ಅಪ್ಪು ಕುರಿತ 'ಯಾರೋ ನೀನು' ಹಾಡನ್ನು ರಿಲೀಸ್ ಮಾಡಿದ ರಾಘವೇಂದ್ರ ರಾಜ್‌ಕುಮಾರ್‌

ಸಂಗೀತ ನಿರ್ದೇಶಕ ರಾಜ್ ಕಿಶೋರ್ ಅವರು ಸಂಗೀತ ಸಂಯೋಜಿಸಿರುವ ಪುನೀತ್ ರಾಜ್‌ಕುಮಾರ್ ಕುರಿತ 'ಯಾರೋ ನೀನು' ಹಾಡನ್ನು ರಾಘವೇಂದ್ರ ರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

ಅಪ್ಪು ಕುರಿತ 'ಯಾರೋ ನೀನು' ಹಾಡನ್ನು ರಿಲೀಸ್ ಮಾಡಿದ ರಾಘವೇಂದ್ರ ರಾಜ್‌ಕುಮಾರ್‌
Linkup
'ಪವರ್ ಸ್ಟಾರ್' ಅವರು ನಮ್ಮೆಲ್ಲರನ್ನು ಅಗಲಿ ಎರಡು ತಿಂಗಳುಗಳೇ ಕಳೆದಿವೆ. ಆದರೆ ಅವರಿಲ್ಲ ಎಂಬ ನೋವು ಇನ್ನೂ ಕಾಡುತ್ತಲೇ ಇದೆ. ಅಭಿಮಾನಿಗಳು ಇಂದಿಗೂ ಅವರನ್ನು ನೆನೆದು ಕಣ್ಣೀರಿಡುತ್ತಲೇ ಇದ್ದಾರೆ. ಈ ಮಧ್ಯೆ ಅವರ ಕುರಿತು ಹಾಡುಗಳನ್ನು ರಚಿಸಿ, ರಿಲೀಸ್ ಮಾಡಲಾಗುತ್ತಿದೆ. ಈಚೆಗೆ ರಾಜ್‌ ಕಿಶೋರ್ ಎಂಬುವವರು '' ಎಂಬ ಹಾಡನ್ನು ಸಿದ್ಧಪಡಿಸಿದ್ದಾರೆ. ಅದನ್ನು ರಾಘವೇಂದ್ರ ರಾಜ್‌ಕುಮಾರ್ ರಿಲೀಸ್ ಮಾಡಿದ್ದಾರೆ. ಆ ಹಾಡಿನ ಬಗ್ಗೆ ಇಲ್ಲಿದೆ ಮಾಹಿತಿ. ಇಂತಹ ದಿನವನ್ನು ನಾನು ಊಹಿಸಿರಲಿಲ್ಲ!'ನನಗೆ ಇಂಥದ್ದೊಂದು ದಿನ ಬರುತ್ತದೆ ಎಂದು ಊಹಿಸಿಯೂ ಇರಲಿಲ್ಲ‌. ಅಪ್ಪು ಇದ್ದಾಗ ಅವನ ಅನೇಕ ಚಿತ್ರಗಳ ಆಡಿಯೋವನ್ನು ನಾನು ರಿಲೀಸ್ ಮಾಡಿದ್ದೀನಿ. ಆಗ ನನಗೆ ಬರೀ ಅಪ್ಪು ಮಾತ್ರ ಕಾಣುತ್ತಿದ್ದ. ಈಗ ಬಿಡುಗಡೆ ಮಾಡಿರುವ ಹಾಡಿನಲ್ಲಿ ಅವನ ಕೋಟಿ ಕೋಟಿ ಅಭಿಮಾನಿಗಳು ಕಾಣುತ್ತಿದ್ದಾರೆ. ಈ ಹಾಡಿನಲ್ಲಿ ರಾಜ್ ಕಿಶೋರ್ ಅವರ ಸಾಹಿತ್ಯ-ಸಂಗೀತ ತುಂಬಾ ಚೆನ್ನಾಗಿದೆ. ಶಶಿಕುಮಾರ್ ಅದ್ಭುತವಾಗಿ ಹಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ಈ ಹಾಡಿನಲ್ಲಿ ಕಾಣಿಸುತ್ತಿದೆ . ಇದನ್ನು ನಾನು ಬಿಡುಗಡೆ ಅನ್ನುವುದಿಲ್ಲ, ಅರ್ಪಣೆ ಎನ್ನುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ' ಎಂದು ಹಾಡು ಬಿಡುಗಡೆ ಮಾಡಿ ಹಾರೈಸಿದರು ‌ರಾಘವೇಂದ್ರ ರಾಜ್‌ಕುಮಾರ್. ಕನ್ನಡದ ಸಾಕಷ್ಟು ಜನಪ್ರಿಯ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹಾಗೂ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ, ಬಂಗಾಳಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ 'ಡಾಟರ್ ಆಫ್ ಇಂಡಿಯಾ' ಚಿತ್ರಕ್ಕೆ ಸಂಗೀತ ನೀಡಿ, ನಿರ್ದೇಶಿಸುತ್ತಿರುವ ರಾಜ್ ಕಿಶೋರ್ ಈ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. 'ಒಬ್ಬ ನಾಯಕನ ಚಿತ್ರಕ್ಕೂ, ಹುಟ್ಟುಹಬ್ಬ ಅಥವಾ ಮತ್ತಾವುದೋ ಸಂದರ್ಭಕ್ಕೋ ಹಾಡು ಬರೆದು ಬಿಡುಗಡೆ ಮಾಡುವುದೇ ಬೇರೆ. ಈ ಸಂದರ್ಭ ಬೇರೆ. ಅವರ ಮನೆಯವರು, ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ದುಃಖ ಆಗುವುದು ಸಹಜ‌. ಆದರೆ ಬರೀ ಈ ಊರು, ಈ ದೇಶವಲ್ಲದೇ, ಹೊರದೇಶಗಳಲ್ಲೂ ಇವರ ಸಾವಿಗೆ ನಮ್ಮವರನ್ನೇ ಕಳೆದುಕೊಂಡಿದ್ದೀವಿ ಎಂದು ದುಃಖಿಸುತ್ತಿದ್ದಾರಲ್ಲಾ, ಇದೇ ನಾನು ಹಾಡು ಬರೆಯಲು ಪ್ರಮುಖ ಕಾರಣ. ಇದಕ್ಕೆ ಪ್ರೋತ್ಸಾಹ ನೀಡಿದ್ದ ನಿರ್ಮಾಪಕಿ ಭೈರವಿ ಅವರಿಗೆ, ಗಾಯಕ ಶಶಿಕುಮಾರ್ ಅವರಿಗೆ ಹಾಗೂ ಹಾಡು ಬಿಡುಗಡೆ ಮಾಡಿದ ರಾಘವೇಂದ್ರ ರಾಜಕುಮಾರ್ ಅವರಿಗೆ ಧನ್ಯವಾದ' ಎಂದರು ರಾಜ್ ಕಿಶೋರ್. 'ದೇವರಿಗಾಗಿ ನಾನು ಯಾವುದೇ ವ್ರತ ಮಾಡಿಲ್ಲ. ಆದರೆ ನಾನು ಅಪ್ಪು ಅವರಿಗಾಗಿ ಈ ಹಾಡನ್ನು ಹಾಡುವಾಗ ವ್ರತ ಆಚಿರಿಸಿ ಹಾಡಿದ್ದೀನಿ. ಅವರೇ ನನ್ನ ಪಾಲಿನ ದೇವರು ಎಂದರು ತಪ್ಪಾಗಲಾರದು. ಅವಕಾಶ ನೀಡಿದ ರಾಜ್ ಕಿಶೋರ್ ಹಾಗೂ ಭೈರವಿ ಅವರಿಗೆ ಅನಂತ ಧನ್ಯವಾದ' ಎಂದರು ಗಾಯಕ ಶಶಿಕುಮಾರ್. 'ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಅಪ್ಪು ಸರ್ ಅವರ ಸಾವಿನಿಂದ ಆಗುತ್ತಿರುವ ತಳಮಳ ಈ ಹಾಡನ್ನು ನಿರ್ಮಿಸಲು ಮುಖ್ಯ ಕಾರಣ. ಈ ಹಾಡು ನಿರ್ಮಾಣವಾಗಲು ಸಹಕಾರ ನೀಡಿದ ತಂಡಕ್ಕೆ ಹಾಗೂ ನೆರೆದಿರುವ ಗಣ್ಯರಿಗೆ ನನ್ನ ಧನ್ಯವಾದ' ಎಂದರು ನಿರ್ಮಾಪಕಿ ಭೈರವಿ.