್ಮ ಶತ್ರುವಲ್ಲ’; ಮತ್ತೆ ಹಳೇ ದೋಸ್ತಿಗಳ ಮೈತ್ರಿಗೆ ಪುಷ್ಠಿ ನೀಡಿದ ಫಡ್ನವೀಸ್ ಹೇಳಿಕೆ
Linkup
ಮುಂಬಯಿ: ಮಹಾರಾಷ್ಟ್ರದಲ್ಲಿ ಹಾಗೂ ಶಿವಸೇನೆ ಮತ್ತೆ ಕೈ ಜೋಡಿಸುತ್ತವೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ‘ಶಿವಸೇನೆ ನಮ್ಮ ಶತ್ರುವಲ್ಲ’ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿರುವುದು ಮರುಮೈತ್ರಿ ಕುರಿತ ವದಂತಿಗೆ ಪುಷ್ಟಿ ನೀಡಿದೆ. ‘ಶಿವಸೇನೆ ನಮ್ಮ ಶತ್ರುವಲ್ಲ. ಆ ಪಕ್ಷ ಕಳೆದ ಚುನಾವಣೆಯಲ್ಲಿ ನಮ್ಮ ಜತೆಗೆ ಸ್ಪರ್ಧಿಸಿತ್ತು. ಫಲಿತಾಂಶದ ಬಳಿಕ, ನಾವು ಯಾರ ವಿರುದ್ಧ ಸ್ಪರ್ಧಿಸಿದ್ದೆವೋ, ಅವರ ಜತೆಯೇ ಮುನ್ನಡೆಯಿತು. ರಾಜಕೀಯದಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಪರಿಸ್ಥಿತಿಗೆ ತಕ್ಕಹಾಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಹೇಳಿದರು. ಮಹಾ ವಿಕಾಸ ಅಘಾಡಿಯಲ್ಲಿ ಭಿನ್ನಮತ, ಭ್ರಷ್ಟಾಚಾರ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಹಾಗೂ ಶಿವಸೇನೆ ಒಂದಾಗುತ್ತವೆ ಎಂಬ ಮಾತು ಕೇಳಿಬರುತ್ತಿವೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಹೊಸದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಶಿವಸೇನೆ ಸಹ ಬಿಜೆಪಿ ಕುರಿತು ಮೃದು ಧೋರಣೆ ಪ್ರದರ್ಶಿಸುತ್ತಿದೆ.